‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

Drishya 2: ಸೆಲೆಬ್ರಿಟಿಗಳಿಗಾಗಿ ‘ದೃಶ್ಯ 2’ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಉಪೇಂದ್ರ, ಮೇಘನಾ ರಾಜ್​, ಧ್ರುವ ಸರ್ಜಾ, ಪ್ರೇರಣಾ ಮುಂತಾದವರ ಜತೆ ಕುಳಿತು ರವಿಚಂದ್ರನ್​ ಕೂಡ ಸಿನಿಮಾ ವೀಕ್ಷಿಸಿದರು.

TV9kannada Web Team

| Edited By: Madan Kumar

Dec 10, 2021 | 10:04 AM

ರವಿಚಂದ್ರನ್​ (Ravichandran) ನಟನೆಯ ಬಹುನಿರೀಕ್ಷಿತ ‘ದೃಶ್ಯ 2’ (Drishya 2) ಚಿತ್ರ ಬಿಡುಗಡೆ ಆಗಿದೆ. ಗುರುವಾರ (ಡಿ.9) ರಾತ್ರಿಯೇ ಈ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ‘ದೃಶ್ಯ 2’ ವೀಕ್ಷಿಸಿದ್ದಾರೆ. ಉಪೇಂದ್ರ, ಮೇಘನಾ ರಾಜ್​, ಧ್ರುವ ಸರ್ಜಾ, ಪ್ರೇರಣಾ ಸೇರಿದಂತೆ ಅನೇಕರು ಸಿನಿಮಾ ನೋಡಿದ್ದಾರೆ. ರವಿಚಂದ್ರನ್​ ಕೂಡ ಎಲ್ಲರ ಜೊತೆ ಕುಳಿತು ‘ದೃಶ್ಯ 2’ ಕಣ್ತುಂಬಿಕೊಂಡರು. ಬಳಿಕ ಮಾತನಾಡಿದ ಅವರು ರಾಜೇಂದ್ರ ಪೊನ್ನಪ್ಪ ಪಾತ್ರದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ ಎಂದು ಅವರು ಹೇಳಿದರು. ಈ ಚಿತ್ರಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್​ ಜತೆ ನವ್ಯಾ ನಾಯರ್​, ಆರೋಹಿ ನಾರಾಯಣ್​​, ಅನಂತ್​ ನಾಗ್​, ಪ್ರಮೋದ್​ ಶೆಟ್ಟಿ, ಲಾಸ್ಯಾ ನಾಗರಾಜ್​ ಮುಂತಾದವರು ‘ದೃಶ್ಯ 2’ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್​ ನಿರ್ಧಾರ; ಹೊಸ ಹೆಸರು ಏನು?

Follow us on

Click on your DTH Provider to Add TV9 Kannada