AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ ರೇಲ್ವೇ ಅಂಡರ್​ಪಾಸ್​​​​ನಲ್ಲಿ ನಿಂತ ನೀರಿಂದ ಗ್ರಾಮಸ್ಥರಿಗೆ ತೊಂದರೆ, ದೂರಿಗೆ ರೇಲ್ವೇಸ್ ಕ್ಯಾರಿಲ್ಲ!

ದೇವನಹಳ್ಳಿ ರೇಲ್ವೇ ಅಂಡರ್​ಪಾಸ್​​​​ನಲ್ಲಿ ನಿಂತ ನೀರಿಂದ ಗ್ರಾಮಸ್ಥರಿಗೆ ತೊಂದರೆ, ದೂರಿಗೆ ರೇಲ್ವೇಸ್ ಕ್ಯಾರಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 20, 2021 | 5:32 PM

ಅಕ್ಕುಪೇಟೆ ಮತ್ತು ಬೊಮ್ಮವರ ಜನ ಸಿಟಿಗೆ ಬರಬೇಕಾದರೆ, 5-6 ಕಿಮೀಗಳಷ್ಟು ಸುತ್ತು ಹಾಕ್ಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಸಿಟಿ ಕಡೆಯಿಂದ ಅಲ್ಲಿಗೆ ಹೋಗಬೇಕಾದರೂ ಸುತ್ತು ಹಾಕ್ಕೊಂಡೇ ಹೋಗಬೇಕು.

ದೇವನಹಳ್ಳಿಗೆ ಹತ್ತಿರದಲ್ಲಿರುವ ಅಕ್ಕುಪೇಟೆ ಮತ್ತು ಬೊಮ್ಮವರ ಗ್ರಾಮಗಳಿಗೆ ಹೋಗುವ ಸಂದರ್ಭ ನಿಮಗೇನಾದರೂ ಎದುರಾಗಿದ್ದರೆ, ಖಂಡಿತವಾಗಿಯೂ ಈ ರಸ್ತೆಯನ್ನು ಬಳಸಿ ಹೋಗುವ ಪ್ರಯತ್ನ ಮಾಡಬೇಡಿ. ಯಾಕೆ ಅಂತ ಟಿವಿ9 ದೇವನಹಳ್ಳಿ ಪ್ರತಿನಿಧಿ ನವೀನ್ ವಿವರಿಸುತ್ತಾರೆ. ಆಫ್ಕೋರ್ಸ್ ಜನ ಮತ್ತು ವಾಹನಗಳ ಓಡಾಟಕ್ಕೆ ಅನುಕೂಲವಾಗಲೆಂದೇ ರೇಲ್ವೇ ಇಲಾಖೆಯವರು ಈ ಅಂಡರ್ ಪಾಸನ್ನು ನಿರ್ಮಿಸಿದ್ದಾರೆ. ಅದರೆ ಅದರ ಸ್ಥಿತಿ ಏನಾಗಿದೆ ನೋಡಿ. ಮೇಲುನೋಟಕ್ಕೆ ಇಲ್ಲಿ ಸ್ವಲ್ಪ ನೀರು ನಿಂತಹಾಗೆ ಕಾಣುತ್ತದೆ. ಆದರೆ ಅಸಲಿಗೆ ಇಲ್ಲಿ ನಾಲ್ಕು ಅಡಿಗಳಿಗಿಂತ ಜಾಸ್ತಿ ಎತ್ತರ ನೀರು ಶೇಖರಗೊಂಡಿದೆ. ಇದಕ್ಕೆ ಪುರಾವೆ ಬೇಕಾದರೆ ಆ ಬದಿಯಿಂದ ಬರುತ್ತಿರುವ ಬೈಕರ್ನನ್ನು ನೋಡಿ. ಅವರು ನೀರಿನ ಆಳ ಜಾಸ್ತಿ ಇರಲಾರದೆಂದೇ ದಾಟುವ ಪ್ರಯತ್ನ ಮಾಡುತ್ತಾರೆ. ಆದರೆ 3-4 ಅಡಿಗಳಷ್ಟು ಮುಂದೆ ಬರುವಷ್ಟರಲ್ಲಿ ಅವರ ಬೈಕ್ ಅರ್ಧ ಭಾಗದಷ್ಟು ಮುಳುಗಿ ಎಂಜಿನ್ ಆಫ್ ಆಗಿಬಿಡುತ್ತದೆ. ಅವರು ವಾಹನವನ್ನು ವಾಪಸ್ಸು ಎಳೆದುಕೊಂಡು ಹೋಗುತ್ತಿರುವುದನ್ನು ನೀವು ನೋಡಬಹುದು.

ಅಕ್ಕುಪೇಟೆ ಮತ್ತು ಬೊಮ್ಮವರ ಜನ ಸಿಟಿಗೆ ಬರಬೇಕಾದರೆ, 5-6 ಕಿಮೀಗಳಷ್ಟು ಸುತ್ತು ಹಾಕ್ಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಸಿಟಿ ಕಡೆಯಿಂದ ಅಲ್ಲಿಗೆ ಹೋಗಬೇಕಾದರೂ ಸುತ್ತು ಹಾಕ್ಕೊಂಡೇ ಹೋಗಬೇಕು. ಇದರಿಂದಾಗಿ ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಜನಕ್ಕೆ ಬಹಳ ತೊಂದರೆಯಾಗುತ್ತಿದೆ. ಸ್ಥಳೀಯರೊಬ್ಬರು ತಮಗಾಗುತ್ತಿರುವ ತೊಂದರೆಯನ್ನು ನವೀನ್ ಅವರಿಗೆ ವಿವರಿಸಿದ್ದಾರೆ.

ಎರಡೂ ಗ್ರಾಮಗಳ ಜನರು ರೇಲ್ವೇ ಇಲಾಖೆಗೆ ಪತ್ರ ಬರೆದು ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದಾರೆ. ಅದರೆ ಇಲಾಖೆಯ ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗುತ್ತಿಲ್ಲ. ಹರಿದು ಬರುವ ನೀರಿಗೆ ಔಟ್​​ ಲೆಟ್​ ಕಲ್ಪಿಸಿದರೆ ಸಮಸ್ಯೆ ನಿವಾರಣೆ ಅಗುತ್ತದೆ.​

ಇದನ್ನೂ ಓದಿ:  ಹಾಡುವಾಗಲೇ ಖ್ಯಾತ ಗಾಯಕಿ ಮೇಲೆ ಬಕೆಟ್​​ಗಟ್ಟಲೆ ಹಣ ಸುರಿದ ಅಭಿಮಾನಿಗಳು; ವೈರಲ್​ ಆಯ್ತು ವಿಡಿಯೋ