‘ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್ ಕರೆಸಿಕೊಳ್ಳಿ ಪ್ಲೀಸ್. ಪುನೀತ್ ಅವರನ್ನು ಹೂತ್ತಿಲ್ಲ, ಬಿತ್ತಿದ್ದೇವೆ. ಪುನೀತ್ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ. ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ. ನಿನ್ನ ಜಾಗಕ್ಕೆ ನಾನು ಬರುತ್ತೇನೆ’ ಎಂದು ರಾಘಣ್ಣ ಕಂಬನಿ ಸುರಿಸಿದರು.
‘20 ದಿನ ಈ ನೋವನ್ನು ತಡೆದುಕೊಂಡಿದ್ದೆ. ನಾನು ಅತ್ತರೆ ಪುನೀತ್ ಪತ್ನಿ ಮತ್ತು ಮಕ್ಕಳು ನೊಂದುಕೊಳ್ಳುತ್ತಾರೆ ಅಂತ ಸುಮ್ಮನಿದ್ದೆ. ಆದರೆ ಇಂದು ತಡೆದುಕೊಳ್ಳೋಕೆ ಆಗಲಿಲ್ಲ. ಅತ್ತು ಹಗುರಾಗುತ್ತೇನೆ. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ. ಅವನು ನನ್ನ ಎದೆಯೊಳಗೆ ಇದ್ದಾನೆ’ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.
ಬಳಿಕ ಮಾತನಾಡಿದ ಶಿವರಾಜ್ಕುಮಾರ್ ಕೂಡ ಕಣ್ಣೀರು ಸುರಿಸಿದರು. ಪುನೀತ್ಗಾಗಿ ಹಾಡು ಹೇಳಿ ಗಾನ ನಮನ ಸಲ್ಲಿಸಿಸರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುಂತಾದ ರಾಜಕೀಯ ಗಣ್ಯರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ತಮಿಳು ನಟರಾದ ವಿಶಾಲ್, ಶರತ್ ಕುಮಾರ್ ಮುಂತಾದವರು ಪುನೀತ್ಗೆ ನುಡಿ ನಮನ ಸಲ್ಲಿಸಿದರು.
ಇದನ್ನೂ ಓದಿ:
‘ಆರು ಕೋಟಿ ಜನರ ಪರವಾಗಿ ಪುನೀತ್ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ
Puneetha Namana: ‘ನಾನು ಮನೆ ಖರೀದಿಗಾಗಿ ಇಟ್ಟುಕೊಂಡ ಹಣದಲ್ಲಿ ಈ ಸಹಾಯ ಮಾಡ್ತೀನಿ’: ವಿಶಾಲ್