ಪುನೀತ್ ರಾಜ್ಕುಮಾರ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಅಪ್ಪು ಇಲ್ಲದೆ ಮಂಕಾಗಿದೆ ಈ ದಿನ
ಪುನೀತ್ ರಾಜ್ಕುಮಾರ್ ಅವರು 1999 ಡಿಸೆಂಬರ್ ಒಂದರಂದು ಮದುವೆ ಆದರು. ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ಅವರನ್ನು ವರಿಸಿದರು. ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು.
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಪುನೀತ್ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ. ಆದರೆ, ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಇಡೀ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಗಿತ್ತು. ಇಂದು (ಡಿಸೆಂಬರ್ 1) ಪುನೀತ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ.
ಪುನೀತ್ ರಾಜ್ಕುಮಾರ್ ಅವರು 1999 ಡಿಸೆಂಬರ್ ಒಂದರಂದು ಮದುವೆ ಆದರು. ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ಅವರನ್ನು ವರಿಸಿದರು. ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಮದುವೆ ಆದರು. ಈ ದಂಪತಿಗೆ ಧೃತಿ ಹಾಗೂ ವಂದಿತಾ ಹೆಸರಿನ ಮಕ್ಕಳಿದ್ದಾರೆ.
ಈ ವಿಶೇಷ ದಿನವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರು ನಮ್ಮ ಜತೆ ಇರಬೇಕಿತ್ತು ಎಂದು ಪರಿತಪಿಸುತ್ತಿದ್ದಾರೆ. ಪುನೀತ್ ಇಲ್ಲದೆ ಬದುಕುವುದು ಅಶ್ವಿನಿ ಅವರಿಗೆ ಕಷ್ಟವಾಗುತ್ತಿದೆ. ಅವರ ಕಣ್ಣೀರು ಇನ್ನೂ ಕಡಿಮೆ ಆಗಿಲ್ಲ. ಪುನೀತ್ ಇಲ್ಲದೆ ಬದುಕುವುದನ್ನು ಕಲಿಯಬೇಕಿದೆ. ಇಂದು ಅಶ್ವಿನಿ ಅವರಿಗೆ ವಿಶೇಷ ದಿನವಾಗಬೇಕಿತ್ತು. ಆದರೆ, ಪುನೀತ್ ಇಲ್ಲದೆ ಆ್ಯನಿವರ್ಸರಿ ಮಂಕಾಗಿದೆ.
22nd Anniversary ❤ @PuneethRajkumar @ashwinipuneet#PuneethRajkumar #AshwiniPuneethRajkumar #AppuSir #AshwiniMadam #Appu #AppuBoss pic.twitter.com/hdSG7oUkqH
— Puneeth Rajkumar Online® (@PowerStarPunith) December 1, 2021
ಪ್ರತಿ ವರ್ಷ ಮಾರ್ಚ್ 8ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 2019ರ ಮಹಿಳಾ ದಿನಾಚರಣೆಯ ಅಂಗವಾಗಿ ಪುನೀತ್ ಪತ್ನಿಗೆ ಕಾರನ್ನು ನೀಡಿದ್ದರು. ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಉರುಸ್ ಟ್ವಿನ್ ಟರ್ಬೋ ಇಂಜಿನ್ ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 3.6 ಸೆಕೆಂಡ್ಗಳಲ್ಲಿ ತಲುಪುತ್ತದೆ. ಗರಿಷ್ಠ 305 ಕಿ.ಮೀ ವೇಗದಲ್ಲಿ ಈ ಎಸ್ಯುವಿ ಚಲಿಸಬಲ್ಲದು.
ಇದನ್ನೂ ಓದಿ: ಪತ್ನಿ ಅಶ್ವಿನಿಗೆ ಪ್ರೀತಿಯಿಂದ 4 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದ ಪುನೀತ್ ರಾಜ್ಕುಮಾರ್
Published On - 1:36 pm, Wed, 1 December 21