ಮದುವೆ ವಿಚಾರದಲ್ಲಿ ನಿರ್ಧಾರ ಬದಲಿಸಿದ ಆಲಿಯಾ ಭಟ್-ರಣಬೀರ್ ಕಪೂರ್; ಹರಿದಾಡಿದ ಹೊಸ ಸುದ್ದಿ
Alia Bhatt Ranbir Kapoor Wedding: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಬಗ್ಗೆ ಹೊಸ ಹೊಸ ಅಪ್ಡೇಟ್ ಕೇಳಿಬರುತ್ತಿದೆ. ವಿವಾಹ ನಡೆಯುವ ಸ್ಥಳದ ಬಗ್ಗೆ ಈ ಜೋಡಿ ಒಂದು ಮುಖ್ಯ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಬಾಲಿವುಡ್ನಲ್ಲೀಗ ಮದುವೆ ಸೀಸನ್ ಶುರು ಆಗಿದೆ. ಅನೇಕ ಸ್ಟಾರ್ ಕಲಾವಿದರು ಹಸೆಮಣೆ ಏರುತ್ತಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮದುವೆಗಳೆಲ್ಲ ಈಗ ನಡೆಯುತ್ತಿವೆ. ಇತ್ತೀಚೆಗಷ್ಟೇ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಅದ್ದೂರಿಯಾಗಿ ಸಪ್ತಪದಿ ತುಳಿದರು. ಈಗ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರು ವಿಕ್ಕಿ ಜೈನ್ ಜತೆ ಮದುವೆ ಆಗುತ್ತಿದ್ದಾರೆ. ಈ ನಡುವೆ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ವಿವಾಹದ ಕುರಿತು ಹೊಸ ಸುದ್ದಿ ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಜೋಡಿಯ ಮದುವೆ ಆಗಿರಬೇಕಿತ್ತು. ಆದರೆ ಕಾರಣಂತರಗಳಿಂದ ಮದುವೆ ದಿನಾಂಕ ಪದೇಪದೇ ಮುಂದೂಡಲ್ಪಡುತ್ತಲೇ ಇದೆ. ಅದೇ ರೀತಿ ಮದುವೆ ನಡೆಯುವ ಸ್ಥಳದ ಬಗ್ಗೆಯೂ ಈ ಜೋಡಿಹಕ್ಕಿಗಳು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗಿದೆ.
ಬಾಲಿವುಡ್ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳಿ ಮದುವೆ ಆಗುವುದು ಟ್ರೆಂಡ್. ರಾಜಸ್ಥಾನ, ಗೋವಾ ಮುಂತಾದ ಸ್ಥಳಗಳಲ್ಲೂ ಸೆಲೆಬ್ರಿಟಿಗಳ ಮದುವೆ ನೆರವೇರುತ್ತವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಅದೇ ರೀತಿ ಪ್ಲ್ಯಾನ್ ಇಟ್ಟುಕೊಂಡಿದ್ದರು. ಆದರೆ ಈಗ ಬೇರೆ ನಿರ್ಧಾರ ತೆಗೆದುಕೊಂಡಿದ್ದಾರೆ. ಬೇರೆಲ್ಲಿಗೂ ತೆರಳದೇ, ಮುಂಬೈನಲ್ಲೇ ಸಪ್ತಪದಿ ತುಳಿಯಲು ತೀರ್ಮಾನಿಸಿದ್ದಾರೆ. ಅದಕ್ಕೆ ಒಂದು ಬಲವಾದ ಕಾರಣ ಕೂಡ ಇದೆ.
ಆಲಿಯಾ ಭಟ್ ತಂದೆ ಮಹೇಶ್ ಭಟ್ ಅವರಿಗೆ ಈಗ ವಿದೇಶಕ್ಕೆ ಪ್ರಯಾಣ ಮಾಡುವುದು ಕಷ್ಟ ಆಗುತ್ತಿದೆ ಎನ್ನಲಾಗಿದೆ. ಆ ಕಾರಣದಿಂದ ಮದುವೆಯನ್ನು ಮುಂಬೈನಲ್ಲೇ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಮದುವೆಗೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುವುದು ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ವಿಚಾರಗಳ ಬಗ್ಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ನೇರವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.
ಆಲಿಯಾ ಮತ್ತು ರಣಬೀರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಅವರಿಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಗಮನಿಸಿದರೆ ಗೊತ್ತಾಗುತ್ತದೆ. ಈ ವರ್ಷ ದೀಪಾವಳಿ ಹಬ್ಬವನ್ನು ಅವರು ಜೊತೆಯಾಗಿ ಆಚರಿಸಿದ್ದರು. ಅನೇಕ ಪಾರ್ಟಿಗಳಿಗೆ ಒಟ್ಟಾಗಿ ತೆರಳಿದ್ದುಂಟು. ‘ಒಂದು ವೇಳೆ ಲಾಕ್ಡೌನ್ ಇಲ್ಲದೇ ಇದ್ದಿದ್ದರೆ ಇಷ್ಟುಹೊತ್ತಿಗಾಗಲೇ ನಮ್ಮ ಮದುವೆ ಆಗಿರುತ್ತಿತ್ತು’ ಎಂದು ಒಂದು ಸಂದರ್ಶನದಲ್ಲಿ ರಣಬೀರ್ ಹೇಳಿಕೊಂಡಿದ್ದರು.
ಇದನ್ನೂ ಓದಿ:
RRR ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್ ಚರಣ್, ಜ್ಯೂ. ಎನ್ಟಿಆರ್ ಹೇಳಿದ್ದೇನು?
ಆಲಿಯಾಗೆ ಲಿಪ್ ಲಾಕ್ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್ ಮಾಡಿದ ರಣವೀರ್ ಸಿಂಗ್? ಏನಿದು ಕಥೆ?