ವೇದಿಕೆಯಲ್ಲಿ ಅನುಶ್ರೀಗೆ ಶ್ರೀಮುರಳಿ ಪ್ರೀತಿಯ ಅಪ್ಪುಗೆ; ‘ಮದಗಜ’ ಹೀರೋ ಹೇಳಿದ್ದೇನು?

‘ಮದಗಜ’ ಟ್ರೇಲರ್​ ಲಾಂಚ್​ ವೇದಿಕೆಯಲ್ಲಿ ಅನುಶ್ರೀಗೆ ಒಂದು ಪ್ರೀತಿಯ ಅಪ್ಪುಗೆ ನೀಡಿದ ಶ್ರೀಮುರಳಿ ಅವರು, ಒಂದಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದರು. ಅದೇ ರೀತಿ ಅನುಶ್ರೀ ಕೂಡ ಶ್ರೀಮುರಳಿಯ ಒಳ್ಳೆಯತನವನ್ನು ಕೊಂಡಾಡಿದರು.

ಸ್ಯಾಂಡಲ್​ವುಡ್​ನ ಖ್ಯಾತ ನಟ ಶ್ರೀಮುರಳಿ (Sri Murali) ಅವರು ಅಭಿನಯಿಸಿರುವ ‘ಮದಗಜ’ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗ ಈ ಚಿತ್ರದ ಟ್ರೇಲರ್ (Madhagaja Trailer)​ ಲಾಂಚ್​ ಆಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಬಿಡುಗಡೆ ಮಾಡಿರುವುದು ವಿಶೇಷ. ಅದ್ದೂರಿಯಾಗಿ ನಡೆದು ಈ ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಅನುಶ್ರೀ (Anchor Anushree) ನಡೆಸಿಕೊಟ್ಟರು. ಅವರ ಕಾರ್ಯ ವೈಖರಿಗೆ ಶ್ರೀಮುರಳಿ ಕೂಡ ಫಿದಾ ಆಗಿದ್ದಾರೆ. ಹಾಗಾಗಿ ವೇದಿಕೆ ಮೇಲೆ ಅನುಶ್ರೀಗೆ ಒಂದು ಪ್ರೀತಿಯ ಅಪ್ಪುಗೆ ನೀಡಿದ ಶ್ರೀಮುರಳಿ ಅವರು, ಒಂದಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದರು. ಅದೇ ರೀತಿ ಅನುಶ್ರೀ ಕೂಡ ಶ್ರೀಮುರಳಿಯ ಒಳ್ಳೆಯತನವನ್ನು ಕೊಂಡಾಡಿದರು. ‘ಮದಗಜ’ (Madhagaja Movie) ಚಿತ್ರಕ್ಕೆ  ‘ಅಯೋಗ್ಯ’ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್​ ನಟಿಸಿದ್ದಾರೆ.

ಇದನ್ನೂ ಓದಿ:

‘ನಾನಿರೋದು ಬಾಡಿಗೆ ಮನೆಯಲ್ಲಿ’; ಪ್ರಶಾಂತ್​ ಸಂಬರಗಿಗೆ ತಿರುಗೇಟು ನೀಡಿದ ಅನುಶ್ರೀ

ಕ್ರೌರ್ಯದಲ್ಲಿ ಶಾಂತಿ ಇಷ್ಟಪಡುವ ‘ಮದಗಜ’: ಭರ್ಜರಿ ಸೌಂಡ್​ ಮಾಡುತ್ತಿದೆ ಶ್ರೀಮುರಳಿ ಸಿನಿಮಾ ಟ್ರೇಲರ್​

Click on your DTH Provider to Add TV9 Kannada