‘ಸಖತ್’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ ಸಿಂಪಲ್ ಸುನಿ
ಅಂಧ ಸಮುದಾಯಕ್ಕೆ ನಿರ್ದೇಶಕ ಸುನಿ ಸಿನಿಮಾ ತೋರುಸುತ್ತಿದ್ದಾರೆ. ಇದರ ಜತೆ ಆ ಸಮುದಾಯಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿದ್ದಾರೆ. ‘ಸಿನಿಮಾ ನೋಡಿದ ಮೇಲೆ ಹೇಳುವ ತಪ್ಪುಗಳನ್ನ ತಿದ್ದುಕೊಳ್ಳುವುದಾಗಿ’ ಸುನಿ ಪತ್ರದಲ್ಲಿ ತಿಳಿಸಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಎರಡನೇ ಬಾರಿಗೆ ಒಂದಾಗಿದ್ದಾರೆ. ‘ಚಮಕ್’ ಮೂಲಕ ಹಿಟ್ ಎನಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತೆಯೇ ಸಿನಿಮಾವನ್ನು ಎಂಟರ್ಟೇನಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ ಸುನಿ. ಆದರೆ, ಒಂದು ವಿಚಾರದಲ್ಲಿ ಎಡವಟ್ಟು ನಡೆದು ಹೋಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಅಂಧರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
ಕಣ್ಣು ಕಾಣದವರಿಗೆ ಕುರುಡರು ಎನ್ನುವ ಶಬ್ದ ಬಳಕೆ ಮಾಡಬಾರದು. ಈ ಕಾರಣಕ್ಕೆ ‘ಸಖತ್’ ಸಿನಿಮಾಗೆ ಸ್ಟೇ ತರಲು ಅಂಧ ಸಮುದಾಯದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂಧ ಸಮುದಾಯಕ್ಕೆ ನಿರ್ದೇಶಕ ಸುನಿ ಸಿನಿಮಾ ತೋರಿಸುತ್ತಿದ್ದಾರೆ. ಇದರ ಜತೆ ಆ ಸಮುದಾಯಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿದ್ದಾರೆ. ‘ಸಿನಿಮಾ ನೋಡಿದ ಮೇಲೆ ಹೇಳುವ ತಪ್ಪುಗಳನ್ನ ತಿದ್ದುಕೊಳ್ಳುವುದಾಗಿ’ ಸುನಿ ಪತ್ರದಲ್ಲಿ ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಇತ್ತೀಚೆಗೆ ನಿಧನ ಹೊಂದಿದ್ದರು. ಅವರ ನಿಧನದ ನಂತರ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು. ಇದರಿಂದ ಒಂದಷ್ಟು ಅಂಧರ ಬಾಳಲ್ಲಿ ಬೆಳಕು ಮೂಡಿತ್ತು. ಇದರಿಂದ ಸಾಕಷ್ಟು ಜನರು ಕಣ್ಣುಗಳನ್ನು ದಾನ ಮಾಡೋಕೆ ಮುಂದೆ ಬಂದಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಹಾಗೂ ನಟ ಗಣೇಶ್ ಕಾಂಬಿನೇಷನ್ನಲ್ಲಿ ಮೂಡಿಬಂದ ಎರಡನೇ ಚಿತ್ರ ‘ಸಖತ್’ ಕೂಡ ಇದೇ ಸಂದೇಶದೊಂದಿಗೆ ಬಂದಿದೆ ಅನ್ನೋದು ವಿಶೇಷ.
ಗಣೇಶ್ ಇದೇ ಮೊದಲ ಬಾರಿಗೆ ಅಂಧನ ರೀತಿಯಲ್ಲಿ ನಟಿಸಿದ್ದಾರೆ. ಕೊಟ್ಟ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆಯುತ್ತಾರೆ. ನಟಿ ಸುರಭಿ ಉತ್ತಮವಾಗಿ ನಟಿಸಿದ್ದಾರೆ. ಗಣೇಶ್ ಮಗ ವಿಹಾನ್ ಕೂಡ ಸಿನಿಮಾದಲ್ಲಿ ನಟಿಸಿದ್ದಾನೆ. ಮೊದಲ ಚಿತ್ರದಲ್ಲೇ ಅವನು ಎಲ್ಲರ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: Sakath Movie Review: ‘ಸಖತ್’ ಮನರಂಜನೆ, ‘ಸಖತ್’ ಸಂದೇಶ; ಇದು ಗಣೇಶ್-ಸುನಿ ಪಂಚ್
Published On - 7:30 pm, Fri, 26 November 21