ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್​ ಆಯ್ತು ಜಾನ್ವಿ ಕಪೂರ್​ ಜಗಳದ ವಿಡಿಯೋ

ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್​ ಆಯ್ತು ಜಾನ್ವಿ ಕಪೂರ್​ ಜಗಳದ ವಿಡಿಯೋ
ಜಾನ್ವಿ ಕಪೂರ್

Janhvi Kapoor: ಈ ವಿಡಿಯೋದಲ್ಲಿ ಜಾನ್ವಿ ಕಪೂರ್​ ಅವರ ನಟನೆ ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ ರೀತಿಯ ಬಜಾರಿ ಪಾತ್ರಗಳಿಗೆ ಅವರು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Nov 28, 2021 | 1:04 PM

ಖ್ಯಾತ ನಟಿ ಶ್ರೀದೇವಿ ಅವರ ಪುತ್ರ ಜಾನ್ವಿ ಕಪೂರ್ (Janhvi Kapoor) ಚಿತ್ರರಂಗದಲ್ಲಿ ಇನ್ನೂ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. 2018ರಲ್ಲಿ ‘ಧಡಕ್​’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗ ಹಲವು ಪ್ರಾಜೆಕ್ಟ್​ಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲೂ ಅವರು ಹೆಚ್ಚು ಮಿಂಚುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್​ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ರೀಲ್ಸ್​ (Instagram Reels) ಮಾಡುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಸದ್ಯ 1.4 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ಒಂದು ವಿಡಿಯೋ ಮೂಲಕ ಜಾನ್ವಿ ಅಚ್ಚರಿಗೊಳಿಸಿದ್ದಾರೆ. ಅವರು ಹಂಚಿಕೊಂಡಿರುವ ಬಜಾರಿತನದ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಕಳೆದ ಕೆಲವು ದಿನಗಳಿಂದ ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ಫೇಮಸ್​ ಆಗುತ್ತಿದೆ. ಅದು ಹಿಂದಿ ಬಿಗ್​ ಬಾಸ್​ 5ನೇ ಸೀಸನ್​ ವಿಡಿಯೋ. ಆ ಸೀಸನ್​ನಲ್ಲಿ ನಟಿ ಪೂಜಾ ಮಿಶ್ರಾ ಅವರು ಸಿಕ್ಕಾಪಟ್ಟೆ ವೈಲ್ಡ್​ ಆಗಿದ್ದರು. ಬೇಕು ಬೇಕಂತಲೇ ಎಲ್ಲ ಸ್ಪರ್ಧಿಗಳ ಜೊತೆ ಕಾಲು ಕೆರೆದುಕೊಂಡು ಜಗಳ ಮಾಡುತ್ತಿದ್ದರು. ಅವರು ಮಾಡಿದ್ದ ಜಗಳದ ಒಂದು ವಿಡಿಯೋವನ್ನೇ ಇಟ್ಟುಕೊಂಡು ನೆಟ್ಟಿಗರು ಈಗ ರೀಲ್ಸ್​ ಮಾಡುತ್ತಿದ್ದಾರೆ. ಆ ಟ್ರೆಂಡ್​ಗೆ ಜಾನ್ವಿ ಕಪೂರ್​ ಕೂಡ ಕೈ ಜೋಡಿಸಿದ್ದಾರೆ.

ಈ ವಿಡಿಯೋದಲ್ಲಿ ಜಾನ್ವಿ ಕಪೂರ್​ ಅವರ ನಟನೆ ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ ರೀತಿಯ ಬಜಾರಿ ಪಾತ್ರಗಳಿಗೆ ಅವರು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಜಾನ್ವಿ ಅವರು ಇದೇ ಮೊದಲ ಬಾರಿಗೆ ತಂದೆ ಬೋನಿ ಕಪೂರ್​ ನಿರ್ಮಾಣದ ‘ಮಿಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಅವರಿಗೆ ಸಖತ್​ ಖುಷಿ ಇದೆ. ಇತ್ತೀಚೆಗೆ ‘ಮಿಲಿ’ ಚಿತ್ರದ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದರು.

‘ಮಿಲಿ ಚಿತ್ರೀಕರಣ ಮುಗಿಯಿತು. ನಾವು ನಿಮಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇವೆ ಅಪ್ಪ. ಈ ಪಯಣಕ್ಕಾಗಿ ಧನ್ಯವಾದಗಳು’ ಎಂದು ಜಾನ್ವಿ ಬರೆದುಕೊಂಡಿದ್ದರು. ಇತ್ತೀಚೆಗೆ ಅವರು ಗ್ಲಾಮರ್​ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಕಲರ್​ಫುಲ್​ ಫೋಟೋಗಳು ವೈರಲ್​ ಆಗುತ್ತಿವೆ. ಪ್ರವಾಸ ಎಂದರೆ ಜಾನ್ವಿಗೆ ತುಂಬ ಇಷ್ಟ. ಬಿಡುವಿನ ಸಮಯದಲ್ಲಿ ಅವರು ದೇಶ-ವಿದೇಶ ಸುತ್ತುತ್ತಾರೆ.

ಇದನ್ನೂ ಓದಿ:

ಚಿತ್ರಮಂದಿರದಲ್ಲಿ ಸಲ್ಲು ಫ್ಯಾನ್ಸ್​ ಹುಚ್ಚು ಕೆಲಸ; ‘ಥಿಯೇಟರ್​ಗೆ ಬೆಂಕಿ ಬೀಳತ್ತೆ ಹುಷಾರ್​’ ಎಂದ ಸ್ಟಾರ್ ನಟ​

ಯಾವ ಖಾನ್​ಗೂ ಕಮ್ಮಿ ಇಲ್ಲ ಅಕ್ಷಯ್​ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’

Follow us on

Related Stories

Most Read Stories

Click on your DTH Provider to Add TV9 Kannada