Kareena Kapoor: ಕರೀನಾಗೆ ಕೊರೊನಾ ಪಾಸಿಟಿವ್; ಜೇಹ್, ತೈಮೂರ್ ಆರೋಗ್ಯವಾಗಿದ್ದಾರಾ ಎಂಬ ಫ್ಯಾನ್ಸ್ ಪ್ರಶ್ನೆಗೆ ಸಿಕ್ತು ಉತ್ತರ
Jeh and Taimur: ಬಾಲಿವುಡ್ ನಟಿ ಕರೀನಾ ಕಪೂರ್ಗೆ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಿತರಾಗಿದ್ದರು. ಅಲ್ಲದೇ ಜೇಹ್ ಹಾಗೂ ತೈಮೂರ್ ಕುರಿತು ಕಾಳಜಿಯ ಪ್ರಶ್ನೆಗಳನ್ನು ಕೇಳಿದ್ದರು. ಈಗ ಅವುಗಳಿಗೆ ಉತ್ತರ ಲಭ್ಯವಾಗಿದೆ.
ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ (Kareena Kapoor) ಸೋಮವಾರ ಕೊವಿಡ್ ಪಾಸಿಟಿವ್ ಆಗಿದ್ದಾರೆ. ಕರೀನಾರೊಂದಿಗೆ ಅವರ ಗೆಳತಿ ಅಮೃತಾ ಅರೋರಾಗೂ (Amritha Arora) ಪಾಸಿಟಿವ್ ವರದಿ ಬಂದಿದೆ. ಕರೀನಾ ಆರೋಗ್ಯದ ಬಗ್ಗೆ ಸದ್ಯ ತಂದೆ ರಣಧೀರ್ ಕಪೂರ್ (Randhir Kapoor) ಮಾಹಿತಿ ನೀಡಿದ್ದು, ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಕೊರೊನಾ ಪಾಸಿಟಿವ್ ಆಗಿದ್ದರ ಕುರಿತು ಕರೀನಾ ಸ್ವತಃ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ‘‘ನನಗೆ ಕೊರೊನಾ ಪಾಸಿಟಿವ್ ಆಗಿದೆ. ತಕ್ಷಣವೇ ಪ್ರತ್ಯೇಕ ವಾಸದಲ್ಲಿ ತೊಡಗಿಕೊಂಡಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ. ನನ್ನ ಕುಟುಂಬ ಹಾಗೂ ಸಹಾಯಕರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಯಾರಿಗೂ ರೋಗ ಲಕ್ಷಣವಿಲ್ಲ. ನಾನೂ ಕ್ಷೇಮವಾಗಿದ್ದೇನೆ’’ ಎಂದು ಕರೀನಾ ಬರೆದುಕೊಂಡಿದ್ದರು. ಅಭಿಮಾನಿಗಳು ಕೂಡ ಕರೀನಾ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಬಹಳಷ್ಟು ಜನ ಪುಟಾಣಿ ಮಕ್ಕಳಾದ ಜೇಹ್ (Jeh) ಹಾಗೂ ತೈಮೂರ್ (Taimur) ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಕರೀನಾ ತಂದೆ ರಣಧೀರ್ ಕಪೂರ್ ಇಂಡಿಯಾ ಟುಡೆಯೊಂದಿಗೆ ಮಾತನಾಡಿ, ಕರೀನಾ ಹಾಗೂ ಅವರ ಕುಟುಂಬದ ಅಪ್ಡೇಟ್ ನೀಡಿದ್ದಾರೆ. ಕರೀನಾಗೆ ಸೋಂಕಿನ ಲಕ್ಷಂಗಳು ಬಹಳ ಸೌಮ್ಯವಾಗಿದೆ ಎಂದ ವೈದ್ಯರು ತಿಳಿಸಿದ್ದಾರೆ. ನಿನ್ನೆಗಿಂತ ಇಂದು (ಮಂಗಳವಾರ) ಕರೀನಾ ಹೆಚ್ಚು ಆರಾಮವಾಗಿದ್ದಾಳೆ ಎಂದು ರಣಧೀರ್ ಕಪೂರ್ ತಿಳಿಸಿದ್ದಾರೆ.
ಅಲ್ಲದೇ ತೈಮೂರ್ ಹಾಗೂ ಜೇಹ್ ಕುರಿತು ಮಾಹಿತಿ ನೀಡಿರುವ ರಣಧೀರ್, ‘‘ಈರ್ವರೂ ತಾಯಿ ಕರೀನಾ ಜತೆಯಲ್ಲಿಯೇ ಇದ್ದು, ಆರೋಗ್ಯವಾಗಿದ್ದಾರೆ. ಕರೀನಾ ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದಾರೆ’’ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು, ನೆಚ್ಚಿನ ನಟಿ ಬೇಗ ಆರೋಗ್ಯವಾಗಿ ಮರಳಲಿ ಎಂದು ಹಾರೈಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆಯ ಹೇಳಿಕೆಯನ್ನು ಎಎನ್ಐ ವರದಿ ಮಾಡಿತ್ತು. ಅದರಲ್ಲಿ ಕರೀನಾ ಹಾಗೂ ಸ್ನೇಹಿತರು ಕೊರೊನಾ ನಿಯಮಗಳನ್ನು ಮೀರಿ ಅನೇಕ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದರಿಂದಲೇ ಅವರಿಗೆ ಸೋಂಕು ಬಂದಿದೆ. ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ತಿಳಿಸಲಾಗಿದೆ. ಅಲ್ಲದೇ ಕರೀನಾ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು.
ಕರೀನಾ ಹಾಗೂ ಅಮೃತಾ ಕರಣ್ ಜೋಹರ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಆಲಿಯಾ ಭಟ್ ಹಾಗೂ ಅರ್ಜುನ್ ಕಪೂರ್ ಕೂಡ ಭಾಗಿಯಾಗಿದ್ದರು. ಕರೀನಾ, ಅಮೃತಾ ಕೊರೊನಾ ಪಾಸಿಟಿವ್ ಆದ ಬೆನ್ನಲ್ಲೇ ಇಂದು ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಹಾಗೂ ಸೊಹೈಲ್ ಖಾನ್ ಪತ್ನಿ ಸೀಮಾ ಖಾನ್ ಕೂಡ ಪಾಸಿಟಿವ್ ಆಗಿದ್ದಾರೆ. ಸದ್ಯ ಎಲ್ಲರೂ ಪ್ರತ್ಯೇಕವಾಸದಲ್ಲಿದ್ದಾರೆ.
ಇದನ್ನೂ ಓದಿ:
Ayra Yash: ಯಥರ್ವ್ಗೆ ಸ್ನ್ಯಾಕ್ಸ್ ತಿನ್ನಿಸಲು ಹೋದ ಐರಾ; ಆಮೇಲೇನಾಯ್ತು? ವಿಡಿಯೋ ನೋಡಿ