ನಾನು ಬೇಕಾದ್ರೆ ಈಗ್ಲೇ ಸಾಯಲಿ, ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ ಎಂದ ಅಜ್ಜಿ; ವಿಡಿಯೋ ನೋಡಿ

ಕುಷ್ಟಗಿ ತಾಲೂಕಿನ ತುಮ್ಮರಿಕೊಪ್ಪದಲ್ಲಿ ವೃದ್ಧೆ ಲಸಿಕೆ ಬೇಡ ಅಂತ ನಿರಾಕರಿಸಿದ್ದಾರೆ. ನಾನು ಸಾಯಲಿ, ಆದರೆ ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ರಂಗಮ್ಮ ಹಠ ಮಾಡಿದ್ದಾರೆ.

ಆರೋಗ್ಯ ಕೇಂದ್ರದ ಸಿಬ್ಬಂದಿ ಲಸಿಕೆ ಹಾಕಲು ಹೋದಾಗ ವ್ಯಕ್ತಿಯೊಬ್ಬ ದೇವರು ಬಂದಂತೆ ವರ್ತಿಸಿದ್ದಾರೆ. ಲಸಿಕಾ ಸಿಬ್ಬಂದಿಗಳು ಮನೆ ಬಳಿ ಹೋಗುತ್ತಿದ್ದಂತೆ ಕುದುರೆ, ಕುದುರೆ ಬೇಕು ಅಂತ ವಿಲಕ್ಷಣ ವರ್ತನೆ ತೋರಿದ್ದಾರೆ. ರಾಮಣ್ಣ ಯಲಬುರ್ತಿ ವಿಲಕ್ಷಣವಾಗಿ ವರ್ತಿಸಿದ ವ್ಯಕ್ತಿ. ಆರೋಗ್ಯ ಇಲಾಖೆ ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಮನವೊಲಿಸಲು ಯತ್ನಿಸಿದರೂ ವಿಫಲವಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ನೊಂದು ಕಡೆ ವೃದ್ಧೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಕುಷ್ಟಗಿ ತಾಲೂಕಿನ ತುಮ್ಮರಿಕೊಪ್ಪದಲ್ಲಿ ವೃದ್ಧೆ ಲಸಿಕೆ ಬೇಡ ಅಂತ ನಿರಾಕರಿಸಿದ್ದಾರೆ. ನಾನು ಸಾಯಲಿ, ಆದರೆ ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ರಂಗಮ್ಮ ಹಠ ಮಾಡಿದ್ದಾರೆ. ನನಗೆ ಆಧಾರ ಕಾರ್ಡ್ ಬೇಕು, ಪಗಾರ ಬೇಕು ಮಾಡಿಸಿ ಕೊಡಿ ಎಂದ ರಂಗಮ್ಮ, ನಾನು ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಕ್ಕೆ ಬಿಡಲ್ಲ ಅಂತ ಪಟ್ಟು ಬಿದ್ದಿದ್ದಾರೆ.

Published On - 12:11 pm, Sun, 28 November 21

Click on your DTH Provider to Add TV9 Kannada