Drishya 2 Trailer: ಕುತೂಹಲ ಹೆಚ್ಚಿಸಿದ ‘ದೃಶ್ಯ 2’ ಟ್ರೇಲರ್​; ರವಿಚಂದ್ರನ್​ ಚಿತ್ರಕ್ಕೆ ಸುದೀಪ್​ ಬೆಂಬಲ

‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್​ ಮಗ ತರುಣ್​ ಚಂದ್ರಶೇಖರ್​ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್​ ಠಾಣೆಯಲ್ಲಿ ಹುಗಿದು ಹಾಕಿದ್ದರು. ಎರಡನೇ ಭಾಗದಲ್ಲಿ ಈ ವಿಚಾರ ರಿವೀಲ್​ ಆಗಲಿದೆ.

Drishya 2 Trailer: ಕುತೂಹಲ ಹೆಚ್ಚಿಸಿದ ‘ದೃಶ್ಯ 2’ ಟ್ರೇಲರ್​; ರವಿಚಂದ್ರನ್​ ಚಿತ್ರಕ್ಕೆ ಸುದೀಪ್​ ಬೆಂಬಲ
ರವಿಚಂದ್ರನ್​-ಸುದೀಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 26, 2021 | 9:24 PM

ರವಿಚಂದ್ರನ್​ ಅಭಿನಯದ ‘ದೃಶ್ಯ’ ಸಿನಿಮಾ 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್​ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೀಕ್ವೆಲ್​ ಈಗ ಸಿದ್ಧಗೊಂಡಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಝಲಕ್​ ಇಂದು (ನವೆಂಬರ್​ 26) ರಿಲೀಸ್​ ಆದ ಟ್ರೇಲರ್​ನಲ್ಲಿ ಸಿಕ್ಕಿದೆ. ಈ ಸಿನಿಮಾದ ಟ್ರೇಲರ್​ಅನ್ನು ಕಿಚ್ಚ ಸುದೀಪ್​ ಅನಾವರಣ ಮಾಡಿದ್ದು ವಿಶೇಷವಾಗಿತ್ತು.

‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್​ ಮಗ ತರುಣ್​ ಚಂದ್ರಶೇಖರ್​ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್​ ಠಾಣೆಯಲ್ಲಿ ಹುಗಿದು ಹಾಕಿದ್ದರು. ಆ ನಂತರ ಇಡೀ ಕುಟುಂಬ ಹಾಯಾಗಿ ಜೀವನ ನಡೆಸುತ್ತಿರುತ್ತದೆ. ಆದರೆ, ಈಗ ಈ ವಿಚಾರ ರಿವೀಲ್​ ಆಗಿದೆ. ಇದರಿಂದ ರಾಜೇಂದ್ರ ಪೊನ್ನಪ್ಪ ಹೇಗೆ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ಸಿನಿಮಾದ ಹೈಲೈಟ್​ ಆಗಲಿದೆ ಎಂಬುದಕ್ಕೆ ‘ದೃಶ್ಯ 2’ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಸಿನಿಮಾ ಡಿಸೆಂಬರ್​ 10ಕ್ಕೆ ರಿಲೀಸ್​ ಆಗುತ್ತಿದೆ.

‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ನವ್ಯಾ ನಾಯರ್​ ಮುಂದುವರಿದಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್​ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್​ ಸಾಕಷ್ಟು ಸಸ್ಪೆನ್ಸ್​ಗಳಿಂದ ಕೂಡಿದೆ. ಹೀಗಾಗಿ, ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ. ಅನಂತ್​ ನಾಗ್​ ಪಾತ್ರ ಕೂಡ ಟ್ರೇಲರ್​ನಲ್ಲಿ ರಿವೀಲ್​ ಆಗಿದೆ. ಇತ್ತೀಚೆಗೆ ಅವರು ಚಿತ್ರತಂಡ ಸೇರಿಕೊಂಡ ಬಗ್ಗೆ ಮಾಹಿತಿ ಅಧಿಕೃತವಾಗಿತ್ತು.

‘ನಾನು ‘ದೃಶ್ಯ’ ಸಿನಿಮಾವನ್ನು ಕನ್ನಡದಲ್ಲಿ ನೋಡಿದ್ದೆ. ಇದರ ಸೀಕ್ವೆಲ್​ ಕೂಡ ಕನ್ನಡದಲ್ಲೇ ನೋಡುತ್ತೇನೆ. ಇಲ್ಲಿ ಸಿನಿಮಾ ನೋಡಿದಾಗ ಹೆಚ್ಚು ಕನೆಕ್ಟ್​ ಆಗುತ್ತೇವೆ. ‘ದೃಶ್ಯ 3’ ಕನ್ನಡದಲ್ಲಿ ಮೊದಲು ಮಾಡಿ’ ಎಂದು ಮನವಿ ಮಾಡಿದರು ಸುದೀಪ್​.

E4 Entertainment ಬ್ಯಾನರ್​ನಲ್ಲಿ ‘ದೃಶ್ಯ 2’ ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ‌. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

‘ದೃಶ್ಯ 2’ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್​; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published On - 8:41 pm, Fri, 26 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ