AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿಗೆ ತೆರಳಿ ಮೋಜು ಮಸ್ತಿ ಮಾಡಿದ ಕರೀನಾ ಕಪೂರ್​ಗೆ ಕೊರೊನಾ ಪಾಸಿಟಿವ್​; ಹೆಚ್ಚಿತು ಆತಂಕ

ಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಂಪರ್ಕಕ್ಕೆ ಬಂದವರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿ ಎಂದು ಬಿಎಂಸಿ ಸೂಚಿಸಿದೆ.

ಪಾರ್ಟಿಗೆ ತೆರಳಿ ಮೋಜು ಮಸ್ತಿ ಮಾಡಿದ ಕರೀನಾ ಕಪೂರ್​ಗೆ ಕೊರೊನಾ ಪಾಸಿಟಿವ್​; ಹೆಚ್ಚಿತು ಆತಂಕ
ಕರೀನಾ-ಅಮೃತಾ
TV9 Web
| Edited By: |

Updated on:Dec 13, 2021 | 6:18 PM

Share

ಬಾಲಿವುಡ್​ನ ಖ್ಯಾತ ನಟಿ ಕರೀನಾ ಕಪೂರ್​ಗೆ ಕೊರೊನಾ ಪಾಸಿಟಿವ್​ ಆಗಿದೆ. ಅವರ ಜತೆ ಇದ್ದ ಗೆಳತಿ ಅಮೃತಾ ಅರೋರಾಗೂ ಕೊರೊನಾ ದೃಢಪಟ್ಟಿದೆ. ಬೃಹತ್​ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕರೀನಾ ಮನೆಯನ್ನು ಸೀಲ್​ಡೌನ್​ ಮಾಡಿದೆ. ಅವರು ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಯನ್ನು ಸೀಲ್​ಡೌನ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಿಎಂಸಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ನಟಿ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾಗೆ ಕೊವಿಡ್​ ಪಾಸಿಟಿವ್​ ಆಗಿದೆ. ಇಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಂಪರ್ಕಕ್ಕೆ ಬಂದವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿ’ ಎಂದು ಬಿಎಂಸಿ ಸೂಚಿಸಿದೆ. ಕೊವಿಡ್ ಉಂಟಾದ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ.

ಟ್ರೋಲ್​ ಆಗಿದ್ದ ಕರೀನಾ: 

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ನೆರವೇರಿದೆ. ಮದುವೆಯನ್ನು ಅದ್ದೂರಿಯಾಗಿ ನಡೆಸಲಾಗಿತ್ತು. ವಿವಾಹ ಗುಟ್ಟಾಗಿ ನಡೆದರೂ, ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಇಬ್ಬರೂ ಅಧಿಕೃತ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಸೆಲೆಬ್ರಿಟಿಗಳು ಈ ದಂಪತಿಗೆ ವಿಶ್​ ಮಾಡುತ್ತಿದ್ದಾರೆ. ಅಂತೆಯೇ ಕರೀನಾ ಕೂಡ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಫೋಟೋ ಹಂಚಿಕೊಂಡು ವಿಶ್​ ಮಾಡಿದ್ದಾರೆ. ಈ ವೇಳೆ ಅವರು ಮಾಡಿಕೊಂಡ ಎಡವಟ್ಟೇನು? ಅವರನ್ನು ಟ್ರೋಲ್​ ಮಾಡೋಕೆ ಕಾರಣವೇನು? ವಿಚಾರ ಸಿಂಪಲ್​.

ಕತ್ರಿನಾ ಮತ್ತು ರಣಬೀರ್​ ಕಪೂರ್​ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ತಿಳಿದೇ ಇದೆ. ಆದರೆ, ಇವರ ಸಂಬಂಧ ಬಹಳ ಸಮಯವರೆಗೆ ಉಳಿದಿಲ್ಲ. ಇದು ರಣಬೀರ್​ ಕಪೂರ್​ ಸಹೋದರಿ ಕರೀನಾ ಮೇಲೂ ಎಫೆಕ್ಟ್​ ಆಗಿತ್ತು. ಕತ್ರಿನಾ ಹಾಗೂ ರಣಬೀರ್​ ಬ್ರೇಕಪ್​ ನಂತರದಲ್ಲಿ ಕತ್ರಿನಾ ಮತ್ತು ಕರೀನಾ ದೂರವಾದರು. ಸೋಶಿಯಲ್​ಮೀಡಿಯಾದಲ್ಲಿ ಕತ್ರಿನಾ ಅವರನ್ನು ಅನ್​ಫಾಲೋ ಮಾಡಿದರು ಕರೀನಾ. ಇದಾದ ಹಲವು ವರ್ಷಗಳ ನಂತರದಲ್ಲಿ ಕತ್ರಿನಾಗೆ ಕರೀನಾ ವಿಶ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಫಾಲೋ ಮಾಡೋಕು ಆರಂಭಿಸಿದ್ದಾರೆ. ಈ ವಿಚಾರ ಇಟ್ಟುಕೊಂಡೇ ಟ್ರೋಲ್​ ಮಾಡಲಾಗಿದೆ. ‘ಕರೀನಾ ಅವರು ಕತ್ರಿನಾ ಅವರನ್ನು ಫಾಲೋ ಮಾಡೋಕೆ ವಿವಾಹವೇ ಏರ್ಪಡಬೇಕಾಯಿತು’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಸೈಫ್​ ಅಲಿ ಖಾನ್​ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್​ ನೀಡಲು ಅಡ್ಡಿಪಡಿಸಿದ ಮಗ ಜೇಹ್​

ಕತ್ರಿನಾ ಕೈಫ್​ಗೆ ವಿಶ್​ ಮಾಡಿ ಟ್ರೋಲ್​ ಆದ ಕರೀನಾ ಕಪೂರ್​; ಇದಕ್ಕಿದೆ ರಣಬೀರ್​ ಲಿಂಕ್​

Published On - 6:14 pm, Mon, 13 December 21

Follow Us
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ