AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aha: ವೆಬ್ ಸರಣಿಯಾಗಲಿದೆ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಜೀವನಗಾಥೆ; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹೆಸರಾಂತ ನಿರ್ದೇಶಕ

Half Lion: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಜೀವನಾಧಾರಿತ ವೆಬ್ ಸರಣಿ ಶೀಘ್ರದಲ್ಲೇ ಸೆಟ್ಟೇರಲಿದೆ. ಖ್ಯಾತ ನಿರ್ದೇಶಕ ಪ್ರಕಾಶ್ ಝಾ ಇದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Aha: ವೆಬ್ ಸರಣಿಯಾಗಲಿದೆ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಜೀವನಗಾಥೆ; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹೆಸರಾಂತ ನಿರ್ದೇಶಕ
‘ಹಾಫ್ ಲಯನ್’ ಮೊದಲ ಪೋಸ್ಟರ್ (ಎಡ), ನಿರ್ದೇಶಕ ಪ್ರಕಾಶ್ ಝಾ (ಬಲ)
Follow us
TV9 Web
| Updated By: shivaprasad.hs

Updated on:Dec 14, 2021 | 10:56 AM

ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ರದ್ದು (PV Narasimha Rao) ವರ್ಣರಂಜಿತ ವ್ಯಕ್ತಿತ್ವ ಮತ್ತು ಅಷ್ಟೇ ರೋಚಕ ಜೀವನ. ಪ್ರಧಾನಿಯಾಗಿದ್ದಾಗ ಹಲವು ಮೊದಲುಗಳಿಗೆ ಸಾಕ್ಷಿಯಾದ ಅವರ ಆಡಳಿತ ಅಷ್ಟೇ ವಿವಾದಾತ್ಮಕವೂ ಹೌದು. ಪಿವಿ ನರಸಿಂಹರಾವ್ ಅವರನ್ನು ಅರ್ಥ ವ್ಯವಸ್ಥೆಗೆ ಟಾನಿಕ್ ಕೊಟ್ಟ ನಾಯಕ ಎಂದೇ ಹೇಳಲಾಗುತ್ತದೆ. ದೇಶದ ಪ್ರಧಾನಿ ಕುರ್ಚಿ ಅಲಂಕರಿಸಿದ್ದ ಈ ಧೀಮಂತ ನಾಯಕನ ಜೀವನವೂ ಅಷ್ಟೇ ಕೌತುಕ ಮತ್ತು ಸಾಹಸಗಳ ಸರಣಿ. ಇಂಥಾ ಲೀಡರ್ ಬದುಕೀಗ ವೆಬ್ ಸಿರೀಸ್‌ನಲ್ಲಿ ಅನಾವರಣವಾಗುತ್ತಿದೆ. ದೇಶದ ಪ್ರತಿಷ್ಠಿತ ಒಟಿಟಿ ಪ್ಲಾಟ್ ಫಾರ್ಮ್ ‘ಆಹಾ’ (Aha OTT), ಪಿವಿ ನರಸಿಂಹರಾವ್ ಜೀವನ ಚರಿತ್ರೆಯನ್ನು ವೆಬ್ ಸರಣಿಯಲ್ಲಿ ತೆರೆದಿಡಲು ಮುಂದಾಗಿದೆ. ಈ ಸರಣಿಯ ವಿಶೇಷತೆಗಳೇನು? ಇಲ್ಲಿದೆ ಉತ್ತರ.

1992ರಿಂದ 1996ರವರೆಗೆನ ಅಧಿಕಾರವಧಿಯಲ್ಲಿ ಪಿವಿ ನರಸಿಂಹರಾವ್‌ರದ್ದು ರೋಚಕ ಜೀವನ. ಅಂದಿನ ಭಾರತ ಕಂಡ ಅತ್ಯಂತ ಅನಿರೀಕ್ಷಿತ ಘಟನೆಗಳು ಇತಿಹಾಸದ ಪುಟದಲ್ಲಿ ಇಂದಿಗೂ ಅಜರಾಮರ. ಅದರಲ್ಲೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಹಿಂದೂ-ಮುಸ್ಲಿಂ ಕಲಹಗಳಂಥಾ ಸೂಕ್ಷ್ಮ ವಿಷಯಗಳನ್ನೂ ವೆಬ್ ಸರಣಿಯಲ್ಲಿ ತೆರೆದಿಡಲಾಗುತ್ತಿದೆ. ವಿನಯ್ ಸತ್ಪತಿಯವರ (Vinay Satpati) ಪುಸ್ತಕ ಆಧರಿಸಿ ಈ ಸರಣಿ ನಿರ್ಮಿಸಲಾಗುತ್ತಿದೆ. ಸರಣಿಗೆ ‘ಹಾಫ್ ಲಯನ್’ (Half Lion) ಎಂದು ನಾಮಕರಣ ಮಾಡಲಾಗಿದೆ. ಖ್ಯಾತ ನಿರ್ದೇಶಕ ಪ್ರಕಾಶ್ ಝಾ (Prakash Jha) ಇದಕ್ಕೆ ನಿರ್ದೇಶನ ಮಾಡಲಿದ್ದಾರೆ.

‘ಆಹಾ ಒಟಿಟಿ’ ಹಾಗೂ ‘ಅಪ್ಲೇಜ್ ಎಂಟರ್ಟೈನ್ಮೆಂಟ್’ (Applause Entertainment) ಜಂಟಿಯಾಗಿ ನಿರ್ಮಿಸುತ್ತಿರುವ ಸರಣಿಗೆ ‘ಹಾಫ್ ಲಯನ್’ ಎಂದು ನಾಮಕರಣ ಮಾಡಲಾಗಿದೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಸರಣಿ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಬಾಲಿವುಡ್‌ನ ಹೆಸರಾಂತ ಚಿತ್ರ ನಿರ್ದೇಶಕ ಪ್ರಕಾಶ್ ಝಾ ಈ ಸರಣಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ‘ಗಂಗಾಜಲ್’, ‘ರಂಗ್ ದೆ ಬಸಂತಿ’ಯಂಥಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಪ್ರಕಾಶ್ ಝಾ ಈಗ ‘ಹಾಫ್ ಲಯನ್‌’ ಹಿಂದೆ ನಿಂತಿರೋದು ಚಿತ್ರಾಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಈ ಸರಣಿ ಕಣ್ತುಂಬಿಕೊಳ್ಳಲು ಚಿತ್ರ ರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

ಈ ಕುರಿತ ವಿಡಿಯೋ ವರದಿ ಇಲ್ಲಿದೆ:

ಇದನ್ನೂ ಓದಿ:

ಬಾಗಲಕೋಟೆ: ಮದುವೆ ಆಮಂತ್ರಣದಲ್ಲಿ ಅಪ್ಪು!; ನೆಚ್ಚಿನ ನಟನನ್ನು ಸ್ಮರಿಸಿ ಗೌರವ ಸಲ್ಲಿಸಿದ ಜೋಡಿ

ತಿಳಿಯದೆ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಸಾವು

Published On - 9:41 am, Tue, 14 December 21

ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು