AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಕರೀನಾ ಕಪೂರ್​ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನಾ ಸೋಂಕು

ಕರೀನಾ ಸಂಪರ್ಕದಲ್ಲಿದ್ದ ಅಮೃತಾ ಅರೋರಾ ಅವರಿಗೆ ಡಿ. 11ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ಗೆ ಇದೀಗ ಸೋಂಕು ದೃಢಪಟ್ಟಿದೆ.

ನಟಿ ಕರೀನಾ ಕಪೂರ್​ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನಾ ಸೋಂಕು
ಕರೀನಾ ಮತ್ತು ಅಮೃತಾ ಅರೋರಾ
TV9 Web
| Edited By: |

Updated on:Dec 14, 2021 | 11:09 AM

Share

ಬಾಲಿವುಡ್​ ನಟಿ ಕರೀನಾ ಕಪೂರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನಾ ಪಾಸಿಟಿವ್​ ಬಂದಿದೆ. ಕರೀನಾ ಸಂಪರ್ಕದಲ್ಲಿದ್ದ ಅಮೃತಾ ಅರೋರಾ ಅವರಿಗೆ ಡಿ. 11ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ಗೆ  ಸೋಂಕು ದೃಢಪಟ್ಟಿದೆಮೊನ್ನೆ (ಡಿ.11)  ನಟಿ ಕರೀನಾ ಅವರಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಅವರ ಮನೆಯನ್ನು ಮುಂಬೈ ಬಿಎಂಸಿ ಸೀಲ್ ಡೌನ್​ ಮಾಡಿತ್ತು. ಜತೆಗೆ ಅವರನ್ನು ಹೋಮ್​ ಐಸೋಲೇಷನ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರೀನಾ ಅವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕೋವಿಡ್​ ತಪಾಸಣೆಗೆ ಒಳಪಡಿಸಲಾಗಿತ್ತು ಈ ವೇಳೇ ಅಮೃತಾ ಅರೋರಾ, ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ಗೆ ಕೊರೋನಾ ಪಾಸಿಟಿವ್​ ಬಂದಿದೆಆಭರಣ ವಿನ್ಯಾಸಗಾರ್ತಿಯಾಗಿರುವ ಮಹೀಪ್ ಕಪೂರ್ ನಟ ಸಂಜಯ್​ ಕಪೂರ್​ ಅವರ ಪತ್ನಿ. ಇನ್ನು ಸೀಮಾ ಖಾನ್​ ಅವರು ಪ್ಯಾಷನ್​ ಡಿಸೈನರ್​ ಆಗಿದ್ದು ಸೊಹಿಲ್​ ಖಾನ್​ ಅವರನ್ನು ವಿವಾಹವಾಗಿದ್ದಾರೆ. ಈ ಮೂವರೂ ಕರೀನಾ ಅವರ ಸ್ನೇಹಿತೆಯರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕರೀನಾ ಕಪೂರ್​, ಅಮೃತಾ ಅರೋರಾ ಸೇರಿದಂತೆ ಹಲವು ಬಾಲಿವುಡ್​ ತಾರೆಯರು ಕರಣ್​ ಜೊಹರ್​ ಅವರು ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿದ್ದರು. ಬಳಿಕ ಕರೀನಾ ಕಪೂರ್​ ಅಮೃತಾ ಅರೋರಾ ಅವರಿಗೆ ಡಿ.11ರಂದು ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಘಿ ಅವರನ್ನು ಹೋಮ್​ ಐಸೋಲೇಷನ್​ನಲ್ಲಿ ಇರಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಬೃಹತ್​ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕೃತವಾಗಿ  ಮಾಹಿತಿ ನೀಡಿತ್ತು. ಇದೀಗ ನಟಿ ಕರೀನಾ ಸಂಪರ್ಕದಲ್ಲಿದ್ದ  ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ ಗೂ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕಾಯುಗುತ್ತದೆ. ಬ್ರಿಟನ್​ನಲ್ಲಿ ನಿನ್ನೆಯಷ್ಟೇ ಒಮಿಕ್ರಾನಸಸ ಸೋಂಕಿತ ರೋಗಿ ಮೃತಪಟ್ಟಿರುವುದರ ಬಗ್ಗೆ ಯುಕೆ ಸರ್ಕಾರ ಖಚಿತಪಡಿಸಿದೆ. ಈ ಹಿನ್ನೆಯಲ್ಲಿದೆ ಭಾರತದಲ್ಲೂ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳವ ಸಾಧ್ಯತೆ ಇದೆ. ಇನ್ನೂ ಹೊಸ ವರ್ಷದ ಆಚರಣೆಗೂ ಬ್ರೇಕ್​ ಬೀಳುವ ಸಾದ್ಯತೆ ಇದೆ. ಇಷ್ಟು ದಿನ ಇಳಿಮುಖವಾಗಿದ್ದ ಕೊರೋನಾ ಇದೀಗ ಮತ್ತೆ ಗಣನೀಯವಾಗಿ ಹೆಚ್ಚುತ್ತಿದೆ.

ಇದನ್ನೂ ಓದಿ: 

ಪಾರ್ಟಿಗೆ ತೆರಳಿ ಮೋಜು ಮಸ್ತಿ ಮಾಡಿದ ಕರೀನಾ ಕಪೂರ್​ಗೆ ಕೊರೊನಾ ಪಾಸಿಟಿವ್​; ಹೆಚ್ಚಿತು ಆತಂಕ

Published On - 10:47 am, Tue, 14 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು