AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಡಬಿಡದ ಮಳೆ ಮತ್ತು ಪ್ರವಾಹಗಳಿಗೆ ತುತ್ತಾಗಿರುವ ಆಂಧ್ರಪದ್ರದೇಶದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಾಣುತ್ತಿವೆ

ಎಡಬಿಡದ ಮಳೆ ಮತ್ತು ಪ್ರವಾಹಗಳಿಗೆ ತುತ್ತಾಗಿರುವ ಆಂಧ್ರಪದ್ರದೇಶದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಾಣುತ್ತಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 20, 2021 | 4:28 PM

ಈ ಹಸುಳೆ ಪ್ರಪಂಚವನ್ನು ನೋಡುವ ಮಾತು ಹಾಗಿರಲಿ, ತನ್ನ ಹೆತ್ತಮ್ಮನನ್ನು ಸಹ ಕಣ್ಣು ತೆರೆದು ಗುರುತು ಹಿಡಿಯಲು ಸಾಧ್ಯವಾಗುವ ಮೊದಲೇ ಕಣ್ಣು ಮುಚ್ಚಿದೆ. ಪ್ರಕೃತಿ ವಿಕೋಪ ಅನ್ನೋದು ಬಹಳ ಕ್ರೂರಿಯೂ ಹೌದು

ಈ ದೃಶ್ಯ ಹೃದಯವಿದ್ರಾವಕವಾಗಿದೆ. ನೈಸರ್ಗಿಕ ವಿಕೋಪಗಳ ಎದುರು ಮಾನವ ಅಕ್ಷರಶಃ ನಿಸ್ಸಾಹಯಕ ಅನ್ನೋದಕ್ಕೆ ಸದರಿ ವಿಡಿಯೋ ಸಾಕ್ಷಿಯಗಿದೆ. ಬಂಗಾಳ ಕೊಲ್ಲಿ ಮೇಲೆ ಉಂಟಾಗಿರುವ ವಾಯುಭಾರ ಕುಸಿತದಿಂದ ಆಂಧ್ರಪ್ರದೇಶ ಬಹುತೇಕ ಬಾಗಗಳಲ್ಲಿ ಮಳೆ ಧೋ ಅಂತ ಸುರಿಯುತ್ತಿದೆ. ನದಿಗಳು ಉಕ್ಕಿಹರಿಯುತ್ತಿವೆ, ಹಲವಾರು ಕಡೆಗಳಲ್ಲಿ ಪ್ರವಾಹ ಉಂಟಾಗಿದ್ದು ರಸ್ತೆ, ಸೇತುವೆಗಳು ಕೊಚ್ಚಿಕೊಂಡು ಹೋಗುತ್ತಿವೆ. ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಮತ್ತು ಹಲವಾರು ಜನ ಕಣ್ಮರೆಯಾಗಿದ್ದಾರೆ. ಆಂಧ್ರಪ್ರದೇಶದಿಂದ ನಮಗೆ ಹಲವಾರು ವಿಡಿಯೋಗಳಯ ಲಭ್ಯವಾಗಿತ್ತಿವೆ. ಕೆಲವು ವಿಡಿಯೋಗಳಲ್ಲಿ ಸೆರೆಯಾಗಿರುವ ದೃಶ್ಯಗಳು ಎಲ್ಲಿಯವು ಅಂತ ನಮಗೆ ಪತ್ತೆಹಚ್ಚುವುದೂ ಸಾಧ್ಯವಾಗುತ್ತಿಲ್ಲ. ಅದರೆ ಈ ರಾಜ್ಯದ ಅನೇಕ ಭಾಗಳಲ್ಲಿ ಜನಜೀವನ ದುಸ್ತರಗೊಂಡಿದೆ ಅನ್ನುವುದಕ್ಕಿಂತ ನರಕಮಯ ಆಗಿದೆ ಅನ್ನೋದು ಹೆಚ್ಚು ಸೂಕ್ತವಾದೀತು.

ಇಲ್ಲಿ ನೋಡಿ, ಈ ಹಸುಳೆ ಪ್ರಪಂಚವನ್ನು ನೋಡುವ ಮಾತು ಹಾಗಿರಲಿ, ತನ್ನ ಹೆತ್ತಮ್ಮನನ್ನು ಸಹ ಕಣ್ಣು ತೆರೆದು ಗುರುತು ಹಿಡಿಯಲು ಸಾಧ್ಯವಾಗುವ ಮೊದಲೇ ಕಣ್ಣು ಮುಚ್ಚಿದೆ. ಪ್ರಕೃತಿ ವಿಕೋಪ ಅನ್ನೋದು ಬಹಳ ಕ್ರೂರಿಯೂ ಹೌದು ಮಾರಾಯ್ರೇ. ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು.

ಜನರನ್ನು ಅಪಾಯದಿಂದ ಪಾರು ಮಾಡಲು ಮತ್ತು ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿಗ್ರಹ ದಳದ (ಎನ್ ಡಿ ಆರ್ ಎಫ್) ಅಧಿಕಾರಿಗಳು ನೀರಿಗಿಳಿದಾಗ ಈ ಮಗು ಸಿಕ್ಕಿದೆ.

ಹಿನ್ನೆಲೆಯಲ್ಲಿ ಪ್ರಾಯಶಃ ಮಗುವಿನ ತಂದೆ ಇರಬಹುದು, ಮಗುವಿನ ಹಾಗೆ ರೋದಿಸುತ್ತಿರುವುದು ವಿಡಿಯೋ ನೋಡುವವರನ್ನು ವಿಚಲಿತರನ್ನಾಗಿಸುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನಿರ್ದಿಷ್ಟವಾಗಿ ಈ ಭಾಗದಿಂದ ನೆರೆಯಲ್ಲಿ ಸಿಕ್ಕ 14,237 ಜನರನ್ನು ಎನ್ ಡಿ ಆರ್ ಎಫ್ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತಂದಿದೆ. 18 ಜನ ಕಣ್ಮರೆಯಾಗಿದ್ದಾರೆ ಮತ್ತು 617 ದನ-ಕರು ಹಾಗೂ 1,779 ಕುರಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

ಇದನ್ನೂ ಓದಿ:   Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ