ರವಿಚಂದ್ರನ್ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್ ನೀಡಿದ ವಿವರಣೆ ಇಲ್ಲಿದೆ..
‘ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ ಅಂತ ತೀರ್ಮಾನ ಮಾಡಿದೆ. ಪ್ರತಿದಿನ ಕನ್ನಡ ದಿನಪತ್ರಿಕೆ ಜೋರಾಗಿ ಓದಲು ಆರಂಭಿಸಿದೆ’ ಎಂದು ಮನುರಂಜನ್ ರವಿಚಂದ್ರನ್ ಹೇಳಿದ್ದಾರೆ.
ಮನುರಂಜನ್ ರವಿಚಂದ್ರನ್ (Crazy Star Ravichandran) ನಟನೆಯ ‘ಮುಗಿಲ್ ಪೇಟೆ’ (Mugilpete) ಸಿನಿಮಾ ತೆರೆಕಂಡು ಜನಮೆಚ್ಚುಗೆ ಗಳಿಸಿಕೊಂಡಿದೆ. ಪುತ್ರನ ನಟನೆ ಕಂಡು ರವಿಚಂದ್ರನ್ ಕೂಡ ಇಷ್ಟಪಟ್ಟಿದ್ದಾರೆ. ಮಗನ ಸಿನಿಪಯಣದ ಬಗ್ಗೆ ‘ಕ್ರೇಜಿ ಸ್ಟಾರ್’ ಮಾತನಾಡಿದ್ದಾರೆ. ಮನುರಂಜನ್ (Manuranjan Ravichandran) ಅವರಿಗೆ ಕನ್ನಡದ ಮೇಲೆ ಅಷ್ಟೇನೂ ಹಿಡಿತ ಇರಲಿಲ್ಲ. ಹಾಗಾಗಿ ಕನ್ನಡವನ್ನು ಸರಿಯಾಗಿ ಕಲಿಯುವಂತೆ ಪುತ್ರನಿಗೆ ರವಿಚಂದ್ರನ್ ತಾಕೀತು ಮಾಡಿದ್ದರು. ಅದರ ಪರಿಣಾಮವಾಗಿ ಮನುರಂಜನ್ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡರು. ಆ ಕುರಿತು ಟಿವಿ9 ಸಂದರ್ಶನದಲ್ಲಿ ಮನುರಂಜನ್ ಮಾತನಾಡಿದ್ದಾರೆ. ತಂದೆಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ‘ಈ ವರ್ಷ ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ ಅಂತ ತೀರ್ಮಾನ ಮಾಡಿದ್ದೆ. ಮನೆಯಲ್ಲಿ ಎಲ್ಲರ ಜತೆ ಕನ್ನಡದಲ್ಲೇ ಮಾತನಾಡಲು ಶುರುಮಾಡಿದೆ. ಪ್ರತಿದಿನ ಕನ್ನಡ ದಿನಪತ್ರಿಕೆ ಜೋರಾಗಿ ಓದಲು ಆರಂಭಿಸಿದೆ’ ಎಂದು ಮನುರಂಜನ್ ಹೇಳಿದ್ದಾರೆ.
ಇದನ್ನೂ ಓದಿ:
ರವಿಚಂದ್ರನ್ ಜತೆ ಸುದೀಪ್ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್ ಆಗಿದ್ದು ಹೇಗೆ?
‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್