ಮದುವೆ ಮುಗಿಯಿತು ಈಗ ಆರತಕ್ಷತೆ ಸಂಭ್ರಮ; ಗ್ರ್ಯಾಂಡ್ ಆಗಿ ನಡೆಯುತ್ತಿದೆ ಕತ್ರಿನಾ-ವಿಕ್ಕಿ ರಿಸೆಪ್ಷನ್
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿನಿಮಾ ಕೆಲಸಗಳಿಗೆ ಮತ್ತೆ ಚಾಲನೆ ನೀಡಬೇಕಿದೆ. ಈ ಕಾರಣಕ್ಕೆ ಆರತಕ್ಷತೆ ಕಾರ್ಯಕ್ರಮವನ್ನು ಬಹುಬೇಗ ಮುಗಿಸುವ ಆಲೋಚನೆ ಈ ದಂಪತಿಯದ್ದು.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ವಿವಾಹವಾಗಿದ್ದರು. ಇವರ ಅದ್ದೂರಿ ಮದುವೆಗೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿ ಆಗಿದ್ದರು. ಈಗ ಈ ಜೋಡಿ ಆರತಕ್ಷತೆ ಆಯೋಜಿಸಿದೆ. ಡಿಸೆಂಬರ್ 20ರಂದು ಮುಂಬೈನಲ್ಲಿ ಅದ್ದೂರಿಯಾಗಿ ಈ ಸಮಾರಂಭ ನಡೆಯುತ್ತಿದೆ. ಬಾಲಿವುಡ್ ದಿಗ್ಗಜರು, ರಾಜಕಾರಣಿಗಳು, ಕ್ರಿಕೆಟ್ ಲೋಕದ ಪ್ರಮುಖರು ಆರತಕ್ಷತೆಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿನಿಮಾ ಕೆಲಸಗಳಿಗೆ ಮತ್ತೆ ಚಾಲನೆ ನೀಡಬೇಕಿದೆ. ಈ ಕಾರಣಕ್ಕೆ ಆರತಕ್ಷತೆ ಕಾರ್ಯಕ್ರಮವನ್ನು ಬಹುಬೇಗ ಮುಗಿಸುವ ಆಲೋಚನೆ ಈ ದಂಪತಿಯದ್ದು. ಇದರ ಜತೆಗೆ ಕ್ರಿಸ್ಮಸ್ ಕೂಡ ಆಗಮಿಸುತ್ತಿದೆ. ಅದರ ಬೆನ್ನಲ್ಲೇ ಹೊಸ ವರ್ಷದ ಸೆಲಬ್ರೇಷನ್ ಇರಲಿದೆ. ಅದಕ್ಕೂ ಮೊದಲೇ ಈ ರಿಸೆಪ್ಷನ್ ನಡೆಯುತ್ತಿದೆ.
ಅಮಿತಾಭ್ ಬಚ್ಚನ್, ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್, ರಣಬೀರ್ ಕಪೂರ್, ಹೃತಿಕ್ ರೋಷನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಕಂಗನಾ ರಣಾವತ್, ಆಲಿಯಾ ಭಟ್, ಅಜಯ್ ದೇವಗನ್, ಇಶಾನ್ ಕಟ್ಟರ್, ರೋಹಿತ್ ಶೆಟ್ಟಿ, ಸಿದ್ದಾರ್ಥ್ ಮಲ್ಹೋತ್ರಾ, ತಾಪ್ಸೀ ಪನ್ನು, ಅಭಿಷೇಕ್ ಬಚ್ಚನ್ ಸೇರಿ ಅನೇಕರಿಗೆ ಆಮಂತ್ರಣ ಹೋಗಿದೆ.
ಕೊವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಇದಕ್ಕಾಗಿ ಆರತಕ್ಷತೆಗೆ ಬರುವ ಎಲ್ಲರೂ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಬೇಕು. ಅಂದರೆ ಮಾತ್ರ ಈ ಸಮರಾಂಭಕ್ಕೆ ಬರೋಕೆ ಅವಕಾಶ ಇದೆ. ಬಾಲಿವುಡ್ನಲ್ಲಿ ಇತ್ತೀಚೆಗೆ ಅನೇಕರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ.
ಸಲ್ಮಾನ್ ಖಾನ್ ಅವರು ಕತ್ರಿನಾಗೆ 3 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರನ್ನು ನೀಡಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ಸಲ್ಮಾನ್ ಖಾನ್ ಅವರು ವಿಕ್ಕಿ ಹಾಗೂ ಕತ್ರಿನಾಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೆ, ಕತ್ರಿನಾ ಬಗ್ಗೆ ಇರುವ ಫ್ರೆಂಡ್ಶಿಪ್ಅನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಂದಹಾಗೆ, ಕತ್ರಿನಾ ಮತ್ತು ವಿಕ್ಕಿ ಮದುವೆ ಆಗುತ್ತಿದ್ದಂತೆ ಸಲ್ಲು ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡಿದ್ದವು. ಆದರೆ, ಆ ಬಗ್ಗೆ ಸಲ್ಮಾನ್ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: ಕತ್ರಿನಾ ಕೈಫ್ಗೆ ಗಿಫ್ಟ್ ಕೊಡೋಕೆ ಕೋಟಿಕೋಟಿ ಖರ್ಚು ಮಾಡಿದ ಸಲ್ಮಾನ್, ರಣಬೀರ್?