ಕರೀನಾ ಕಪೂರ್ಗೆ ಕೊರೋನಾ ಸೋಂಕು: ವಿಚಾರಣೆಗೆ ಕುಟುಂಬ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಬಿಎಂಸಿ
ಕರೀನಾ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೀಗ ಕರೀನಾ ಪತಿ ಸೈಫ್ ಅಲಿ ಖಾನ್ ಕಳೆದ ಒಂದು ವಾರದಿಂದ ಮುಂಬೈನಲ್ಲಿ ಇಲ್ಲ ಅವರು ಎಲ್ಲಿದ್ದಾರೆ ಎಂದೂ ತಿಳಿದಿಲ್ಲ. ಈ ಬಗ್ಗೆ ಕರೀನಾ ಕುಟುಂಬ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಿಎಂಸಿ ಆರೋಪಿಸಿದೆ.
ಮುಂಬೈ: ಎರಡು ದಿನಗಳ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಕರೀನಾ ಕಪೂರ್ ಮನೆಯನ್ನು ಬೃಹತ್ ಮುಂಬೈ ಮಹಾನಾಗರ ಪಾಲಿಕೆ ಸೀಲ್ ಡೌನ್ ಮಾಡಿ ಕರೀನಾ ಅವರನ್ನು ಐಸೋಲೇಷನ್ಗೆ ಒಳಪಡಿಸಿತ್ತು. ಜತೆಗೆ ಕರೀನಾ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೀಗ ಕರೀನಾ ಪತಿ ಸೈಫ್ ಅಲಿ ಖಾನ್ ಕಳೆದ ಒಂದು ವಾರದಿಂದ ಮುಂಬೈನಲ್ಲಿ ಇಲ್ಲ ಅವರು ಎಲ್ಲಿದ್ದಾರೆ ಎಂದೂ ತಿಳಿದಿಲ್ಲ. ಈ ಬಗ್ಗೆ ಕರೀನಾ ಕುಟುಂಬ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಿಎಂಸಿ ಆರೋಪಿಸಿದೆ.
ಪದೇ ಪದೇ ಸೈಫ್ ಅಲಿ ಖಾನ್ ಬಗ್ಗೆ ಕೇಳಿದರೂ ಕುಟುಂಬ ಸದಸ್ಯರು ಉತ್ತರಿಸುತ್ತಿಲ್ಲ. ಸೈಫ್ ಅಲಿ ಖಾನ್ ಎಲ್ಲಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ ಎಂದು ಬಿಎಂಸಿ ಅಧಿಕಾರಿಗಳು ಆರೋಪಿಸಿದ್ದಾರೆ. ಈಗಾಗಲೇ ಕರೀನಾ ಕಪೂರ್ ನಂತರ ಅವರ ಗೆಳತಿ ಅಮೃತಾ ಅರೋರಾ, ಮಹೀಪ್ ಕಪೂರ್ ಮತ್ತು ಸೀಮಾ ಖಾನ್ ಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಸೋಂಕು ಇನ್ನಷ್ಟು ಮಂದಿಗೆ ಹರಡುವ ಆತಂಕ ಹೆಚ್ಚಾಗಿದೆ. ಹೀಗಾಗಿ ಅದನ್ನು ತಪ್ಪಿಸಲು ಬಿಎಂಸಿ ಕ್ರಮಕೈಗೊಳ್ಳುತ್ತಿದೆ. ಆದರೆ ಕರೀನಾ ಪ್ಯಾಮಿಲಿ ಅದಕ್ಕೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ಸದ್ಯ ಸೋಂಕು ದೃಢಪಟ್ಟ ಯಾರೂ ವಿದೇಶ ಪ್ರವಾಸ ಕೈಗೊಂಡಿಲ್ಲ. ಇನ್ನು ಕರೀನಾ ಸಂಪರ್ಕಿತರನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕರೀನಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಕೆಲವು ದಿನಗಳ ಹಿಂದೆ ಕರಣ್ ಜೋಹರ್ ಕುಟುಂಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಕೊರೋನಾ ನಿಯಮವನ್ನು ಗಾಳಿಗೆ ತೂರಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: