ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಗೋವಿಂದ್​; ಫ್ಯಾನ್ಸ್ ಮಾಡಿದ ತಪ್ಪೇನು?

ಗೋವಿಂದ ಹೆಸರಲ್ಲಿ ಕೆಲ ಅಭಿಮಾನಿಗಳು ವಂಚನೆಗೆ ಇಳಿದಿದ್ದಾರೆ. ಇದು ಗೋವಿಂದ ಅವರ ಗಮನಕ್ಕೂ ಬಂದಿದೆ. ಇದನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಗೋವಿಂದ್​; ಫ್ಯಾನ್ಸ್ ಮಾಡಿದ ತಪ್ಪೇನು?
ಗೋವಿಂದ

90ರ ದಶಕದಲ್ಲಿ ಗೋವಿಂದ​ ಬಾಲಿವುಡ್​ನಲ್ಲಿ ಬೇಡಿಕೆಯ ನಟರಾಗಿದ್ದರು. ಅವರ ಸಿನಿಮಾಗಳು ಹೊಟ್ಟೆ ಹುಣ್ಣಾಗಿಸುವ ರೀತಿಯಲ್ಲಿ ಪ್ರೇಕ್ಷಕರನ್ನು ನಗಿಸುತ್ತಿತ್ತು. ಹೀಗಾಗಿ, ನಿರ್ಮಾಪಕರ ಪಾಲಿಗೆ ಗೋವಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದರು. ಆದರೆ, ಬರು ಬರುತ್ತಾ ಗೋವಿಂದ ನಟನೆಯಿಂದ ದೂರ ಉಳಿದರು. ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಗೋವಿಂದ ಓಪನ್​ ಆಗಿಯೇ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಿದೆ. ಆದರೆ, ಯಾವ ನಿರ್ಮಾಪಕರೂ ಅವರ ಬೇಸರ ಕೇಳಲು ಮುಂದೆ ಬಂದಿಲ್ಲ. ಈ ಮಧ್ಯೆ ಗೋವಿಂದ ಹೆಸರಲ್ಲಿ ಕೆಲ ಅಭಿಮಾನಿಗಳು ವಂಚನೆಗೆ ಇಳಿದಿದ್ದಾರೆ. ಇದು ಗೋವಿಂದ ಅವರ ಗಮನಕ್ಕೂ ಬಂದಿದೆ. ಇದನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಗೋವಿಂದ ಅವರ ಹೆಸರಲ್ಲಿ ಜಾಹೀರಾತು ಒಂದನ್ನು ಪ್ರಕಟಿಸಲಾಗಿದೆ. ಈ ಜಾಹೀರಾತಿನಲ್ಲಿ ಲಖನೌನಲ್ಲಿ ಡಿಸೆಂಬರ್​ 20ರಂದು ಕಾರ್ಯಕ್ರಮ ಒಂದನ್ನು ಏರ್ಪಡಿಸಲಾಗಿತ್ತು. ಈ ಜಾಹೀರಾತಿನಲ್ಲಿ ‘ಗೋವಿಂದ ಅವರನ್ನು ನೀವು ಭೇಟಿ ಮಾಡಬಹುದು. ಅವರ ಜತೆ ಊಟ ಕೂಡ ಮಾಡಬಹುದು. ಟಿಕೆಟ್​ಗಳನ್ನು ನೀವು ಬುಕ್​ ಮಾಡಿ’ ಎಂದು ಉಲ್ಲೇಖಿಸಲಾಗಿತ್ತು. ಈ ಜಾಹೀರಾತನ್ನು ಗೋವಿಂದ ಪೋಸ್ಟ್​ ಮಾಡಿದ್ದಾರೆ. ‘ಇದೆಲ್ಲವೂ ಫೇಕ್​ ನ್ಯೂಸ್​. ನಂಬಬೇಡಿ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗೋವಿಂದ ಅವರು ಇತ್ತೀಚೆಗೆ ಹಾಡಿನ ಜತೆ ಬಂದಿದ್ದರು. ಅದನ್ನು ಅವರು ಬರೆದು ಹಾಡಿದ್ದರು. ‘ಟಿಪ್ ಟಿಪ್ ಪಾನಿ ಬರ್ಸಾ’ ಶೀರ್ಷಿಕೆಯ ಅಡಿಯಲ್ಲಿ ವಿಡಿಯೋ ಮೂಡಿ ಬಂದಿತ್ತು.

ಖಾಸಗಿ ಮಾಧ್ಯಮವೊಂದಕ್ಕೆ ಗೋವಿಂದ ಇತ್ತೀಚೆಗೆ ಸಂದರ್ಶನ ನೀಡಿದ್ದರು. ಸಿನಿಮಾ ರಂಗ ತೊರೆದ ನಂತರ ಗೋವಿಂದ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದಾರೆಯೇ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ಹಳೆಯ ಗೋವಿಂದ ಧರ್ಮನಿಷ್ಠೆ ಉಳ್ಳವನಾಗಿದ್ದ. ಆದರೆ ಈ ಗೋವಿಂದ ಭ್ರಷ್ಟನಾಗಿದ್ದಾನೆ. ನಾನು ಪಾರ್ಟಿ ಮಾಡುತ್ತೇನೆ. ಧೂಮಪಾನ- ಕುಡಿತ ಹೆಚ್ಚಾಗಿದೆ. ನಾನು ಮೊದಲೆಲ್ಲ ಭಾವುಕನಾಗುತ್ತಿದೆ. ಆದರೆ, ಈಗ ಭಾವುಕನಾಗುವುದೇ ಇಲ್ಲ’ ಎಂದಿದ್ದರು.

ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ

Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?

Click on your DTH Provider to Add TV9 Kannada