ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್​; ಮಜಾ ಟಾಕೀಸ್​ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್​’ ವಿಡಿಯೋ ವೈರಲ್​

ಶ್ವೇತಾ ಚಂಗಪ್ಪ ನಿವಾಸಕ್ಕೆ ಭೇಟಿ ನೀಡಿದ ರವಿಚಂದ್ರನ್​ ಅವರು ಜಿಯಾನ್​ಗಾಗಿ ಚಾಕೊಲೇಟ್​ ತಂದಿದ್ದರು. ಪುಟ್ಟ ಬಾಲಕನ ಜೊತೆ ತಾವು ಕೂಡ ಮಗುವಾಗಿ ಕೆಲವು ಸಮಯ ಕಳೆದರು.

ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್​; ಮಜಾ ಟಾಕೀಸ್​ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್​’ ವಿಡಿಯೋ ವೈರಲ್​
ರವಿಚಂದ್ರನ್, ಶ್ವೇತಾ ಚಂಗಪ್ಪ, ಜಿಯಾನ್ ಅಯ್ಯಪ್ಪ
Follow us
TV9 Web
| Updated By: ಮದನ್​ ಕುಮಾರ್​

Updated on: Oct 03, 2021 | 8:44 AM

ಕಿರುತೆರೆಯ ನಟಿ ಶ್ವೇತಾ ಚಂಗಪ್ಪ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಜಾ ಟಾಕೀಸ್​’ ಕಾರ್ಯಕ್ರಮದಲ್ಲಿ ಅವರಿಗೆ ರಾಣಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಸಿಕ್ಕಿತು. ಮಗು ಮತ್ತು ಸಂಸಾರದ ಕಡೆಗೆ ಈಗ ಅವರು ಹೆಚ್ಚು ಗಮನ ನೀಡುತ್ತಿದ್ದಾರೆ. ಪುತ್ರ ಜಿಯಾನ್​ ಅಯ್ಯಪ್ಪ ಫೋಟೋಗಳನ್ನು ಶ್ವೇತಾ ಆಗಾಗ ಅಪ್​ಲೋಡ್​ ಮಾಡುತ್ತಲೇ ಇರುತ್ತಾರೆ. ಈಗ ಜಿಯಾನ್​ನನ್ನು ನೋಡಲು ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರು ಶ್ವೇತಾ ಚಂಗಪ್ಪ ಅವರ ಮನೆಗೆ ಬಂದಿರುವುದು ವಿಶೇಷ. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಶ್ವೇತಾ ಅವರು ಸಖತ್​ ಸಂಭ್ರಮಿಸಿದ್ದಾರೆ.

ಶ್ವೇತಾ ಚಂಗಪ್ಪ ನಿವಾಸಕ್ಕೆ ಭೇಟಿ ನೀಡಿದ ರವಿಚಂದ್ರನ್​ ಅವರು ಜಿಯಾನ್​ಗಾಗಿ ಚಾಕೊಲೇಟ್​ ತಂದಿದ್ದರು. ಪುಟ್ಟ ಬಾಲಕನ ಜೊತೆ ತಾವು ಕೂಡ ಮಗುವಾಗಿ ಕೆಲವು ಸಮಯ ಕಳೆದರು. ಆ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಶ್ವೇತಾ ಚಂಗಪ್ಪ ಸೆರೆ ಹಿಡಿದಿದ್ದಾರೆ. ಒಟ್ಟಾರೆ ಆ ಸಮಯ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

‘ನಿಮ್ಮೆಲ್ಲರೊಂದಿಗೆ ಈ ಸ್ಪೆಷಲ್​ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಜನರ ಜೊತೆ ಬೆರೆಯಲು ಜಿಯಾನ್​ ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ. ಅಚ್ಚರಿ ಎಂದರೆ ರವಿ ಸರ್​ ಜೊತೆ ಅವನು ತುಂಬ ಕಂಫರ್ಟಬಲ್​ ಆಗಿದ್ದ. ಅವರನ್ನು ರವಿ ಮಾಮ ಎಂದು ಕೂಡ ಕರೆದ. ಅವರು ತಂದ ಚಾಕೊಲೇಟ್​ ಅನ್ನು ಅವರಿಗೆ ತಿನಿಸಿದ. ಜಿಯಾನ್​ ಜನಿಸಿದಾಗ ರವಿ ಸರ್​ ಬಂದು ನೋಡಿದ್ದರು. ಈಗ ಎರಡು ವರ್ಷಗಳ ಬಳಿಕ ಮತ್ತೆ ಭೇಟಿ ಮಾಡಿದ್ದಾರೆ. ಬಿಡುವು ಮಾಡಿಕೊಂಡು ಬಂದಿದ್ದಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು ರವಿ ಸರ್​’ ಎಂದು ಶ್ವೇತಾ ಚಂಗಪ್ಪ ಬರೆದುಕೊಂಡಿದ್ದಾರೆ.

ಮಕ್ಕಳೊಂದಿಗೆ ಮಗುವಾಗಿ ಬೆರೆಯುವ ರವಿಚಂದ್ರನ್​ ಅವರ ಇನ್ನೊಂದು ಮುಖವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ಕಂಡು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್​ ಅಯ್ಯಪ್ಪ ಫೇಮಸ್​ ಆಗಿದ್ದಾನೆ. ಆತನ ಹೆಸರಿನಲ್ಲಿ ಇರುವ ಇನ್​ಸ್ಟಾಗ್ರಾಮ್​ ಖಾತೆಯನ್ನು 28 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಮೆಗಾ ಸ್ಟಾರ್’​ ಚಿರಂಜೀವಿ ಮತ್ತು ರವಿಚಂದ್ರನ್​ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು

ಪ್ರೇಮಲೋಕ ಸೃಷ್ಟಿಸಿದ ರವಿಚಂದ್ರನ್​ಗೆ ಕಾಡಿತ್ತು ಏಕಾಂಗಿತನ? ಕ್ರೇಜಿ ಸ್ಟಾರ್​ ಬಿಚ್ಚು ಮಾತು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ