2022ರ IIFA ಉತ್ಸವವನ್ನು ನಿರೂಪಣೆ ಮಾಡಲಿದ್ದಾರೆ ಬಾಲಿವುಡ್ ನಟ ಸಲ್ಮಾನ್ ಖಾನ್
ಇಂಟರ್ನ್ಯಾಷನಲ್ ಫಿಲ್ಮ್ ಅಕಾಡೆಮಿಯ ಫಿಲ್ಮ ಫೆಸ್ಟಿವಲ್ IIFA ಅನ್ನು ಈ ಬಾರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟ್ ,ಮಾಡಲಿದ್ದಾರೆ. ಅಬುದಾಬಿಯ ಯಾಸ್ ಲ್ಯಾಂಡ್ ನಲ್ಲಿ ಈ ಬಾರಿಯ IIFA ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಇಂಟರ್ನ್ಯಾಷನಲ್ ಫಿಲ್ಮ್ ಅಕಾಡೆಮಿಯ ಫಿಲ್ಮ ಫೆಸ್ಟಿವಲ್ IIFA ಅನ್ನು ಈ ಬಾರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟ್ ,ಮಾಡಲಿದ್ದಾರೆ. ಅಬುದಾಬಿಯ ಯಾಸ್ ಲ್ಯಾಂಡ್ ನಲ್ಲಿ ಈ ಬಾರಿಯ IIFA ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 2022ರ ಮಾರ್ಚ್ 18 ಹಾಗೂ 19ರಂದು 22ನೇ ಆವೃತ್ತಿಯ IIFA ಅವಾರ್ಡ್ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಐಸ್ ಲ್ಯಾಂಡ್ನ ಸ್ಟೇಟ್ ಆಫ್ ಆರ್ಟ್ ಇನ್ಡೋರ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಅಬುದಾಬಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬುದಾಬಿಯ ಕ್ಯುರೇಟಲ್ ಮಿರಾಲ್ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತದ75ನೇ ವರ್ಷದ ಸ್ವಾತಂತ್ರ್ಯ ದಿನ ಹಾಗ ಯುಎಇಯ ಸುವರ್ಣ ಮಹೋತ್ಸವ ವರ್ಷದ ಆಚರಣೆಯನ್ನು ಮುಖ್ಯವಾಗಿ ಪರಿಗಣಿಸಿ ಈ ಬಾರಿ IIFA ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಸಿನಿಮಾ ಇತಿಹಾಸವನ್ನು ಪರಿಚಯಿಸಲಾಗುತ್ತಿದ್ದು ಜಗತ್ತಿನ ಎಲ್ಲಾ ತಾರೆಯರು ಈ ಬಾರಿಯ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಭಾರತದ ಚಲನಚಿತ್ರ ಉದ್ಯಮಕ್ಕೆ ಈ ಕಾರ್ಯಕ್ರಮ ವಿಶೇಷವಾಗಿದೆ. ಜತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ಇನ್ನೊಂದು ವಿಶೇಷವಾಗಿದೆ. ಈ ಬಗ್ಗೆ ಸಲ್ಮಾನ್ ಖಾನ್ IIFA ಕಾರ್ಯಕ್ರಮ ನಿರೂಪಣೆ ನನ್ನ ನೆಚ್ಚಿನ ಕೆಲಸವಾಗಿದೆ. ಅದರಲ್ಲೂ ಈ ಬಾರಿಯ IIFAlದಲ್ಲಿ ಭಾರತದ 75ನೇ ಸ್ವಾತಂತ್ರ್ಯ ದಿನ ಹಾಗೂ ಯುಎಇಯ 50ನೇ ವರ್ಷವನ್ನು ಆಚರಿಸುತ್ತಿರುವುದು ಖುಷಿಯ ಸಂಗತಿ. ಅಬುದಾಬಿ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದು. ಅಲ್ಲಿಗೆ ಹೋಗಿ ನಾನು ನಿರೂಪಣೆ ಮಾಡುತ್ತಿರುವುದು ಹೊಸ ಅನುಭವವನ್ನು ನೀಡಲಿದೆ ಎಂದು ಹೇಳಿದ್ದಾರೆ.
IIFA ಅವಾರ್ಡ್ ಕಾರ್ಯಕ್ರಮ ಜಗತ್ತಿನ ಅತ್ಯುತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದೆ. ಭಾರತದ ಹಲವು ತಾರೆಯರು, ಹಲವು ಚಿತ್ರಗಳು ಈ ವರೆಗೆ IIFA ಅವಾರ್ಡ್ ಅನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಅಂದರೆ 2021ರ 21ನೇ ಆವೃತ್ತಿಯ IIFAದಲ್ಲಿ ಕಬೀರ್ ಸಿಂಗ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ: