ಕತ್ರಿನಾ ಕೈಫ್​ಗೆ ವಿಶ್​ ಮಾಡಿ ಟ್ರೋಲ್​ ಆದ ಕರೀನಾ ಕಪೂರ್​; ಇದಕ್ಕಿದೆ ರಣಬೀರ್​ ಲಿಂಕ್​

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ನೆರವೇರಿದೆ. ಮದುವೆಯನ್ನು ಅದ್ದೂರಿಯಾಗಿ ನಡೆಸಲಾಗಿತ್ತು. ವಿವಾಹ ಗುಟ್ಟಾಗಿ ನಡೆದರೂ, ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಇಬ್ಬರೂ ಅಧಿಕೃತ ಮಾಡಿದ್ದಾರೆ.

ಕತ್ರಿನಾ ಕೈಫ್​ಗೆ ವಿಶ್​ ಮಾಡಿ ಟ್ರೋಲ್​ ಆದ ಕರೀನಾ ಕಪೂರ್​; ಇದಕ್ಕಿದೆ ರಣಬೀರ್​ ಲಿಂಕ್​
ಕತ್ರಿನಾ-ಕರೀನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 10, 2021 | 3:49 PM

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್ ದಂಪತಿ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಇಬ್ಬರು ಮಾಡುವ ಸಣ್ಣ ತಪ್ಪನ್ನೇ ಇಟ್ಟುಕೊಂಡು ದೊಡ್ಡದಾಗಿ ಬಿಂಬಿಸಿ ಟ್ರೋಲ್​ ಮಾಡಲಾಗುತ್ತದೆ. ಇಬ್ಬರ ಮೇಲೆ ಅದೆಂತಹ ದ್ವೇಷವೋ ಗೊತ್ತಿಲ್ಲ. ಆದರೆ, ಟ್ರೋಲಿಗರಿಗೆ ಇವರು ಪದೇಪದೇ ಆಹಾರ ಆಗುತ್ತಿರುವುದು ಮಾತ್ರ ನಡೆದೇ ಇದೆ. ಈ ಬಾರಿ ಕರೀನಾ ಟೀಕೆಗೆ ಒಳಗಾಗಿದ್ದಾರೆ. ಅದೂ ನವ ಜೋಡಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ಗೆ ವಿಶ್​ ಮಾಡಿ. ಹಾಗಾದರೆ, ಅವರು ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ನೆರವೇರಿದೆ. ಮದುವೆಯನ್ನು ಅದ್ದೂರಿಯಾಗಿ ನಡೆಸಲಾಗಿತ್ತು. ವಿವಾಹ ಗುಟ್ಟಾಗಿ ನಡೆದರೂ, ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಇಬ್ಬರೂ ಅಧಿಕೃತ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಸೆಲೆಬ್ರಿಟಿಗಳು ಈ ದಂಪತಿಗೆ ವಿಶ್​ ಮಾಡುತ್ತಿದ್ದಾರೆ. ಅಂತೆಯೇ ಕರೀನಾ ಕೂಡ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಫೋಟೋ ಹಂಚಿಕೊಂಡು ವಿಶ್​ ಮಾಡಿದ್ದಾರೆ. ಈ ವೇಳೆ ಅವರು ಮಾಡಿಕೊಂಡ ಎಡವಟ್ಟೇನು? ಅವರನ್ನು ಟ್ರೋಲ್​ ಮಾಡೋಕೆ ಕಾರಣವೇನು? ವಿಚಾರ ಸಿಂಪಲ್​.

ಕತ್ರಿನಾ ಮತ್ತು ರಣಬೀರ್​ ಕಪೂರ್​ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ತಿಳಿದೇ ಇದೆ. ಆದರೆ, ಇವರ ಸಂಬಂಧ ಬಹಳ ಸಮಯವರೆಗೆ ಉಳಿದಿಲ್ಲ. ಇದು ರಣಬೀರ್​ ಕಪೂರ್​ ಸಹೋದರಿ ಕರೀನಾ ಮೇಲೂ ಎಫೆಕ್ಟ್​ ಆಗಿತ್ತು. ಕತ್ರಿನಾ ಹಾಗೂ ರಣಬೀರ್​ ಬ್ರೇಕಪ್​ ನಂತರದಲ್ಲಿ ಕತ್ರಿನಾ ಮತ್ತು ಕರೀನಾ ದೂರವಾದರು. ಸೋಶಿಯಲ್​ಮೀಡಿಯಾದಲ್ಲಿ ಕತ್ರಿನಾ ಅವರನ್ನು ಅನ್​ಫಾಲೋ ಮಾಡಿದರು ಕರೀನಾ. ಇದಾದ ಹಲವು ವರ್ಷಗಳ ನಂತರದಲ್ಲಿ ಕತ್ರಿನಾಗೆ ಕರೀನಾ ವಿಶ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಫಾಲೋ ಮಾಡೋಕು ಆರಂಭಿಸಿದ್ದಾರೆ. ಈ ವಿಚಾರ ಇಟ್ಟುಕೊಂಡೇ ಟ್ರೋಲ್​ ಮಾಡಲಾಗಿದೆ. ‘ಕರೀನಾ ಅವರು ಕತ್ರಿನಾ ಅವರನ್ನು ಫಾಲೋ ಮಾಡೋಕೆ ವಿವಾಹವೇ ಏರ್ಪಡಬೇಕಾಯಿತು’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಕತ್ರಿನಾ ಕೈಫ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 94 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್​ ಮಾಡಿದ್ದಾರೆ. ವಿಕ್ಕಿ ಕೌಶಲ್​ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿನ ಫೋಟೋಗಳಿಗೆ 60 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಬಟನ್​ ಒತ್ತಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ಟ್ವಿಂಕಲ್​ ಖನ್ನಾ, ಪರಿಣೀತಿ ಚೋಪ್ರಾ, ಹೃತಿಕ್​ ರೋಷನ್​, ಪ್ರಿಯಾಂಕಾ ಚೋಪ್ರಾ, ಸೋನಮ್​ ಕಪೂರ್, ನಿಕ್​ ಜೋನಸ್​, ಬಿಪಾಶಾ ಬಸು, ಇಶಾನ್​ ಕಟ್ಟರ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ, ಗಾಯಕಿ ಪಲಕ್​ ಮುಚ್ಚಲ್​ ಸೇರಿದಂತೆ ಅನೇಕ ತಾರೆಯರು ಈ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾದ ಅಸಲಿ ಹೀರೋ ಯಾರು? ಸತ್ಯ ಬಿಚ್ಚಿಟ್ಟ ರಾಜಮೌಳಿ

ಸೈಫ್​ ಅಲಿ ಖಾನ್​ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್​ ನೀಡಲು ಅಡ್ಡಿಪಡಿಸಿದ ಮಗ ಜೇಹ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ