‘ದೇವರು ಪುನೀತ್ ಬದಲು ನನ್ನನ್ನು ಕರೆದುಕೊಳ್ಳಬಹುದಿತ್ತು’; ಹಿರಿಯ ನಟ ಶರತ್ಕುಮಾರ್ ಭಾವುಕ ನುಡಿ
ಪುನೀತ್ ರಾಜ್ಕುಮಾರ್ ಅಗಲಿಕೆ ದೊಡ್ಮನೆಗೆ ಹಾಗೂ ಅವರ ಅಭಿಮಾನಿಗಳಿಗೆ ನೋವು ತಂದಿದೆ. ಈಗ ಪುನೀತ್ ಹೆಸರಲ್ಲೇ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ.
ದಕ್ಷಿಣ ಭಾರತದ ಖ್ಯಾತ ನಟ ಶರತ್ಕುಮಾರ್ ಅವರಿಗೆ ಪುನೀತ್ ರಾಜ್ಕುಮಾರ್ ಜತೆ ಒಳ್ಳೆಯ ಒಡನಾಟ ಇತ್ತು. ‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್ ತಂದೆಯ ಪಾತ್ರವನ್ನು ಮಾಡಿದ್ದರು ಶರತ್ಕುಮಾರ್. ಈ ಸಿನಿಮಾ 100 ದಿನದ ಸಂಭ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಈಗ ಅದೇ ಅರಮನೆ ಮೈದಾನದಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ‘ಪುನೀತ ನಮನ’ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಕುಮಾರ್ ಭಾವುಕರಾದರು. ದೇವರು ಪುನೀತ್ ಬದಲು ನನ್ನನ್ನು ಕರೆದುಕೊಳ್ಳಬಹುದಿತ್ತು ಎನ್ನುವ ಮಾತನ್ನು ಹೇಳಿದರು.
‘ಪುನೀತ್ ನಮ್ಮನ್ನು ಬಿಟ್ಟು ಹೋಗಿದ್ದು ನಂಬೋಕೆ ಆಗಿಲ್ಲ. ‘ರಾಜಕುಮಾರ’ ಸಿನಿಮಾ 100 ದಿನದ ಸಂಭ್ರಮವನ್ನು ಇಲ್ಲಿಯೇ ಮಾಡಿದ್ದೆವು. ಈಗ ಇಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ಖಂಡಿತವಾಗಿಯೂ ನಾನು ಇದನ್ನು ಅಂದುಕೊಂಡಿರಲಿಲ್ಲ. ನನಗೆ ಈಗ 67 ವರ್ಷ. ಬಹುಶಃ ಪುನೀತ್ ನನ್ನ ಶ್ರದ್ಧಾಂಜಲಿಗೆ ಬರಹುದು ಎಂದುಕೊಂಡಿದ್ದೆ. ದೇವರು ಪುನೀತ್ ಬದಲಿಗೆ ನನ್ನನ್ನು ಕರೆದುಕೊಳ್ಳಬಹುದಿತ್ತು. ನಾನು ಪುನೀತ್ಗಾಗಿ ನನ್ನ ಜೀವಕೊಡೋಕು ಸಿದ್ಧನಿದ್ದೇನೆ. ಪುನೀತ್ ಕುಟುಂಬ ನನಗೆ ತುಂಬಾನೇ ಕ್ಲೋಸ್ ಆಗಿದೆ’ ಎಂದರು ಅವರು.
‘ನಾನು ಮೊದಲು ನಟಿಸಿದ್ದು ಕರ್ನಾಟಕದಲ್ಲಿ. ನನ್ನ ಮೊದಲ ವೇತನ ಪಡೆದಿದ್ದು ಇಲ್ಲಿಯೇ. ಈ ಕರ್ನಾಟಕ ನನಗೆ ಯಾವಾಗಲೂ ಹತ್ತಿರ. ನಾನು ಶಿವರಾಜ್ಕುಮಾರ್ ಸಹಾಯಕ್ಕೆ ಸದಾ ಸಿದ್ಧನಿದ್ದೇನೆ. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ’ ಎಂದರು ಶರತ್ಕುಮಾರ್.
ಜೇಮ್ಸ್ ಸಿನಿಮಾದಲ್ಲಿ ಶರತ್ಕುಮಾರ್ ನಟಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಪುನೀತ್ ಅವರೇ ಅಡುಗೆ ಮಾಡಿ ಶರತ್ ಅವರಿಗೆ ನೀಡಿದ್ದರಂತೆ. ಈ ಘಟನೆಯನ್ನು ಕೂಡ ಶರತ್ ಅವರು ನೆನಪು ಮಾಡಿಕೊಂಡಿದ್ದಾರೆ. ಭಾಷಣದ ವೇಳೆ ಅವರು ತುಂಬಾನೇ ಭಾವುಕರಾಗಿದ್ದರು.
ಪುನೀತ್ ರಾಜ್ಕುಮಾರ್ ಅಗಲಿಕೆ ದೊಡ್ಮನೆಗೆ ಹಾಗೂ ಅವರ ಅಭಿಮಾನಿಗಳಿಗೆ ನೋವು ತಂದಿದೆ. ಈಗ ಪುನೀತ್ ಹೆಸರಲ್ಲೇ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ದೊಡ್ಮನೆಯ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ಕ್ಕೆ ಬಂದಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರ ನೋವು ಇನ್ನೂ ಕಡಿಮೆ ಆಗಿಲ್ಲ. 20 ದಿನ ಕಳೆದರೂ ಅವರ ಕಣ್ಣೀರು ನಿಂತಿಲ್ಲ. ಇಂದಿನ ಕಾರ್ಯಕ್ರಮದಲ್ಲೂ ಅವರು ಕಣ್ಣೀರು ಹಾಕಿದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಘೋಷಣೆ: ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರು ಇವರು
‘ಪುನೀತ್ ಹೆಸರಲ್ಲಿ ಹೊಸ ಸಂಸ್ಥೆ ಅಥವಾ ಸ್ಟುಡಿಯೋ ಆರಂಭಿಸಿ’; ಡಿ.ಕೆ. ಶಿವಕುಮಾರ್ ಮನವಿ