Kichcha Sudeep: ರವಿಚಂದ್ರನ್ ನನ್ನ ಅಣ್ಣ ಎಂದ ಕಿಚ್ಚ ಸುದೀಪ್
‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್ ಮತ್ತು ನವ್ಯಾ ನಾಯರ್ ಮುಂದುವರಿದಿದ್ದಾರೆ. ಅವರ ಮಗಳ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದೆ.
ರವಿಚಂದ್ರನ್ ನಟನೆಯ ‘ದೃಶ್ಯ 2’ ಸಿನಿಮಾ ಟ್ರೇಲರ್ ನವೆಂಬರ್ 26ರಂದು ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಅವರು ಆಗಮಿಸಿದ್ದರು. ‘ಕಿಚ್ಚ ನನ್ನ ಕುಟುಂಬದವನು’ ಎಂದು ರವಿಚಂದ್ರನ್ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದರು. ಸುದೀಪ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ರವಿಚಂದ್ರನ್ ಅವರು ನನ್ನನ್ನು ಕುಟುಂಬದವನು ಎಂದು ಹೇಳಿದಾಗ ತುಂಬಾನೇ ಖುಷಿ ಆಯಿತು. ನನಗೆ ಯಾರೂ ಅಣ್ಣಂದಿರು ಇಲ್ಲ. ರವಿಚಂದ್ರನ್ ಅವರೇ ನನ್ನ ಅಣ್ಣ’ ಎಂದಿದ್ದಾರೆ ಸುದೀಪ್. ‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್ ಮತ್ತು ನವ್ಯಾ ನಾಯರ್ ಮುಂದುವರಿದಿದ್ದಾರೆ. ಅವರ ಮಗಳ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದೆ. ಈ ಚಿತ್ರ ಡಿಸೆಂಬರ್ 10ರಂದು ತೆರೆಗೆ ಬರುತ್ತಿದೆ.
ಇದನ್ನೂ ಓದಿ: ರವಿಚಂದ್ರನ್ ಜತೆ ಸುದೀಪ್ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್ ಆಗಿದ್ದು ಹೇಗೆ?
Latest Videos