‘ರಣಬೀರ್​-ಆಲಿಯಾ ಒಟ್ಟಾಗಿ ನನ್ನ ಸಿನಿಮಾವನ್ನು ಹಾಳು ಮಾಡುತ್ತಿದ್ದಾರೆ ಅನಿಸುತ್ತಿತ್ತು; ‘ಬ್ರಹ್ಮಾಸ್ತ್ರ’ ನಿರ್ದೇಶಕ 

ಈ ಚಿತ್ರಕ್ಕೆ ಆಲಿಯಾ ಭಟ್​ ನಾಯಕಿ, ರಣಬೀರ್​ ನಾಯಕ. ಅಮಿತಾಭ್​ ಬಚ್ಚನ್​, ನಾಗಾರ್ಜುನ, ಮೌನಿ ರಾಯ್​ ಮತ್ತು ಡಿಂಪಲ್​ ಕಪಾಡಿಯ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.

‘ರಣಬೀರ್​-ಆಲಿಯಾ ಒಟ್ಟಾಗಿ ನನ್ನ ಸಿನಿಮಾವನ್ನು ಹಾಳು ಮಾಡುತ್ತಿದ್ದಾರೆ ಅನಿಸುತ್ತಿತ್ತು; ‘ಬ್ರಹ್ಮಾಸ್ತ್ರ’ ನಿರ್ದೇಶಕ 
ರಣಬೀರ್​-ಆಲಿಯಾ
TV9kannada Web Team

| Edited By: Rajesh Duggumane

Dec 18, 2021 | 7:35 PM

ರಣಬೀರ್ ಕಪೂರ್​ (Ranbir Kapoor) ಹಾಗೂ ಆಲಿಯಾ ಭಟ್​ (Alia Bhatt) ನಟನೆಯ ‘ಬ್ರಹ್ಮಾಸ್ತ್ರ’ (Brahmastra ) ಸಿನಿಮಾ ಮುಂದಿನ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ತೆರೆಗೆ ಬರಲಿದೆ. ಸಿನಿಮಾ ಕೆಲಸಗಳು ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಈಗ ನಿಧಾನವಾಗಿ ಚಿತ್ರದ ಬಗ್ಗೆ ಒಂದೊಂದೇ ವಿಚಾರವನ್ನು ಬಿಟ್ಟುಕೊಡಲಾಗುತ್ತಿದೆ. ರಣಬೀರ್​ ಕಪೂರ್​ ಅವರ ಲುಕ್​ಅನ್ನು ಇತ್ತೀಚೆಗೆ ರಿವೀಲ್​ ಮಾಡಲಾಗಿತ್ತು. ಶಿವನ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದರು. ನಿಜ ಜೀವನದ ಲವ್​ಬರ್ಡ್ಸ್​​ ರಣಬೀರ್ ಹಾಗೂ ಆಲಿಯಾ ಮೊದಲ ಬಾರಿಗೆ ತೆರೆಮೇಲೆ ಒಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಈಗ ನಿರ್ದೇಶಕರು ಅಚ್ಚರಿಯ ವಿಚಾರ ಹೊರ ಹಾಕಿದ್ದಾರೆ.

ಅಯಾನ್​ ಮುಖರ್ಜಿ ಈ ಸಿನಿಮಾದ ನಿರ್ದೇಶಕ. ‘ಯೇ ಜವಾನಿ ಹೇ ದಿವಾನಿ’, ‘ವೇಕಪ್​ ಸಿಡ್’​ ನಿರ್ದೇಶಿಸಿದ ಖ್ಯಾತಿ ಅವರಿಗೆ ಇದೆ. ‘ನಾಲ್ಕು ವರ್ಷದ ಹಿಂದೆ ಈ ಸಿನಿಮಾ ಶುರುಮಾಡಿದಾಗ ಆಲಿಯಾ ಹಾಗೂ ರಣಬೀರ್​ ರಿಲೇಶನ್​ಶಿಪ್​ ಈ ರೀತಿ ಇರಲಿಲ್ಲ. ಈ ಸಿನಿಮಾ ಭಿನ್ನವಾಗಿ ಮೂಡಿ ಬರುತ್ತಿದೆ. ಹೀಗಾಗಿ ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂಬುದು ನನ್ನ ಆಸೆ ಆಗಿತ್ತು. ಆದರೆ, ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಾಗ, ‘ನೀವಿಬ್ಬರೂ ಒಟ್ಟಿಗೆ ತಿರುಗಿ ನನ್ನ ಸಿನಿಮಾವನ್ನು ಹಾಳು ಮಾಡುತ್ತಿದ್ದೀರಿ. ದಯವಿಟ್ಟು ಎಲ್ಲಿಗೂ ಹೋಗಬೇಡಿ’ ಎಂದು ಕೋರಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಅಯಾನ್​​ ಮುಖರ್ಜಿ.

ಈ ಚಿತ್ರಕ್ಕೆ ಆಲಿಯಾ ಭಟ್​ ನಾಯಕಿ, ರಣಬೀರ್​ ನಾಯಕ. ಅಮಿತಾಭ್​ ಬಚ್ಚನ್​, ನಾಗಾರ್ಜುನ, ಮೌನಿ ರಾಯ್​ ಮತ್ತು ಡಿಂಪಲ್​ ಕಪಾಡಿಯ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ. ಸಿನಿಮಾ ವಿಳಂಬವಾಗುವ ಬಗ್ಗೆ ಈ ಮೊದಲು ಮಾತನಾಡಿದ್ದ ಆಲಿಯಾ ಭಟ್​, ‘ಇದೊಂದು ವಿಭಿನ್ನ ಚಿತ್ರ. ಉತ್ತಮ ಚಿತ್ರ ಹೆಚ್ಚು ಸಮಯವನ್ನು ಬೇಡುತ್ತದೆ’ ಎಂದಿದ್ದರು.

‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್​ ಒನ್​: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ​’ ಎಂದು ಆಲಿಯಾ ಭಟ್​ ಕನ್ನಡಲ್ಲೇ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಡಬ್ಬಿಂಗ್​ ಸಿನಿಮಾಗಳ ಮೂಲಕ ಆಲಿಯಾ ಭಟ್​ ಅವರು ಕರ್ನಾಟಕದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:  ಮದುವೆ ವಿಚಾರದಲ್ಲಿ ನಿರ್ಧಾರ ಬದಲಿಸಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಹರಿದಾಡಿದ ಹೊಸ ಸುದ್ದಿ

ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada