- Kannada News Photo gallery Kangana Ranaut looking gorgeous in Ankita Lokhande and Vicky Jain wedding see pics here
Kangana Ranaut: ಅಂಕಿತಾ- ವಿಕ್ಕಿ ಕಲ್ಯಾಣ; ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಕಂಗನಾ- ಚಿತ್ರಗಳನ್ನು ನೋಡಿ
Ankita Lokhande and Vicky Jain marriage: ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೇನ್ ಕಲ್ಯಾಣದಲ್ಲಿ ಸಾಂಪ್ರದಾಯಿಕ ದಿರಿಸಿನ ಮೂಲಕ ನಟಿ ಕಂಗನಾ ರಣಾವತ್ ಎಲ್ಲರ ಗಮನಸೆಳೆದಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ.
Updated on:Dec 14, 2021 | 3:27 PM

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಸಾಂಪ್ರದಾಯಿಕ ದಿರಿಸಿನ ಚಿತ್ರಗಳು ಎಲ್ಲರ ಗಮನಸೆಳೆದಿವೆ.

ಕಂಗನಾ ತಮ್ಮ ಸ್ನೇಹಿತೆ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ವಿವಾಹದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಂಪೂರ್ಣ ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದ ಕಂಗನಾ, ತಾವು ಹಂಚಿಕೊಂಡ ಪೋಸ್ಟ್ಗೆ ವಿಭಿನ್ನ ಕ್ಯಾಪ್ಶನ್ಗಳನ್ನೂ ನೀಡಿದ್ದಾರೆ.

‘ಪ್ರೀತಿಸಿ, ಯುದ್ಧ ಮಾಡಬೇಡಿ’ ಎಂದು ಬರೆದುಕೊಂಡಿರುವ ಕಂಗನಾ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿಯರ ಪೈಕಿ ಹೆಚ್ಚಾಗಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಳ್ಳುವುದು ಕಂಗನಾ.

ವಿಭಿನ್ನ ಶೈಲಿಯ ಆಭರಣಗಳು, ಉಡುಗೆಗಳನ್ನು ಧರಿಸಿ ಅವರು ಫೋಟೋಶೂಟ್ ಮಾಡಿಸುತ್ತಾರೆ. ಕಂಗನಾ ಧರಿಸುವ ಸಾಂಪ್ರದಾಯಿಕ ಮಾದರಿಯ ದಿರಿಸಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಸದ್ಯ ಕಂಗನಾ ಕೈಯಲ್ಲಿ ಮೂರು ಚಿತ್ರಗಳಿದ್ದು, ಅವುಗಳಲ್ಲಿ ಎರಡು ಚಿತ್ರಗಳ ಶೂಟಿಂಗ್ ಮುಕ್ತಾಯವಾಗಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದರಲ್ಲಿ ಆಕ್ಷನ್ ಚಿತ್ರ ’ಧಾಕಡ್’ ಕೂಡ ಸೇರಿದೆ.
Published On - 3:07 pm, Tue, 14 December 21




