AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಫೋಟೊ ಹಂಚಿಕೊಂಡ ಕತ್ರಿನಾ ಕೈಫ್​; ಅಭಿಮಾನಿಗಳು ಪತ್ತೆ ಹಚ್ಚಲು ಹೋಗಿದ್ದು ಏನು?

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​​ ಹನಿಮೂನ್​ಗೆ ಮಾಲ್ಡೀವ್ಸ್​​ಗೆ ತೆರಳಿದ್ದರು ಎನ್ನಲಾಗಿದೆ. ನಾಲ್ಕೈದು ದಿನ ಅಲ್ಲಿ ಸಮಯ ಕಳೆದು ಬಂದಿದ್ದಾರೆ. ಈ ಫೋಟೋವನ್ನು ಅವರು ಈಗ ಹಂಚಿಕೊಂಡಿದ್ದಾರೆ.

ವಿಶೇಷ ಫೋಟೊ ಹಂಚಿಕೊಂಡ ಕತ್ರಿನಾ ಕೈಫ್​; ಅಭಿಮಾನಿಗಳು ಪತ್ತೆ ಹಚ್ಚಲು ಹೋಗಿದ್ದು ಏನು?
ಕತ್ರಿನಾ-ವಿಕ್ಕಿ
TV9 Web
| Edited By: |

Updated on:Dec 20, 2021 | 7:34 PM

Share

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ  (Katrina Kaif And Vicky Kaushal Wedding) ಆಗಿ 10 ದಿನ ಕಳೆದಿದೆ. ಸಿನಿಮಾ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡು ಈ ಜೋಡಿ ಒಟ್ಟಾಗಿ ಸಮಯ ಕಳೆಯುತ್ತಿದೆ. ಮದುವೆ ಆದ ನಂತರದಲ್ಲಿ ಈ ಜೋಡಿ ಒಮ್ಮೆ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ, ವಿವಾಹ ಸಮಾರಂಭದ ಅನೇಕ ಫೋಟೋಗಳನ್ನು ಈ ದಂಪತಿ ಹಂಚಿಕೊಳ್ಳುತ್ತಿದ್ದಾರೆ. ಈಗ ಕತ್ರಿನಾ ಕೈಫ್​ ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಒಂದು ವಿಚಾರವನ್ನು ಪತ್ತೆ ಹಚ್ಚಲು ಅಭಿಮಾನಿಗಳು ಪ್ರಯತ್ನಿಸಿದ್ದಾರೆ.  

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​​ ಹನಿಮೂನ್​ಗೆ ಮಾಲ್ಡೀವ್ಸ್​​ಗೆ ತೆರಳಿದ್ದರು ಎನ್ನಲಾಗಿದೆ. ನಾಲ್ಕೈದು ದಿನ ಅಲ್ಲಿ ಸಮಯ ಕಳೆದು ಬಂದಿದ್ದಾರೆ. ಈ ಫೋಟೋವನ್ನು ಅವರು ಈಗ ಹಂಚಿಕೊಂಡಿದ್ದಾರೆ. ಹಾಗಂತ, ವಿಕ್ಕಿ ಜತೆ ಇರುವ ಫೋಟೋ ಇದಲ್ಲ. ಸಮುದ್ರದ ಎದುರು ಮದರಂಗಿ ಹಾಕಿಕೊಂಡ ಕೈ ಇಟ್ಟು, ಆ ಫೋಟೋವನ್ನು ಅವರು ಪೋಸ್ಟ್​ ಮಾಡಿದ್ದಾರೆ. ಅವರು ಕೈ ತುಂಬ ಬಳೆ ತೊಟ್ಟಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪ್ರೀತಿ ಜಿಂಟಾ, ನೇಹಾ ಧೂಪಿಯಾ ಹಾಗೂ ಮೊದಲಾದವರು ಕಮೆಂಟ್​ ಹಾಕಿದ್ದಾರೆ.

ಕೆಲವರು ಮದರಂಗಿಯಲ್ಲಿ ವಿಕ್ಕಿ ಕೌಶಲ್​ ಹೆಸರನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ‘ಯಾರೂ ಈ ಕೈಯ ಫೋಟೋವನ್ನು ಜೂಮ್​​ ಮಾಡಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ನನಗೆ ವಿಕ್ಕಿ ಹೆಸರು ಕಂಡಿದೆ’ ಎಂದಿದ್ದಾರೆ.

View this post on Instagram

A post shared by Katrina Kaif (@katrinakaif)

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಅದನ್ನೇ ಎನ್​ಕ್ಯಾಶ್​​ ಮಾಡಿಕೊಳ್ಳಲು ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ಮುಂದೆ ಬಂದಿವೆ. ಜಾಹೀರಾತೊಂದರಲ್ಲಿ ಈ ಜೋಡಿಯನ್ನು ಒಂದಾಗಿಸಲು ಪ್ಲ್ಯಾನ್​ ನಡೆದಿದೆ. ಆ ಮೂಲಕ ಅವರಿಬ್ಬರು ಮೊದಲ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ತಮ್ಮ ಲವ್​ ಕಹಾನಿ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಪ್ರೀತಿ ಶುರುವಾಗಿದ್ದು ಹೇಗೆ? ಮೊದಲು ಪ್ರಪೋಸ್​ ಮಾಡಿದ್ದು ಯಾರು? ಇಬ್ಬರ ಮನೆಯವರ ಮೊದಲ ರಿಯಾಕ್ಷನ್​ ಯಾವ ರೀತಿ ಇತ್ತು? ಈ ಯಾವ ವಿಚಾರಗಳ ಬಗ್ಗೆಯೂ ಅಭಿಮಾನಿಗಳಿಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಇಲ್ಲ. ಹಾಗಾಗಿ ಅವರ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕತ್ರಿನಾ ಕೈಫ್​ ಮದುವೆ ವಿಚಾರದಲ್ಲಿ ಜೋಕ್​ ಮಾಡಿದ ಅಕ್ಷಯ್​ ಕುಮಾರ್​

ಮದುವೆ ಬಳಿಕ ಕತ್ರಿನಾ-ವಿಕ್ಕಿಗೆ ಹೆಚ್ಚಿದ ಆಫರ್​; ಮೊದಲ ಬಾರಿಗೆ ಜತೆಯಾಗಿ ನಟಿಸಲಿರುವ ಜೋಡಿ

Published On - 5:39 pm, Mon, 20 December 21

Follow Us
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ