ಕತ್ರಿನಾ ಕೈಫ್​ಗೆ ಗಿಫ್ಟ್​ ಕೊಡೋಕೆ ಕೋಟಿಕೋಟಿ ಖರ್ಚು ಮಾಡಿದ ಸಲ್ಮಾನ್​, ರಣಬೀರ್​?

ಸಲ್ಮಾನ್​ ಖಾನ್​ ಅವರನ್ನು ಕತ್ರಿನಾ ಪ್ರೀತಿಸುತ್ತಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ಆದರೆ, ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ರಣಬೀರ್​ ಜತೆಯೂ ಕತ್ರಿನಾ ರಿಲೇಶನ್​ಶಿಪ್​ನಲ್ಲಿದ್ದರು. ಇಬ್ಬರೂ ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ.

ಕತ್ರಿನಾ ಕೈಫ್​ಗೆ ಗಿಫ್ಟ್​ ಕೊಡೋಕೆ ಕೋಟಿಕೋಟಿ ಖರ್ಚು ಮಾಡಿದ ಸಲ್ಮಾನ್​, ರಣಬೀರ್​?
ಕತ್ರಿನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 15, 2021 | 6:06 PM

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆ (Katrina Kaif And Vicky Kaushal Marriage)​ ಅದ್ದೂರಿಯಾಗಿ ನೆರವೇರಿದೆ. ಡಿಸೆಂಬರ್​ 7ರಿಂದ 10ರವರೆಗೆ ಮದುವೆ ಕಾರ್ಯಕ್ರಮ ನಡೆದಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ (Six Senses Fort Hotel) ಮದುವೆ ಕಾರ್ಯಕ್ರಮ ನಡೆದಿದೆ. ಮದುವೆಗೆ ಎಲ್ಲಾ ಸೆಲೆಬ್ರಿಟಿಗಳು ತೆರಳಿಲ್ಲ. ವಿಶೇಷ ಎಂದರೆ, ಕತ್ರಿನಾ ಹಾಗೂ ವಿಕ್ಕಿಗೆ ದುಬಾರಿ ಗಿಫ್ಟ್​ ಸಿಕ್ಕ ಬಗ್ಗೆ ವರದಿ ಆಗಿದೆ. ಅದೂ ಅವರ ಎಕ್ಸ್​ ಬಾಯಫ್ರೆಂಡ್​ಗಳಿಂದ ಅನ್ನೋದು ವಿಶೇಷ.

ಸಲ್ಮಾನ್​ ಖಾನ್​ ಅವರನ್ನು ಕತ್ರಿನಾ ಪ್ರೀತಿಸುತ್ತಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ಆದರೆ, ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ರಣಬೀರ್​ ಜತೆಯೂ ಕತ್ರಿನಾ ರಿಲೇಶನ್​ಶಿಪ್​ನಲ್ಲಿದ್ದರು. ಇಬ್ಬರೂ ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಲ್ಲ. ಅಚ್ಚರಿ ಎಂದರೆ, ಕತ್ರಿನಾಗೆ ಸಲ್ಮಾನ್​ ಹಾಗೂ ರಣಬೀರ್​ ಇಬ್ಬರಿಂದಲೂ ಉಡುಗೊರೆ ಸಿಕ್ಕಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಲ್ಮಾನ್​ ಖಾನ್​ ಅವರು ಕತ್ರಿನಾಗೆ 3 ಕೋಟಿ ರೂಪಾಯಿ ಮೌಲ್ಯದ ರೇಂಜ್​ ರೋವರ್ ಕಾರನ್ನು ನೀಡಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ಸಲ್ಮಾನ್​ ಖಾನ್​ ಅವರು ವಿಕ್ಕಿ ಹಾಗೂ ಕತ್ರಿನಾಗೆ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಅಲ್ಲದೆ, ಕತ್ರಿನಾ ಬಗ್ಗೆ ಇರುವ ಫ್ರೆಂಡ್​ಶಿಪ್​ಅನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಂದಹಾಗೆ, ಕತ್ರಿನಾ ಮತ್ತು ವಿಕ್ಕಿ ಮದುವೆ ಆಗುತ್ತಿದ್ದಂತೆ ಸಲ್ಲು ಬಗ್ಗೆ ಸಾಕಷ್ಟು ಟ್ರೋಲ್​ಗಳು ಹರಿದಾಡಿದ್ದವು. ಆದರೆ, ಆ ಬಗ್ಗೆ ಸಲ್ಮಾನ್​ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ದುಬಾರಿ ಗಿಫ್ಟ್​ ನೀಡಿದ್ದಾರೆ.

ಇನ್ನು, ರಣಬೀರ್​ ಹಾಗೂ ಕತ್ರಿನಾ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಇವರ ನಡುವೆ ಈಗ ಫ್ರೆಂಡ್​ಶಿಪ್​ ಕೂಡ ಉಳಿದಿಲ್ಲ ಎ್ನಲಾಗಿತ್ತು. ಆದರೆ, ಈಗ ಅಚ್ಚರಿ ಎಂಬಂತೆ ರಣಬೀರ್ ಅವರು 2.7 ಕೋಟಿ ಮೌಲ್ಯದ ಡೈಮಂಡ್​ ನೆಕ್ಲೇಸ್​ ಗಿಫ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಫ್ಯಾನ್ಸ್​ ಅಚ್ಚರಿ ಹೊರಹಾಕಿದ್ದಾರೆ.  ಆದರೆ, ಈ ಬಗ್ಗೆ ನವದಂಪತಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

Katrina Kaif: ಮದುವೆಗೂ ಮುನ್ನ ವಿಕ್ಕಿ ಕೌಶಲ್​ಗೆ ಒಂದೇ ಒಂದು ಷರತ್ತು ವಿಧಿಸಿದ್ದರಂತೆ ಕತ್ರಿನಾ; ಏನದು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ