ಸಂಗೀತ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ ಭಟ್​; ಲೀಕ್​​ ಆಯ್ತು ವಿಡಿಯೋ

TV9 Digital Desk

| Edited By: Rajesh Duggumane

Updated on: Nov 21, 2021 | 2:52 PM

ನಟಿ ಹಾಗೂ ಮಾಡೆಲ್​ ಅನುಷ್ಕಾ ರಂಜನ್​ ಹಾಗೂ ಆದಿತ್ಯ ಸೀಲ್​ ಇಂದು (ನವೆಂಬರ್​ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್​ 20) ಸಂಗೀತ ಕಾರ್ಯಕ್ರಮ ನಡೆದಿದೆ.

ಸಂಗೀತ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ ಭಟ್​; ಲೀಕ್​​ ಆಯ್ತು ವಿಡಿಯೋ
ಆಲಿಯಾ ಭಟ್​

ನಟಿ ಆಲಿಯಾ ಭಟ್​ ನಟನೆ ಮಾತ್ರವಲ್ಲದೆ ಡ್ಯಾನ್ಸ್​ನಲ್ಲೂ ಎತ್ತಿದ ಕೈ. ಅವರ ಮೊದಲ ಸಿನಿಮಾ ‘ಸ್ಟೂಡೆಂಟ್​ ಆಫ್​ ದಿ ಇಯರ್​’ ಚಿತ್ರದಲ್ಲಿ ಭರ್ಜರಿಯಾಗಿ ಡ್ಯಾನ್ಸ್​ ಮಾಡಿ ಗಮನ ಸೆಳೆದಿದ್ದರು. ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ಆಲಿಯಾ ಸ್ಟೆಪ್​ ಹಾಕಿದ್ದಾರೆ. ಇದರ ಜತೆಗೆ ಸಾಕಷ್ಟು ಮದುವೆ ಸಮಾರಂಭದಲ್ಲೂ ಆಲಿಯಾ ಹೆಜ್ಜೆ ಹಾಕಿದ ಉದಾಹರಣೆ ಇದೆ. ಈಗ ಅವರು ಮದುವೆ ಸಮಾರಂಭದ ಸಂಗೀತ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್​ ಮಾಡುತ್ತಲೇ ಸನ್​ಗ್ಲಾಸ್​ ತೆಗೆದು ಎಸೆದಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ನಟಿ ಹಾಗೂ ಮಾಡೆಲ್​ ಅನುಷ್ಕಾ ರಂಜನ್​ ಹಾಗೂ ಆದಿತ್ಯ ಸೀಲ್​ ಇಂದು (ನವೆಂಬರ್​ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್​ 20) ಸಂಗೀತ ಕಾರ್ಯಕ್ರಮ ನಡೆದಿದೆ. ಈ ವೇಳೆ ಆಲಿಯಾ ಭಟ್​ ಕೂಡ ಹಾಜರಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ. ಕೆಲ ಟಾಪ್​ ಹಿಟ್​​ ಹಾಡುಗಳನ್ನು ಕಾರ್ಯಕ್ರಮದಲ್ಲಿ ಪ್ಲೇ ಮಾಡಲಾಗುತ್ತಿತ್ತು. ಆಲಿಯಾ ಭರ್ಜರಿಯಾಗಿ ಸ್ಟೆಪ್​ ಹಾಕಿದ್ದಾರೆ. ಈ ವೇಳೆ ಆಲಿಯಾ ಡ್ಯಾನ್ಸ್​ ಮಾಡುತ್ತಲೇ ಕಣ್ಣಿಗೆ ಹಾಕಿಕೊಂಡಿದ್ದ ಗ್ಲಾಸ್​ಅನ್ನು ತೆಗೆದು ಎಸೆದಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ.

ಸಂಗೀತ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್​, ಆಲಿಯಾ ಭಟ್​ ಮೊದಲಾದವರು ಹಾಜರಿ ಹಾಕಿದ್ದರು. ಕುಟುಂಬದವರು ಹಾಗೂ ಆಪ್ತರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅನುಷ್ಕಾ ರಂಜನ್​ ಹಾಗೂ ಆದಿತ್ಯ ಸೀಲ್ ಅನೇಕ ವರ್ಷಗಳ ಕಾಲ ರಿಲೇಶನ್​ಶಿಪ್​ನಲ್ಲಿದ್ದರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ.

ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್​ ಕಪೂರ್​ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಈ ವರ್ಷ ಡಿಸೆಂಬರ್​ನಲ್ಲಿ ಈ ಜೋಡಿ ಹಸೆಮಣೆ ಏರಿಲಿದೆ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ಆಲಿಯಾ ಮತ್ತು ರಣಬೀರ್​ ಮದುವೆ ದಿನಾಂಕ ಮುಂದೂಡಿಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಆಲಿಯಾ ಮಿಂಚುತ್ತಿದ್ದಾರೆ. ಅವರ ಕೈಯಲ್ಲಿ ಹಲವು ಆಫರ್​ಗಳಿವೆ. ಅನೇಕ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅತ್ತ, ರಣಬೀರ್​ ಕಪೂರ್​ ಕೂಡ ಈಗಾಗಲೇ ಹಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡು ಕಾರ್ಯನಿರತರಾಗಿದ್ದಾರೆ. ಒಪ್ಪಿಕೊಂಡಿರುವ ಎಲ್ಲ ಸಿನಿಮಾಗಳ ಕೆಲಸಗಳನ್ನು ಮುಗಿಸಲು ಈ ಜೋಡಿಗೆ ಸ್ವಲ್ಪ ಸಮಯ ಹಿಡಿಯಲಿದೆ. ಹಾಗಾಗಿ ಈ ವರ್ಷ ಡಿಸೆಂಬರ್​ ಬದಲಿಗೆ, 2022ರ ಏಪ್ರಿಲ್​​ ತಿಂಗಳಲ್ಲಿ ಸಪ್ತಪದಿ ತುಳಿಯಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nykaa IPO: ಅಬ್ಬಬ್ಬಾ.. ನೈಕಾ ಕಂಪನಿಯಲ್ಲಿ ಹೂಡಿಕೆ ಮಾಡಿ ಕತ್ರಿನಾ ಕೈಫ್​ ಮತ್ತು ಆಲಿಯಾ ಭಟ್​ ಗಳಿಸಿದ್ದು ಇಷ್ಟೊಂದಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada