ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​

 ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​
ಆರ್ಯನ್​ ಖಾನ್​

ಆರ್ಯನ್​ ಖಾನ್​ ಬಾಲಿವುಡ್​ಗೆ ಕಾಲಿಡೋದು ಬಹುತೇಕ ಪಕ್ಕಾ. ಇದಕ್ಕೂ ಮೊದಲು ವಿದೇಶಕ್ಕೆ ತೆರಳಿ ನಟನಾ ತರಬೇತಿ ಪಡೆಯುವ ಆಲೋಚನೆಯಲ್ಲಿ ಅವರು ಇದ್ದರು. ಆದರೆ. ಸದ್ಯದಮಟ್ಟಿಗಂತೂ ಇದು ದೂರದ ಮಾತು.

TV9kannada Web Team

| Edited By: Rajesh Duggumane

Dec 18, 2021 | 4:03 PM

ಬಾಲಿವುಡ್​ ನಟ ಶಾರುಖ್​ ಖಾನ್​ (Shah Rukh Khan) ಮಗ ಆರ್ಯನ್​ ಖಾನ್ಡ್ರಗ್​ಕೇಸ್​ನಲ್ಲಿ (​Aryan Khan Drug Case) ಸಿಕ್ಕಿಬಿದ್ದ ನಂತರದಲ್ಲಿ ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಈಗ ಈ ಸಂಕಷ್ಟಗಳು ಒಂದೊಂದಾಗಿ ದೂರವಾಗುತ್ತಿದೆ. ಆರ್ಯನ್​ ಖಾನ್​ಗೆ ಪ್ರತಿವಾರವೂ ಎನ್​ಸಿಬಿ ಕಚೇರಿಗೆ ತೆರಳಿ ಸಹಿ ಹಾಕಬೇಕಿತ್ತು. ಈ ಪ್ರಕ್ರಿಯೆಯಿಂದ ಅವರು ಇತ್ತೀಚೆಗೆ ರಿಲೀಫ್​ ಪಡೆದಿದ್ದರು. ಈಗ ಆರ್ಯನ್​ ಖಾನ್​ ಭವಿಷ್ಯದ ಬಗ್ಗೆ ಶಾರುಖ್​ ಚಿಂತನೆ ಮಾಡಿದ್ದಾರೆ. ಖ್ಯಾತ ಪ್ರೊಡಕ್ಷನ್​ಹೌಸ್​ ಜತೆ ಆರ್ಯನ್​ ಖಾನ್​ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ.

ಆರ್ಯನ್​ ಖಾನ್​ ಬಾಲಿವುಡ್​ಗೆ ಕಾಲಿಡೋದು ಬಹುತೇಕ ಪಕ್ಕಾ. ಇದಕ್ಕೂ ಮೊದಲು ವಿದೇಶಕ್ಕೆ ತೆರಳಿ ನಟನಾ ತರಬೇತಿ ಪಡೆಯುವ ಆಲೋಚನೆಯಲ್ಲಿ ಅವರು ಇದ್ದರು. ಆದರೆ. ಸದ್ಯದಮಟ್ಟಿಗಂತೂ ಇದು ದೂರದ ಮಾತು. ಆರ್ಯನ್​ ಖಾನ್​ ಜೈಲು ಸೇರಿದ ಒಂದು ತಿಂಗಳು ನಂತರದಲ್ಲಿ ಜಾಮೀನು ಪಡೆದು ಬಂದಿದ್ದರು. ಜಾಮೀನು ಪಡೆದ ನಂತರದಲ್ಲಿ ಅವರು ಪಾಸ್​ಪೋರ್ಟ್ಅನ್ನು ಕೋರ್ಟ್​ಗೆ ನೀಡಬೇಕಿತ್ತು. ಹೀಗಾಗಿ, ಪ್ರಕರಣ ಮುಗಿಯುವವರೆಗೆ ಅವರು ವಿದೇಶಕ್ಕೆ ತೆರಳುವಂತಿಲ್ಲ. ಹೀಗಾಗಿ ಎಸ್​ಆರ್​ಕೆ ಬೇರೆ ಪ್ಲ್ಯಾನ್​ ಒಂದನ್ನು ಮಾಡಿಕೊಂಡಿದ್ದಾರೆ.

ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಆದಿತ್ಯ ಚೋಪ್ರಾ ಹಾಗೂ ಧರ್ಮ ಪ್ರೊಡಕ್ಷನ್​​ ಹೌಸ್​ ಒಡೆಯ ಕರಣ್ ಜೋಹರ್​ ಜತೆಗೆ ಶಾರುಖ್​ ಖಾನ್​ ಅವರು ಒಡನಾಟ ಹೊಂದಿದ್ದಾರೆ. ಹೀಗಾಗಿ ಇವರ ಜತೆ ಆರ್ಯನ್​ ಖಾನ್​ ಕೆಲಸ ಮಾಡೋ ಸಾಧ್ಯತೆ ಇದೆ. ಈ ಮೂಲಕ ಸಿನಿಮಾಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಆರ್ಯನ್ ಕಲಿಯಬಹುದು ಎಂಬುದು ಶಾರುಖ್​ ಪ್ಲ್ಯಾನ್​.

ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದರು. ಅಕ್ಟೋಬರ್​ ತಿಂಗಳ ಆರಂಭದಲ್ಲೇ ಆರ್ಯನ್ ಅವರನ್ನು ಬಂಧಿಸಲಾಗಿತ್ತು. ಇದರಿಂದ ಶಾರುಖ್​ ಕುಗ್ಗಿದ್ದಾರೆ. ಅವರು ಸೋಶಿಯಲ್​ ಮೀಡಿಯಾದಿಂದ ದೂರ ಉಳಿದುಕೊಂಡಿದ್ದಾರೆ. ಇತ್ತೀಚಿಗೆ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿದ್ದರು.

ಆರ್ಯನ್​ ಖಾನ್​ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿರುವ ‘ಪಠಾಣ್​’ ಸಿನಿಮಾ ಕೆಲಸಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಆರ್ಯನ್​ ಖಾನ್​ ಪ್ರಕರಣ ಮುನ್ನೆಲೆಗೆ ಬಂದ ನಂತರದಲ್ಲಿ ಶಾರುಖ್​ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿದ್ದರು. ಈಗ 15-20 ದಿನಗಳ ಕಾಲ ಮುಂಬೈನಲ್ಲಿ ಶೂಟಿಂಗ್​ ನಡೆಯಲಿದೆ. ಆ ಬಳಿಕ ವಿದೇಶದಲ್ಲಿ ಶೂಟಿಂಗ್​ ನಡೆಯಲಿದೆ.

ಇದನ್ನೂ ಓದಿ:  ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣ: ಆರೋಪಿಗಳ ಸಂಚು ನಿರೂಪಿಸುವ ಪುರಾವೆ ಇಲ್ಲ ಎಂದ ಬಾಂಬೆ ಹೈಕೋರ್ಟ್

Aryan Khan: ಆರ್ಯನ್​ ಖಾನ್​ಗೆ ಬಿಗ್ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್; ಜಾಮೀನು ಷರತ್ತು ಸಡಿಲಗೊಳಿಸಿ ಆದೇಶ

Follow us on

Related Stories

Most Read Stories

Click on your DTH Provider to Add TV9 Kannada