RRR​ ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಹೇಳಿದ್ದೇನು?

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಕನ್ನಡಕ್ಕೂ ಡಬ್​ ಆಗಿದೆ. 2022ರ ಜ.7ರಂದು ತೆರೆಕಾಣಲಿರುವ ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ.

TV9kannada Web Team

| Edited By: Madan Kumar

Dec 10, 2021 | 11:59 AM

ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾ ತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಕನ್ನಡಕ್ಕೂ ಈ ಸಿನಿಮಾ ಡಬ್​ ಆಗಿದೆ. ಹಾಗಾಗಿ ಕರ್ನಾಟಕದಲ್ಲೂ ಪ್ರಚಾರ ಮಾಡಲಾಗುತ್ತಿದೆ. ನಿರ್ದೇಶಕ ರಾಜಮೌಳಿ ಅವರ ಜತೆ ಕಲಾವಿದರಾದ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​ ಕೂಡ ಬೆಂಗಳೂರಿಗೆ ಬಂದು ತಮ್ಮ ಸಿನಿಮಾದ ಪ್ರಚಾರ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ‘ಆರ್​ಆರ್​ಆರ್​’ ಚಿತ್ರ ಮೂಡಿಬಂದಿದೆ. ಡಿ.9ರಂದು ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. 2022ರ ಜ.7ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ‘ಬಾಹುಬಲಿ’ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶಿಸಿರುವ ಸಿನಿಮಾ ಇದಾಗಿರುವುದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಆರ್​ಆರ್​ಆರ್​’ ತಂಡದ ಸುದ್ದಿಗೋಷ್ಠಿ ವಿಡಿಯೋ ಇಲ್ಲಿದೆ..

ಇದನ್ನೂ ಓದಿ:

RRR Trailer: ದೃಶ್ಯ ವೈಭವಕ್ಕೆ ಸಾಕ್ಷಿಯಾದ ‘ಆರ್​ಆರ್​ಆರ್​’ ಟ್ರೇಲರ್​; ಕೌತುಕ ಹೆಚ್ಚಿಸಿದ ರಾಜಮೌಳಿ

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

Follow us on

Click on your DTH Provider to Add TV9 Kannada