ರವಿಚಂದ್ರನ್​ ಜತೆ ಸುದೀಪ್​ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್​ ಆಗಿದ್ದು ಹೇಗೆ?

TV9 Digital Desk

| Edited By: ಮದನ್​ ಕುಮಾರ್​

Updated on: Nov 27, 2021 | 4:18 PM

‘ದೃಶ್ಯ’ ಚಿತ್ರದ ಮೊದಲನೇ ಪಾರ್ಟ್​ ಅನ್ನು ಕಿಚ್ಚ ಸುದೀಪ್​ ಅವರೇ ನಿರ್ಮಾಣ ಮಾಡಬೇಕಿತ್ತು. ಅದಕ್ಕಾಗಿ ಮಲಯಾಳಂ ನಿರ್ಮಾಪಕರಿಂದ ರಿಮೇಕ್​ ಹಕ್ಕುಗಳನ್ನು ಖರೀದಿಸಲು ಅವರು​ ಮುಂದಾಗಿದ್ದರು.

ನಟ ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅಭಿನಯದ ‘ದೃಶ್ಯ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಶುಕ್ರವಾರ (ನ.26) ನಡೆದ ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಕಿಚ್ಚ ಸುದೀಪ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರವಿಚಂದ್ರನ್​ ಜೊತೆಗಿನ ಬಾಂಧವ್ಯದ ಬಗ್ಗೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ವಿಶೇಷ ಏನೆಂದರೆ, ‘ದೃಶ್ಯ’ ಚಿತ್ರದ ಮೊದಲನೇ ಪಾರ್ಟ್​ ಅನ್ನು ಸುದೀಪ್​ ಅವರೇ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಮಲಯಾಳಂ ನಿರ್ಮಾಪಕರಿಂದ ರಿಮೇಕ್​ ಹಕ್ಕುಗಳನ್ನು ಖರೀದಿಸಲು ಸುದೀಪ್​ ಮುಂದಾಗಿದ್ದರು. ಆದರೆ ಅಷ್ಟರಲ್ಲಾಗಲೇ ಬೇರೆ ನಿರ್ಮಾಣ ಸಂಸ್ಥೆ ಕೂಡ ಮುಂದೆ ಬಂದಿತ್ತು. ಆ ಸಂದರ್ಭದಲ್ಲಿ ನಿಜಕ್ಕೂ ಏನು ನಡೆಯಿತು ಎಂಬುದನ್ನು ಸುದೀಪ್​ ವಿವರಿಸಿದ್ದಾರೆ. ಸದ್ಯ ‘ದೃಶ್ಯ 2’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಡಿ.10ರಂದು ರಿಲೀಸ್​ ಆಗಲಿದೆ. ಪಿ. ವಾಸು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

‘ದೃಶ್ಯ 2’ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್​; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

Follow us on

Click on your DTH Provider to Add TV9 Kannada