‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ಭಟ್​ ಕಾಣಿಸಿಕೊಳ್ಳೋದು ಕೇವಲ ಇಷ್ಟು ನಿಮಿಷನಾ?

‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ಭಟ್​ ಕಾಣಿಸಿಕೊಳ್ಳೋದು ಕೇವಲ ಇಷ್ಟು ನಿಮಿಷನಾ?

ನಟಿ ಆಲಿಯಾ ಭಟ್​ ಈ ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ದಿನ ಕೇವಲ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಈಗ ಅಭಿಮಾನಿಗಳು ದಕ್ಷಿಣ ಭಾರತದ ಸಿನಿಮಾದಲ್ಲೂ ಕಣ್ತುಂಬಿಕೊಳ್ಳೋಕೆ ಕಾತುರರಾಗಿದ್ದಾರೆ.

TV9kannada Web Team

| Edited By: Rajesh Duggumane

Nov 27, 2021 | 2:03 PM

‘ಆರ್​ಆರ್​ಆರ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೊಡ್ಡ ಬಜೆಟ್​ನ ಚಿತ್ರ ಅನ್ನೋ ವಿಚಾರ ಒಂದು ಕಡೆಯಾದರೆ, ಈ ಸಿನಿಮಾದಲ್ಲಿ ಸ್ಟಾರ್​ ಪಾತ್ರವರ್ಗವಿದೆ ಅನ್ನೋದು ಮತ್ತೊಂದು ಕಡೆ. ರಾಜಮೌಳಿ ಈ ಚಿತ್ರವನ್ನು ತುಂಬಾನೇ ಕಾಳಜಿಯಿಂದ ಮಾಡಿದ್ದಾರೆ ಎಂಬುದಕ್ಕೆ ಚಿತ್ರದ ಟೀಸರ್​ ಹಾಗೂ ಪೋಸ್ಟರ್​ಗಳು ಸಾಕ್ಷ್ಯ ನೀಡಿವೆ. ಡಿಸೆಂಬರ್​ ತಿಂಗಳಲ್ಲಿ ಪ್ರಚಾರ ಕಾರ್ಯ ಆರಂಭಿಸೋಕೆ ಚಿತ್ರತಂಡ ನಿರ್ಧರಿಸಿದೆ. ಭಾರತದ ಪ್ರಮುಖ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಿ-ರಿಲೀಸ್​ ಇವೆಂಟ್​ ನಡೆಸೋ ಆಲೋಚನೆಯನ್ನು ಚಿತ್ರತಂಡ ಹೊಂದಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳು ಕೇಳಿ ಬರುತ್ತಿವೆ. ಚಿತ್ರದ ನಾಯಕಿ ಆಲಿಯಾ ಭಟ್​ ಬಗ್ಗೆ ಹೊಸದೊಂದು ಸುದ್ದಿ ಹರಿದಾಡಿದೆ. ಅವರು ಪರದೆಯಮೇಲೆ ಕೇವಲ 15 ನಿಮಿಷ ಕಾಣಿಸಿಕೊಳ್ಳುತ್ತಾರೆ ಎಂದು ವರದಿ ಆಗಿದೆ.

ನಟಿ ಆಲಿಯಾ ಭಟ್​ ಈ ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ದಿನ ಕೇವಲ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಈಗ ಅಭಿಮಾನಿಗಳು ದಕ್ಷಿಣ ಭಾರತದ ಸಿನಿಮಾದಲ್ಲೂ ಕಣ್ತುಂಬಿಕೊಳ್ಳೋಕೆ ಕಾತುರರಾಗಿದ್ದಾರೆ. ಸೀತಾ ಅನ್ನೋ ಪಾತ್ರವನ್ನು ಆಲಿಯಾ ಭಟ್​ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರದ ಅವಧಿ ಕೇವಲ 15 ನಿಮಿಷ ಇದೆ ಅನ್ನೋ ವಿಚಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಮೌಳಿ ಸಿನಿಮಾ ಎಂದರೆ ಅಲ್ಲಿ ಬರುವ ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಚಿಕ್ಕ ವಿಚಾರಗಳನ್ನು ದೊಡ್ಡ ಮಟ್ಟದಲ್ಲಿ ಹೈಲೈಟ್​ ಮಾಡೋ ತಾಕತ್ತು ರಾಜಮೌಳಿಗೆ ಇದೆ. ಅವರ ಈ ಹಿಂದಿನ ಸಿನಿಮಾ ಮೂಲಕ ಅದು ಸಾಬೀತಾಗಿದೆ ಕೂಡ. ಈಗ ಆಲಿಯಾ ಇಷ್ಟು ಕಡಿಮೆ ಸಮಯ ಪರದೆಮೇಲೆ ಕಾಣಿಸಿಕೊಂಡರೂ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್​ಆರ್​ಆರ್​ ಚಿತ್ರದ ‘ಜನನಿ..’ ಹಾಡನ್ನು ಬಿಡುಗಡೆ ಮಾಡೋಕೆ ರಾಜಮೌಳಿ ಅವರು ಶುಕ್ರವಾರ (ನವೆಂಬರ್​ 26) ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಕರ್ನಾಟಕದಲ್ಲಿ ಗ್ರ್ಯಾಂಡ್​ ಇವೆಂಟ್​ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ರಾಮ್​ ಚರಣ್​, ಜ್ಯೂ.ಎನ್​ಟಿಆರ್​, ಅಜಯ್​ ದೇವಗನ್​ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಸಖತ್​’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ‌ ಸಿಂಪಲ್ ಸುನಿ‌

ಸಂಗೀತ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ ಭಟ್​; ಲೀಕ್​​ ಆಯ್ತು ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada