ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡದ ಕತ್ರಿನಾ; ಕುಟುಂಬದವರಿಂದಲೇ ಬಂತು ಸ್ಪಷ್ಟನೆ

ಸಲ್ಮಾನ್ ಖಾನ್​ ಹಾಗೂ ಕತ್ರಿನಾ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅವರು ಸುತ್ತಾಟ ನಡೆಸಿದ್ದಿದೆ. ಆದರೆ, ಇದನ್ನು ಗುಟ್ಟಾಗಿಯೇ ಇಟ್ಟಿದ್ದರು. ಇವರ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ.

ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡದ ಕತ್ರಿನಾ; ಕುಟುಂಬದವರಿಂದಲೇ ಬಂತು ಸ್ಪಷ್ಟನೆ
ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ಸಿಕ್ಕಿಲ್ಲ ಎಂದ ಅರ್ಪಿತಾ

ಸದ್ಯ ಎಲ್ಲೆಲ್ಲೂ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್​​ ಮದುವೆಯದ್ದೇ ವಿಚಾರ. ಈ ಜೋಡಿ ವಿವಾಹವಾಗುತ್ತಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು  ಇದು ಫೇಕ್​ ಸುದ್ದಿ ಎನ್ನುತ್ತಿದ್ದಾರೆ. ಈ ಮಧ್ಯೆ ಕೆಲ ಸೆಲೆಬ್ರಿಟಿಗಳಿಗೆ ಆಮಂತ್ರಣ ಬಂದಿರುವ ಬಗ್ಗೆ ವರದಿ ಆಗಿದೆ. ಕತ್ರಿನಾ ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ಗೆ ಮದುವೆ ಕರೆಯೋಲೆ ಸಿಕ್ಕಿದೆಯೋ, ಇಲ್ಲವೋ?, ಅವರು ಮದುವೆಗೆ ಬರುತ್ತಾರೋ, ಇಲ್ಲವೋ? ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಈ ವಿಚಾರಗಳಿಗೆ ಸಲ್ಲು ಸಹೋದರಿ ಅರ್ಪಿತಾ ಖಾನ್​ ಸ್ಪಷ್ಟನೆ ನೀಡಿದ್ದಾರೆ. ಸಲ್ಲುಗೆ ಮದುವೆ ಆಮಂತ್ರಣ ಸಿಕ್ಕೇ ಇಲ್ಲ ಎಂದಿದ್ದಾರೆ ಅವರು.

ಸಲ್ಮಾನ್ ಖಾನ್​ ಹಾಗೂ ಕತ್ರಿನಾ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅವರು ಸುತ್ತಾಟ ನಡೆಸಿದ್ದಿದೆ. ಆದರೆ, ಇದನ್ನು ಗುಟ್ಟಾಗಿಯೇ ಇಟ್ಟಿದ್ದರು. ಇವರ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ. ಬ್ರೇಕ್​​ಅಪ್​ ಆದ ನಂತರವೂ ಈ ಜೊಡಿ ಗೆಳೆತನವನ್ನು ಮುಂದುವರಿಸಿತ್ತು. ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಈಗಲೂ ಮುಂದುವರಿದಿದೆ. ‘ಟೈಗರ್​ 3’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಹೀಗಾಗಿ, ಸಲ್ಲುಗೆ ಆಮಂತ್ರಣ ಹೋಗಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.

ಕತ್ರಿನಾ ಅವರು ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡಿಲ್ಲ. ಸಲ್ಲು ಸಹೋದರಿ ಅರ್ಪಿತಾ ಖಾನ್​ ಈ ಮದುವೆಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಕೂಡ ಸುಳ್ಳು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ.

‘ನಮ್ಮನ್ನು ಯಾರೂ ಮದುವೆಗೆ ಆಮಂತ್ರಿಸಿಲ್ಲ. ನನಗೂ ಅವರು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ತೆರಳುತ್ತೇನೆ ಎನ್ನುವುದು ಸುಳ್ಳು ಸುದ್ದಿ’ ಎಂದು ಅರ್ಪಿತಾ ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮದುವೆ ಬಗ್ಗೆ ರಹಸ್ಯ ಕಾಪಾಡಿಕೊಳ್ಳಲು ಎಲ್ಲರೂ ಮದುವೆ ಆಮಂತ್ರಣ ಬಂದಿಲ್ಲ ಎಂದು ಹೇಳುತ್ತಿರಬಹುದು ಎಂಬುದಾಗಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

ರಸ್ತೆ ಮೇಲೆಯೇ ಮೊಬೈಲ್​ ಬೀಳಿಸಿಕೊಂಡ ಕತ್ರಿನಾ ತಾಯಿ; ನಿಮ್ಮ ವಾಟ್ಸಾಪ್​ ಚೆಕ್​ ಮಾಡುತ್ತೇವೆ ಎಂದ ಫ್ಯಾನ್ಸ್​

Katrina Kaif: ಕತ್ರಿನಾ- ವಿಕ್ಕಿ ಕಲ್ಯಾಣಕ್ಕೆ ಹಾಜರಾಗಲು ಈ ಅಂಶ ಕಡ್ಡಾಯ; ಇಲ್ಲದಿದ್ದರೆ ಮದುವೆಗೆ ನೋ ಎಂಟ್ರಿ!

Click on your DTH Provider to Add TV9 Kannada