Ricky Kej: ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಸಂಗೀತ ನಿರ್ದೇಶಕ ರಿಕಿ ಕೇಜ್

Grammy Award Nominations: ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ‘ಡಿವೈನ್ ಟೈಡ್ಸ್’ ಆಲ್ಬಂ ಪ್ರಶಸ್ತಿಗೆ ನಾಮಾಂಕಿತವಾಗಿದೆ.

Ricky Kej: ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಸಂಗೀತ ನಿರ್ದೇಶಕ ರಿಕಿ ಕೇಜ್
ರಿಕಿ ಕೇಜ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Dec 01, 2021 | 8:17 AM

ಬೆಂಗಳೂರು: ಭಾರತೀಯ ಸಂಗೀತ ನಿರ್ದೇಶಕ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಮಡಿದ್ದಾರೆ. 64 ನೇ ವರ್ಷದ ಗ್ರ್ಯಾಮಿ ಪ್ರಶಸ್ತಿಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗಿನ ಇತ್ತೀಚಿನ ಆಲ್ಬಂ ‘ಡಿವೈನ್ ಟೈಡ್ಸ್’ ಗಾಗಿ ರಿಕಿ ಮತ್ತೊಮ್ಮೆ ನಾಮನಿರ್ದೇಶನಗೊಂಡಿದ್ದಾರೆ. ನಾಮನಿರ್ದೇಶನಗಳನ್ನು ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಿಸಿದ್ದಾರೆ. ರಿಕಿ ಕೇಜ್ ಈ ಹಿಂದೆ ತಮ್ಮ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ 2015 ರಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ರೂಪುಗೊಂಡಿತ್ತು. ಅಮೇರಿಕಾದ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿತು.ಈ ಹೆಗ್ಗಳಿಕೆ ಪಡೆದ ಭಾರತದ ಮೊದಲ ಸಂಗೀತ ನಿರ್ದೇಶಕ ರಿಕಿ ಕೇಜ್. ಹಾಗೆಯೇ ರಿಕಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯರಾಗಿದ್ದಾರೆ ಹಾಗೂ ಕೇವಲ 4 ನೇ ಭಾರತೀಯರಾಗಿದ್ದಾರೆ. ರಿಕಿ ಕೇಜ್ ಅವರು ಅಧಿಕೃತ UNICEF “ಸೆಲೆಬ್ರಿಟಿ ಸಪೋರ್ಟರ್”, UNCCD ‘ಲ್ಯಾಂಡ್ ಅಂಬಾಸಿಡರ್’ ಮತ್ತು UNESCO MGIEPನ ಜಾಗತಿಕ ರಾಯಭಾರಿಯಾಗಿದ್ದಾರೆ.

Ricky Kej

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೆಲದ ನಿಸರ್ಗದ ವೈಭವವನ್ನು ಕಟ್ಟಿಕೊಟ್ಟಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ಈ ಆಲ್ಬಂನಲ್ಲಿ 9 ಹಾಡುಗಳು ಮತ್ತು 8 ಸಂಗೀತ ವಿಡಿಯೋಗಳಿವೆ. ಇದನ್ನು ಹಿಮಾಲಯದಿಂದ ಹಿಡಿದು ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ.

ರಿಕಿ ಈ ಕುರಿತು ಮಾತನಾಡಿದ್ದು, “ನಮ್ಮ ಆಲ್ಬಮ್ ‘ಡಿವೈನ್ ಟೈಡ್ಸ್’ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ದೊಡ್ಡ ಗೌರವವಾಗಿದೆ. ನನ್ನ ಸಂಗೀತವು ಹಲವು ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ ಅದು ಮೂಲವಾಗಿ ಭಾರತೀಯ ಬೇರುಗಳನ್ನೇ ಹೊಂದಿದೆ. ನಾಮನಿರ್ದೇಶನವಾಗಿರುವುದಕ್ಕೆ ಹೆಮ್ಮೆ ಇದೆ. ಇದು ಮುಂದಿನ ಕೆಲಸಗಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ. ‘ಡಿವೈನ್ ಟೈಡ್ಸ್​​’ ಅನ್ನು ಸಾಧ್ಯವಾಗಿಸಿದ ಸಹಯೋಗಿ ಸ್ಟೀವರ್ಟ್ ಕೋಪ್ಲ್ಯಾಂಡ್, ಮತ್ತು ಎಲ್ಲಾ ಸಹ ಕಲಾವಿದರಿಗೆ ಧನ್ಯವಾದಗಳು’’ ಎಂದು ರಿಕಿ ಹೇಳಿದ್ದಾರೆ.

ರಿಕಿ ಕೇಜ್ ಸಂಗೀತ ನೀಡಿದ್ದ ‘ವೈಲ್ಡ್ ಕರ್ನಾಟಕ’ ಇತ್ತೀಚೆಗೆ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿತ್ತು. ಅವರು ಸ್ಯಾಂಡಲ್​ವುಡ್​ನ ಕೆಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:

ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು! ಮುಂದೇನಾದರು?

ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

Published On - 8:12 am, Wed, 1 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್