ಯಾದಗಿರಿಯಲ್ಲಿ ನಾಗರಹಾವಿನ ಜತೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ; ಮೈ ಜುಮ್ ಎನ್ನಿಸುವ ದೃಶ್ಯವಿದು
ನಾಗರಹಾವು 5ಕ್ಕೂ ಹೆಚ್ಚು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿದೆ. 6 ಅಡಿ ಉದ್ದವಿದ್ದ ನಾಗರಹಾವು ಮನೆಗೆ ನುಗ್ಗಿತ್ತು. ಅದನ್ನು ಹಿಡಿಯಲು ವೃದ್ಧ ಬಸವರಾಜ ಮುಂದಾಗಿದ್ದಾರೆ.
ನಾಗರಹಾವಿನ ಜತೆ ಆಟವಾಡಲು ಹೋಗಿ ವೃದ್ಧ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳದಲ್ಲಿ ಹಾವು ಕಚ್ಚಿ ಬಸವರಾಜ ಪೂಜಾರಿ ಮೃತಪಟ್ಟಿದ್ದಾರೆ. ನಾಗರಹಾವು 5ಕ್ಕೂ ಹೆಚ್ಚು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿದೆ. 6 ಅಡಿ ಉದ್ದವಿದ್ದ ನಾಗರಹಾವು ಮನೆಗೆ ನುಗ್ಗಿತ್ತು. ಅದನ್ನು ಹಿಡಿಯಲು ವೃದ್ಧ ಬಸವರಾಜ ಮುಂದಾಗಿದ್ದಾರೆ. ಬಳಿಕ ಅದರ ಜೊತೆಗೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು ಸಿಕ್ಕ ಸಿಕ್ಕ ಕಡೆ ಐದು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ, ತಾನು ಸತ್ತಿದೆ. ಮೃತ ವೃದ್ಧ ಈ ಹಿಂದೆ ಹಾವುಗಳನ್ನು ಹಿಡಿಯುತ್ತಿದ್ದರಂತೆ. ಸುಮಾರು 300 ಕ್ಕೂ ಅಧಿಕ ಹಾವುಗಳನ್ನು ಬಸವರಾಜ ಹಿಡಿದಿದ್ದಾರೆ.
Published on: Nov 27, 2021 12:48 PM
Latest Videos