‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​

‘ಮುಗಿಲ್​ಪೇಟೆ’ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಮನುರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲ್​ಪೇಟೆ’ ಚಿತ್ರ ಬಿಡುಗಡೆ ಆಗಿದೆ. ಪ್ರೇಕ್ಷಕರು ಈ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಅದೇ ರೀತಿ, ‘ಕ್ರೇಜಿ ಸ್ಟಾರ್​’ ರವಿಚಂದ್ರನ್ ಅವರು ಕೂಡ ‘ಮುಗಿಲ್​ಪೇಟೆ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸಾಧುಕೋಕಿಲ ಅವರ ಪಾತ್ರ ಈ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಅವರು ನನಗೆ ಸಿಕ್ಕಿದ್ದರೆ ಅವರಿಗೆ ಒಂದೆರಡು ಏಟು ಇನ್ನೂ ಚೆನ್ನಾಗಿ ಬಿದ್ದಿರುತ್ತಿತ್ತು. ಸರಿಯಾಗಿ ಒದೆಯುತ್ತಿದ್ದೆ. ನನ್ನ ಮಗನಿಗೆ ಹೊಡೆಯೋಕೆ ಬಂದಿಲ್ಲ. ಸಾಧು ಎಷ್ಟು ಒದೆ ತಿನ್ನುತ್ತಾರೋ ಸಿನಿಮಾ ಅಷ್ಟು ಚೆನ್ನಾಗಿ ಇರುತ್ತದೆ. ಸಾಕಷ್ಟು ಗೆಟಪ್​ಗಳನ್ನು ಹಾಕಿಕೊಂಡು ಇಡೀ ಸಿನಿಮಾವನ್ನು ತಮಾಷೆಯಾಗಿ ಕಟ್ಟಿಕೊಡಲು ಅವರ ಪಾತ್ರ ಮುಖ್ಯವಾಗಿದೆ’ ಎಂದು ರವಿಚಂದ್ರನ್​ ಹೇಳಿದ್ದಾರೆ. ಈ ಚಿತ್ರದಲ್ಲಿ ಮನುರಂಜನ್​ಗೆ ಜೋಡಿಯಾಗಿ ಹೊಸ ನಟಿ ಖಯಾದು ಲೋಹರ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ:

‘ಶಾಂತಿ ಕ್ರಾಂತಿ’ ಶೂಟಿಂಗ್​ನಲ್ಲಿ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್​ ತರಿಸಿದ್ದರು ರವಿಚಂದ್ರನ್​: ದೊಡ್ಡಣ್ಣ

ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್​; ಮಜಾ ಟಾಕೀಸ್​ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್​’ ವಿಡಿಯೋ ವೈರಲ್​

Click on your DTH Provider to Add TV9 Kannada