ಕತ್ರಿನಾ ಕೈಫ್​ ಮದುವೆ ವಿಚಾರದಲ್ಲಿ ಜೋಕ್​ ಮಾಡಿದ ಅಕ್ಷಯ್​ ಕುಮಾರ್​

ಕತ್ರಿನಾ ಕೈಫ್​ ಮದುವೆ ವಿಚಾರದಲ್ಲಿ ಜೋಕ್​ ಮಾಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​, ವಿಕ್ಕಿ ಕೌಶಲ್​, ಕತ್ರಿನಾ ಕೈಫ್​

ಅಕ್ಷಯ್​ ಕುಮಾರ್​ ‘ಅತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ಸಾರಾ ಅಲಿ ಖಾನ್​ ಹಾಗೂ ಅಕ್ಷಯ್ ಅವರು ‘ದಿ ಕಪಿಲ್ ಶರ್ಮಾ ಶೋ’ಗೆ ಬಂದಿದ್ದರು. ಈ ವೇಳೆ ಕತ್ರಿನಾ ಮದುವೆ ಬಗ್ಗೆ ಕೀಕು ಶಾರದ ವಿವರಿಸಿದ್ದಾರೆ.

TV9kannada Web Team

| Edited By: Madan Kumar

Dec 19, 2021 | 8:59 AM

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ತುಂಬಾನೇ ಅದ್ದೂರಿಯಾಗಿ ನಡೆದಿದೆ ಎಂಬುದಕ್ಕೆ ಫೋಟೋಗಳು ಸಾಕ್ಷ್ಯ ನೀಡಿವೆ. ಇವರ ಮದುವೆ ವಿಡಿಯೋಗಳು ಎಲ್ಲಿಯೂ ಬಹಿರಂಗ ಆಗಿಲ್ಲ. ಅಮೇಜಾನ್ ಪ್ರೈಮ್​ ವಿಡಿಯೋಗೆ ಈ ಜೋಡಿ ಮದುವೆ ವಿಡಿಯೋ ನೀಡಿದ್ದು, ಈ ಕಾರಣಕ್ಕೆ ಅವರ ಮದುವೆ ಸಂಭ್ರಮದ ದೃಶ್ಯಗಳನ್ನು ಎಲ್ಲಿಯೂ ಹಂಚಿಕೊಂಡಿಲ್ಲ ಎನ್ನುವ ಬಗ್ಗೆ ಮಾಹಿತಿ ಇದೆ. ಕತ್ರಿನಾ ಮದುವೆ ಬಗ್ಗೆ ಸಾಕಷ್ಟು ಟ್ರೋಲ್​ಗಳು ಕೂಡ ಹರಿದಾಡುತ್ತಿವೆ. ಈಗ ಅಕ್ಷಯ್​ ಕುಮಾರ್​ ಕೂಡ ಈ ವಿಚಾರದಲ್ಲಿ ನಗೆಚಟಾಕಿ ಹಾರಿಸಿದ್ದಾರೆ.

ಅಕ್ಷಯ್​ ‘ಅತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ಸಾರಾ ಅಲಿ ಖಾನ್​ ಹಾಗೂ ಅಕ್ಷಯ್ ಅವರು ‘ದಿ ಕಪಿಲ್ ಶರ್ಮಾ ಶೋ’ಗೆ ಬಂದಿದ್ದರು. ಈ ವೇಳೆ ಕತ್ರಿನಾ ಮದುವೆ ಬಗ್ಗೆ ಕೀಕು ಶಾರದ ವಿವರಿಸಿದ್ದಾರೆ. ‘ನಾನು ರಾಜಸ್ಥಾನದಿಂದ ಈಗಷ್ಟೆ ಬಂದಿದ್ದೇನೆ. ಅಲ್ಲಿ ಅದ್ದೂರಿ ಮದುವೆಯಲ್ಲಿ ನಾನು ಪಾಲ್ಗೊಂಡಿದ್ದೆ. ನನ್ನ ಇಡೀ ಜೀವನದಲ್ಲಿ ಅಂತಹ ಮದುವೆಯನ್ನು ನಾನು ನೋಡಿಲ್ಲ ಎಂದು ಹೇಳಿದರೆ ನೀವು ನಂಬುವುದಿಲ್ಲ’ ಎಂದಿದ್ದಾರೆ ಕೀಕು.

ಇದಕ್ಕೆ ಅಚ್ಚರಿಗೊಂಡ ಅಕ್ಷಯ್​ ‘ಏಕೆ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕೀಕು, ‘ನನಗೆ ಅವರು ಮದುವೆ ನೋಡೋಕೆ ಬಿಟ್ಟಿಲ್ಲ. ಆದರೆ, ಮದುವೆ ತುಂಬಾನೇ ಉತ್ತಮವಾಗಿ ನಡೆಯಿತು’ ಎಂದಿದ್ದಾರೆ. ಈ ವೇಳೆ ಅಕ್ಷಯ್​ ಕುಮಾರ್​ ಪರೋಕ್ಷವಾಗಿ ಕತ್ರಿನಾ ಹೆಸರನ್ನು ತಂದು ನಗೆ ಚಟಾಕಿ ಹಾರಿಸಿದ್ದಾರೆ. ‘ನೀವು ಮದುವೆಯಲ್ಲಿ ಕಿಟ್​ಕ್ಯಾಟ್​ ತಿಂದಿರಬೇಕು ಅಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಸಾರಾ ಅಲಿ ಖಾನ್​ ‘ಅತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ನಲ್ಲಿ ಸಾರಾ ಪರ್ಫಾರ್ಮೆನ್ಸ್​ ನೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಕ್ಷಯ್​ ಕುಮಾರ್​, ತಮಿಳು ನಟ ಧನುಷ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಆನಂದ್​ ಎಲ್​. ರಾಯ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕ್ರಿಸ್​ಮಸ್​ ಪ್ರಯುಕ್ತ ಈ ಚಿತ್ರ ಡಿಸೆಂಬರ್ 24ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ.

ಇದನ್ನೂ ಓದಿ: ‘ಸ್ಪೈಡರ್​ ಮ್ಯಾನ್​’ ಚಿತ್ರದ ಮೊದಲ ದಿನದ ಗಳಿಕೆ​ ಇಷ್ಟೊಂದಾ? ಅಕ್ಷಯ್​ ಕುಮಾರ್​ ಕಲೆಕ್ಷನ್​ ಹಿಂದಿಕ್ಕಿದ ’ನೋ ವೇ ಹೋಮ್’

ಫ್ಯೂಚರ್​ ಗಂಡನಿಗೆ ಷರತ್ತು ಹಾಕಿದ ಸಾರಾ ಅಲಿ ಖಾನ್​; ಇದನ್ನು ಪಾಲಿಸದಿದ್ದರೆ ಇಲ್ಲ ಮದುವೆ

Follow us on

Related Stories

Most Read Stories

Click on your DTH Provider to Add TV9 Kannada