ಬೆಂಗಳೂರಲ್ಲಿ ಮಳೆ ನಿಲ್ಲಲ್ಲ, ಬಿಬಿಎಮ್​ಪಿ ಎಚ್ಚೆತ್ತುಕೊಳ್ಳಲ್ಲ, ನಗರ ನಿವಾಸಿಗಳ ಸಂಕಷ್ಟ ತೀರಲ್ಲ!

ಮನೆಗಳ ಎಲ್ಲ ಕೋಣೆಗಳಲ್ಲಿ ನೀರು. ಈ ಜನ ರಾತ್ರಿಯನ್ನು ಮನೆಯೊಳಗೆ ಹೊಕ್ಕ ನೀರನ್ನು ಹೊರ ಹಾಕುವುದರಲ್ಲಿ ಕಳೆದರು. ಯಾರೂ ನಿದ್ರೆ ಮಾಡಲಿಲ್ಲ.

ಬೆಂಗಳೂರು ನಗರಕ್ಕೆ ಮಳೆಯಿಂದ ಮುಕ್ತಿ ಮಾರಾಯ್ರೇ. ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ಮಳೆ ಸುರಿಯುತ್ತಿದೆ. ಒಂದಿಡೀ ದಿನ ಜಿನುಗು ಮಳೆ ನಗರವನ್ನು ಆವರಿಸಿದರೆ ಮತ್ತೊಂದು ದಿನ ಧೋ ಅಂತ ಅಬ್ಬರಿಸುತ್ತಾ ಒಂದೇ ಸಮ ಸುರಿಯಲಾರಂಭಿಸುತ್ತದೆ. ಜನಜೀವನ ಅಸ್ತವ್ಯಸ್ತಗೊಂಡಿದೆ ಅಂತ ಹೇಳಿದರೆ ಅದು ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ಯಾಕಾದರೂ ಇದು ಸುರಿಯುತ್ತದೆಯೋ ಅಂತ ಜನ ಶಾಪ ಹಾಕುತ್ತಿದ್ದಾರೆ. ಸೋಮವಾರ ರಾತ್ರಿ ಮತ್ತೆ ಧಾರಾಕಾರವಾಗಿ ಮಳೆ ಸುರಿಯಿತು. ನಗರದ ಸುಧಾಮನಗರ, ಬಾಣಸವಾಡಿ. ಹೆಣ್ಣೂರು, ಕೊತ್ತನೂರು, ನಾಗವಾರ, ಎಚ್ ಬಿ ಆರ್ ಲೇಔಟ್, ಕೆ ಅರ್ ಮಾರ್ಕೆಟ್, ಹೊಸಕೆರೆ ಹಳ್ಳಿ ಮೊದಲಾದ ಪ್ರದೇಶಗಳ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ತಗ್ಗುಪ್ರದೇಶಗಳಲ್ಲಂತೂ ನೀರು ಮನೆಗಳಿಗೆ ನುಗ್ಗಿತ್ತು.
ಮೊಬೈಲ್ ಫೋನ್ ನಲ್ಲಿ ಶೂಟ್ ಮಾಡಿರುವ ಒಂದು ವಿಡಿಯೋವನ್ನು ನಿಮಗಿಲ್ಲಿ ತೋರಿಸುತ್ತಿದ್ದೇವೆ. ಇದು ನಾಗವಾರದ ಒಂದು ಬಡಾವಣೆಯಲ್ಲಿ ಶೂಟ್ ಮಾಡಿರುವ ವಿಡಿಯೋ. ಇಲ್ಲಿನ ಮನೆಗಳಲ್ಲಿ ಯಾವ ಪರಿ ನೀರಿ ನುಗ್ಗಿದೆ ಅಂತ ನೀವೇ ಗಮನಿಸಿ.

ಮನೆಗಳ ಎಲ್ಲ ಕೋಣೆಗಳಲ್ಲಿ ನೀರು. ಈ ಜನ ರಾತ್ರಿಯನ್ನು ಮನೆಯೊಳಗೆ ಹೊಕ್ಕ ನೀರನ್ನು ಹೊರ ಹಾಕುವುದರಲ್ಲಿ ಕಳೆದರು. ಯಾರೂ ನಿದ್ರೆ ಮಾಡಲಿಲ್ಲ.

ಈ ಮನೆ ನೋಡಿ, ಇಲ್ಲೊಬ್ಬ ಬಾಣಂತಿ ಇದ್ದಾರೆ. ಮಗುವನ್ನು ಮಡಿಲಲ್ಲಿಟ್ಟುಕೊಂಡು ರಾತ್ರಿಯೆಲ್ಲ ಜಾಗರಣೆ ಮಾಡಿದ್ದಾರೆ. ಎಲ್ಲ ಕುಟುಂಬಗಳೂ ಬಿ ಬಿ ಎಮ್ ಪಿ ಗೆ ಹಿಡಿ ಶಾಪ ಹಾಕುತ್ತಿದ್ದಿದ್ದು ಸಾಮಾನ್ಯವಾಗಿತ್ತು.

ಇದನ್ನೂ ಓದಿ: Rajkummar Rao: ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಪ್ರೇಮ ಪಕ್ಷಿಗಳು; ಸುಂದರ ಕ್ಷಣದ ವಿಡಿಯೋ ಇಲ್ಲಿದೆ

Click on your DTH Provider to Add TV9 Kannada