ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

Puneetha Namana: ‘ಪುನೀತ ನಮನ’ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಈ ವಿಡಿಯೋ ಪ್ರಸಾರವಾದಾಗ ಶಿವರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ಕಂಬನಿ ಸುರಿಸಿದರು.

ಪುನೀತ್​ ರಾಜ್​ಕುಮಾರ್​ (Puneeth Rajkumar ) ಅವರಿಗೆ ಚಿತ್ರರಂಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲು ‘ಪುನೀತ ನಮನ’ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ (ನ.16) ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್​ ಬಗೆಗಿನ ಒಂದು ವಿಡಿಯೋ ಪ್ರಸಾರ ಮಾಡಲಾಯಿತು. ಅಪ್ಪು ಜನನದಿಂದ ನಿಧನದವರೆಗಿನ ಜರ್ನಿಯನ್ನು ಆ ವಿಡಿಯೋದಲ್ಲಿ ವಿವರಿಸಲಾಗಿತ್ತು. ಅದಕ್ಕೆ ಧ್ವನಿ ನೀಡಿದ್ದು ಕಿಚ್ಚ ಸುದೀಪ್​. ಚಿಕ್ಕ ವಯಸ್ಸಿನಿಂದಲೂ ಅಪ್ಪು ಮತ್ತು ಕಿಚ್ಚ ಸ್ನೇಹಿತರಾಗಿದ್ದರು. ಅಗಲಿದ ಸ್ನೇಹಿತನ ವಿಡಿಯೋಗೆ ಭಾರವಾದ ಹೃದಯದಿಂದ ಸುದೀಪ್​ (Kichcha Sudeep) ಇಂದು ಧ್ವನಿ ನೀಡುವಂತಾಗಿದ್ದು ನೋವಿನ ಸಂಗತಿ. ಈ ವಿಡಿಯೋ ಪ್ರಸಾರವಾದಾಗ ಶಿವರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ಕಂಬನಿ ಸುರಿಸಿದರು.

ಇದನ್ನೂ ಓದಿ:

‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ​’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ

‘ಆರು ಕೋಟಿ ಜನರ ಪರವಾಗಿ ಪುನೀತ್​ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ

Click on your DTH Provider to Add TV9 Kannada