Ayra Yash: ಯಥರ್ವ್​ಗೆ ಸ್ನ್ಯಾಕ್ಸ್ ತಿನ್ನಿಸಲು ಹೋದ ಐರಾ; ಆಮೇಲೇನಾಯ್ತು? ವಿಡಿಯೋ ನೋಡಿ

Radhika Pandit: ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ತುಂಟಾಟದ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಐರಾ ತಮ್ಮ ಯಥರ್ವ್​​ಗೆ ಸ್ನ್ಯಾಕ್ಸ್ ತಿನಿಸಲು ಹೋಗುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

Ayra Yash: ಯಥರ್ವ್​ಗೆ ಸ್ನ್ಯಾಕ್ಸ್ ತಿನ್ನಿಸಲು ಹೋದ ಐರಾ; ಆಮೇಲೇನಾಯ್ತು? ವಿಡಿಯೋ ನೋಡಿ
ಐರಾ ಯಶ್ ತಮ್ಮ ಯಥರ್ವನಿಗೆ ತಿನ್ನಿಸಲು ಹೋಗುತ್ತಿರುವ ದೃಶ್ಯ (ಕೃಪೆ: ರಾಧಿಕಾ ಪಂಡಿತ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on:Dec 14, 2021 | 11:55 AM

ಸ್ಯಾಂಡಲ್​ವುಡ್​ನ ತಾರಾ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಮಕ್ಕಳ ತುಂಟಾಟದ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇಂದು (ಡಿಸೆಂಬರ್ 14) ಹೊಸ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಐರಾ ಯಶ್ ಹಾಗೂ ಯಥರ್ವ್ ಜೊತೆಯಾಗಿ ಕುಳಿತಿದ್ದಾರೆ. ಐರಾ ಸ್ನ್ಯಾಕ್ಸ್ ತಿನ್ನುತ್ತಿದ್ದು, ಅದನ್ನು ತಮ್ಮ ಯಥರ್ವನಿಗೂ ಕೊಡಲು ಹೋಗಿದ್ದಾಳೆ. ಆಗ ರಾಧಿಕಾ ಪಂಡಿತ್ ಪುತ್ರಿಯನ್ನು ತಡೆದಿದ್ದಾರೆ. ಆಗ ಐರಾ ಪ್ರೀತಿಯಿಂದ ಯಥರ್ವ್​​ನನ್ನು ಮುದ್ದುಮಾಡಿದ್ದಾಳೆ. ಈ ಸುಂದರ ವಿಡಿಯೋವನ್ನು ರಾಧಿಕಾ ಪಂಡಿತ್ ಸೆರೆಹಿಡಿದು ಶೇರ್ ಮಾಡಿದ್ದಾರೆ. ಪುಟಾಣಿ ಮಕ್ಕಳ ಚಟುವಟಿಕೆ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದು, ಮೆಚ್ಚುಗೆ ಸೂಚಿಸುತ್ತಿದ್ದಾರೆ.

ರಾಧಿಕಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

Ayra Yash and Yatharv

ಐರಾ ಯಶ್ ಮತ್ತು ಯಥರ್ವ್ (ಕೃಪೆ: ರಾಧಿಕಾ ಪಂಡಿತ್/ ಇನ್ಸ್ಟಾಗ್ರಾಂ)

ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಐರಾ ಹಾಗೂ ಯಥರ್ವ್​​ರ ಚಿತ್ರ ಹಾಗೂ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಐರಾ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಆಗ ರಾಧಿಕಾ ಪಂಡಿತ್ ‘ನಿನ್ನ ಕೈ ಹಿಡಿದುಕೊಳ್ಳಲು ಯಾವಾಗಲೂ ಇರುತ್ತೇನೆ’ ಎಂದು ಬರೆದು ಹುಟ್ಟುಹಬ್ಬಕ್ಕೆ ಶುಭಕೋರಿದ್ದರು.

ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಯಶ್​ ಆರೈಕೆಯಲ್ಲಿ ​ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್​ ಅಪೇಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:

ಸ್ವಿಮ್ಮಿಂಗ್​​ಪೂಲ್​ನಲ್ಲಿ ಆಯ್ರಾ, ಯಥರ್ವ್​​; ಕ್ಯೂಟ್​ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

ನಟಿ ಕರೀನಾ ಕಪೂರ್​ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನಾ ಸೋಂಕು

Published On - 11:54 am, Tue, 14 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ