ಓಟಿಟಿಯಲ್ಲಿ ರಿಲೀಸ್​ ಆಗತ್ತೆ ರವಿಚಂದ್ರನ್​ ಹೊಸ ಚಿತ್ರ ‘ಕನ್ನಡಿಗ’; ‘ಕ್ರೇಜಿ ಸ್ಟಾರ್’ ಅಭಿಮಾನಿಗಳಿಗೆ ಗುಡ್​ ನ್ಯೂಸ್​

ಹಲವು ಕಾರಣಗಳಿಂದಾಗಿ ‘ಕನ್ನಡಿಗ’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ರವಿಚಂದ್ರನ್​ ಅವರಿಗೆ ವಿಶೇಷ ಗೆಟಪ್​ ಇದೆ. ಜೀ5 ಮೂಲಕ ಡಿ.17ರಂದು ‘ಕನ್ನಡಿಗ’ ರಿಲೀಸ್​ ಆಗಲಿದೆ.

ಓಟಿಟಿಯಲ್ಲಿ ರಿಲೀಸ್​ ಆಗತ್ತೆ ರವಿಚಂದ್ರನ್​ ಹೊಸ ಚಿತ್ರ ‘ಕನ್ನಡಿಗ’; ‘ಕ್ರೇಜಿ ಸ್ಟಾರ್’ ಅಭಿಮಾನಿಗಳಿಗೆ ಗುಡ್​ ನ್ಯೂಸ್​
ರವಿಚಂದ್ರನ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 13, 2021 | 11:51 AM

ಈ ವರ್ಷಾಂತ್ಯದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕೊರೊನಾ ಕಾರಣದಿಂದ ಅನೇಕ ಸಿನಿಮಾಗಳ ರಿಲೀಸ್​ ತಡವಾಯಿತು. ಅಂತಹ ಎಲ್ಲ ಚಿತ್ರಗಳು ಒಮ್ಮೆಲೇ ಥಿಯೇಟರ್​ಗೆ ಲಗ್ಗೆ ಇಡುತ್ತಿವೆ. ಹಾಗಾಗಿ ಎಲ್ಲ ಸಿನಿಮಾಗಳಿಗೆ ಸರಿಯಾಗಿ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗುವುದು ಅಸಾಧ್ಯ. ಈ ನಡುವೆ ಕೆಲವು ಚಿತ್ರತಂಡಗಳು ಓಟಿಟಿ ಪ್ಲಾಟ್​ಫಾರ್ಮ್​ (OTT platform) ಕಡೆಗೆ ಗಮನ ಹರಿಸಿವೆ. ರವಿಚಂದ್ರನ್ (Ravichandran)​ ನಟನೆಯ ‘ಕನ್ನಡಿಗ’ ಸಿನಿಮಾ (Kannadiga Movie) ಕೂಡ ಓಟಿಟಿ ಮೂಲಕ ಬಿಡುಗಡೆ ಆಗಲಿದೆ. ‘ಜಟ್ಟ’, ‘ಮೈತ್ರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಗಿರಿರಾಜ್​ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಡಿ.17ರಂದು ಜೀ5 (Zee5) ಮೂಲಕ ಬಿಡುಗಡೆ ಆಗಲಿದೆ.

ಹಲವು ಕಾರಣಗಳಿಂದಾಗಿ ‘ಕನ್ನಡಿಗ’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ರವಿಚಂದ್ರನ್​ ಅವರಿಗೆ ವಿಶೇಷ ಗೆಟಪ್​ ಇದೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲಿಪಿಕಾರ ಗುಣಭದ್ರನ ಪಾತ್ರವನ್ನು ರವಿಚಂದ್ರನ್​ ನಿಭಾಯಿಸಿದ್ದಾರೆ. ಈಗಾಗಲೇ ಹಲವು ಸದಭಿರುಚಿಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರುವ ಗಿರಿರಾಜ್​ ಅವರು ‘ಕನ್ನಡಿಗ’ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.

ನಟ ರಮೇಶ್​ ಅರವಿಂದ್​ ಅವರು ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ‘ನಮ್ಮ ರವಿಚಂದ್ರನ್​ ಅವರು ಬಹಳ ವಿಭಿನ್ನವಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊದಲು ಶಬ್ದಕೋಶವನ್ನ ಬರೆಯಲು ಸಹಾಯ ಮಾಡಿದವನ ಕಥೆ ಅಂತ ನನಗೆ ಅನಿಸ್ತಾ ಇದೆ. ಇದೇ ಡಿ.17ರಂದು ಜೀ5ನಲ್ಲಿ ಈ ಚಿತ್ರ ನೀವು ನೋಡಬಹುದು’ ಎಂದು ರಮೇಶ್​ ಹೇಳಿದ್ದಾರೆ.

ರಾಕ್​ಲೈನ್​ ವೆಂಕಟೇಶ್​, ಪಾವನಾ ಗೌಡ, ಅಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​, ಭವಾನಿ ಪ್ರಕಾಶ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್​ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ‌ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ‌ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ‌.

ಒಂದೇ ತಿಂಗಳಲ್ಲಿ ರವಿಚಂದ್ರನ್​ ನಟನೆಯ 2 ಸಿನಿಮಾ ರಿಲೀಸ್​:

ರವಿಚಂದ್ರನ್​ ಅಭಿನಯದ ‘ದೃಶ್ಯ 2’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಡಿ.10ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡು, ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅದರ ಬೆನ್ನಲೇ ಓಟಿಟಿ ಮೂಲಕ ‘ಕನ್ನಡಿಗ’ ರಿಲೀಸ್​ ಆಗುತ್ತಿದೆ. ‘ಕ್ರೇಜಿ ಸ್ಟಾರ್​’ ನಟನೆಯ ಎರಡೆರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ:

‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ

Published On - 11:50 am, Mon, 13 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ