ಹಾಡುವಾಗಲೇ ಖ್ಯಾತ ಗಾಯಕಿ ಮೇಲೆ ಬಕೆಟ್ಗಟ್ಟಲೆ ಹಣ ಸುರಿದ ಅಭಿಮಾನಿಗಳು; ವೈರಲ್ ಆಯ್ತು ವಿಡಿಯೋ
ಗಾಯಕಿ ಊರ್ವಶಿ ರಾಧಾದಿಯಾ ಅವರು ಗುಜರಾತ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ.
ಫ್ಯಾನ್ಸ್ ತಮ್ಮ ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ ಮಾಡುವುದು, ಉರುಳು ಸೇವೆ ಮಾಡುವುದು, ಅನ್ನದಾನ ಮಾಡುವುದು ಮತ್ತಿತ್ಯಾದಿ ವಿಚಾರಗಳು ಸಾಮಾನ್ಯ ಎನ್ನಬಹುದು. ಆದರೆ, ಗುಜರಾತ್ನಲ್ಲಿ ನಡೆದ ಘಟನೆ ತುಂಬಾನೇ ಭಿನ್ನವಾಗಿತ್ತು. ಖ್ಯಾತ ಗಾಯಕಿ ಮೇಲೆ ಅಭಿಮಾನಿಗಳು ದುಡ್ಡಿನ ಮಳೆ ಸುರಿದಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ನಿಜಕ್ಕೂ ಶಾಕ್ ಆಗಿದ್ದಾರೆ. ಏಕೆಂದರೆ, ವೇದಿಕೆ ಸಂಪೂರ್ಣವಾಗಿ ನೋಟುಗಳಿಂದ ತುಂಬಿ ಹೋಗಿತ್ತು.
ಗಾಯಕಿ ಊರ್ವಶಿ ರಾಧಾದಿಯಾ ಅವರು ಗುಜರಾತ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಇತ್ತೀಚೆಗೆ ತುಳಸಿ ವಿವಾಹ ಕಾರ್ಯಕ್ರಮದ ನಿಮಿತ್ತ ಅವರು ಪ್ರೋಗ್ರಾಮ್ ಒಂದನ್ನು ನೀಡಿದ್ದರು. ವೇದಿಕೆ ಮೇಲೆ ಅವರು ಹಾರ್ಮೋನಿಯಂ ನುಡಿಸುತ್ತಾ ಹಾಡುತ್ತಿದ್ದರು. ಅವರ ಹಾಡುಕೇಳಿ ಕೆಳಗೆ ಕೂತಿದ್ದ ಪ್ರೇಕ್ಷಕರು ಸಿಳ್ಳೆ ಹೊಡೆಯೋಕೆ ಪ್ರಾರಂಭಿಸಿದರು. ಕೆಲವರು ನೋಟುಗಳನ್ನು ಎಸೆದರು.
ನಂತರ ಸಾಲುಸಾಲು ಮಂದಿ ನೋಟುಗಳನ್ನು ಎಸೆಯೋಕೆ ಆರಂಭಿಸಿದರು. ಪರಿಣಾಮ ಅವರ ಮೇಲೆ ನೋಟಿನ ಮಳೆಯೇ ಸುರಿದಿತ್ತು. ಕೆಲವರು ಬಕೆಟ್ನಲ್ಲಿ ತಂದು ಹಣ ಸುರಿದರು. ಅವರ ಹಾರ್ಮೋನಿಯಂ ಮೇಲೆ ಹಣ ಬೀಳುತ್ತಿದ್ದರೂ ಅದನ್ನು ಸರಿಸಿ ಹಾಡು ಹೇಳುವುದನ್ನು ಮುಂದುವರಿಸಿದ್ದರು ಊರ್ವಶಿ. ಅವರ ಬದ್ಧತೆ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಸ್ವತಃ ಊರ್ವಶಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಅಮೂಲ್ಯ ಪ್ರೀತಿ’ ಎನ್ನುವ ಕ್ಯಾಪ್ಶನ್ ನೀಡಿದ್ದು, ಹಣದ ಮಳೆ ಎನ್ನುವ ಹ್ಯಾಶ್ಟ್ಯಾಗ್ ನೀಡಿದ್ದಾರೆ. ಅಹಮದಾಬಾದ್ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಇಷ್ಟೊಂದು ಹಣ ತೆಗೆದುಕೊಂಡು ಎನು ಮಾಡುತ್ತೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಧ್ವನಿಯಲ್ಲಿರುವ ಮ್ಯಾಜಿಕ್ ಇದು ಎಂದು ಇನ್ನೂ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಊರ್ವಶಿ ಅವರಿಗೆ ಗುಜರಾತಿನಲ್ಲಿ ಸಾಕಷ್ಟು ಹೆಸರಿದೆ. ದಿಗ್ಗಜರು ಇದ್ದ ವೇದಿಕೆಯಲ್ಲಿ ಹಾಡಿ ಅವರು ಸಾಕಷ್ಟು ಬಾರಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ: Kartik Aaryan: ಲ್ಯಾಂಬೋರ್ಗಿನಿಯಲ್ಲಿ ತೆರಳಿ ರಸ್ತೆ ಬದಿ ತಿಂಡಿ ಸವಿದ ಕಾರ್ತಿಕ್ ಆರ್ಯನ್
ಶಾರುಖ್ ಖಾನ್ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್ಗೆ ಸಹಿ