ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​

Brahmastra Movie: ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್​ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ.

ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​
ಆಲಿಯಾ ಭಟ್, ರಣಬೀರ್​ ಕಪೂರ್​
TV9kannada Web Team

| Edited By: Madan Kumar

Dec 18, 2021 | 12:29 PM

ಕರ್ನಾಟಕದಲ್ಲಿ ಡಬ್ಬಿಂಗ್ (Dubbing Cinema) ಸಿನಿಮಾಗಳಿಗೆ ಹೆಬ್ಬಾಗಿಲು ತೆರೆದಿದೆ. ಎಲ್ಲ ಭಾಷೆಯ ಬಿಗ್​ ಬಜೆಟ್​ ಸಿನಿಮಾಗಳು ಏಕಕಾಲಕ್ಕೆ ಕನ್ನಡಕ್ಕೆ ಡಬ್​ ಆಗಿ ತೆರೆಕಾಣುತ್ತಿವೆ. ಇತ್ತೀಚೆಗಷ್ಟೇ ‘ಪುಷ್ಪ’ ಸಿನಿಮಾದ ಕನ್ನಡ ವರ್ಷನ್​ ಬಿಡುಗಡೆ ಆಗಿದೆ. ಆದರೆ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡದ ಅವತರಣಿಕೆ ರಿಲೀಸ್​ ​ಮಾಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಕೂಡ ಭುಗಿಲೆದ್ದಿದೆ. ಮುಂಬರುವ ದಿನಗಳಲ್ಲಿ ಕನ್ನಡಕ್ಕೆ ಡಬ್​ ಆಗಿ ತೆರೆಕಾಣಲು ಹಲವು ಚಿತ್ರಗಳು ಸಜ್ಜಾಗಿವೆ. ಜ.7ರಂದು ‘ಆರ್​ಆರ್​ಆರ್​’ ಚಿತ್ರದ ಕನ್ನಡ ವರ್ಷನ್​ ಬಿಡುಗಡೆ ಆಗಲಿದೆ. ಅದೇ ರೀತಿ ಬಾಲಿವುಡ್​ನ ‘ಬ್ರಹ್ಮಾಸ್ತ್ರ’ (Brahmastra Movie) ಸಿನಿಮಾ ಸಹ ಕನ್ನಡದಲ್ಲಿ ತೆರೆಕಾಣಲಿದೆ. ಆ ಚಿತ್ರದ ಬಗ್ಗೆ ನಟಿ ಆಲಿಯಾ ಭಟ್ (Alia Bhatt)​ ಅವರು ಕನ್ನಡದಲ್ಲೇ ಟ್ವೀಟ್​ ಮಾಡಿದ್ದಾರೆ.

ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್​ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ನಟ ರಣಬೀರ್​ ಕಪೂರ್​ ಅವರು ಶಿವನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೋಷನ್​ ಪೋಸ್ಟರ್​ನಿಂದ ಅಭಿಮಾನಿಗಳಲ್ಲಿ ಭಾರಿ ಕೌತುಕ ನಿರ್ಮಾಣ ಆಗಿದೆ.

‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್​ ಒನ್​: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ​’ ಎಂದು ಆಲಿಯಾ ಭಟ್​ ಕನ್ನಡಲ್ಲೇ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಡಬ್ಬಿಂಗ್​ ಸಿನಿಮಾಗಳ ಮೂಲಕ ಆಲಿಯಾ ಭಟ್​ ಅವರು ಕರ್ನಾಟಕದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇಟ್ಟುಕೊಂಡಿರುವ ಅವರು ಇದೇ ಮೊದಲ ಬಾರಿಗೆ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಸಿನಿಮಾದ ಪ್ರಚಾರಕ್ಕಾಗಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಆಲಿಯಾ ನಟನೆಯ ‘ಸಡಕ್​ 2’ ಚಿತ್ರದ ಶೂಟಿಂಗ್​ ಮೈಸೂರು ಸುತ್ತಮುತ್ತ ನಡೆದಿತ್ತು. ಈಗ ‘ಬ್ರಹ್ಮಾಸ್ತ್ರ’ ಪ್ರಚಾರದ ಸಲುವಾಗಿ ಅವರು ಕನ್ನಡದಲ್ಲಿ ಟ್ವೀಟ್​ ಮಾಡಿದ್ದಾರೆ. ಈ ಚಿತ್ರಕ್ಕೆ ಅಯಾನ್​ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೂ ಡಬ್​ ಆಗಿ ತೆರೆಕಾಣಲಿದೆ.

 ಇದನ್ನೂ ಓದಿ:

ಮದುವೆ ವಿಚಾರದಲ್ಲಿ ನಿರ್ಧಾರ ಬದಲಿಸಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಹರಿದಾಡಿದ ಹೊಸ ಸುದ್ದಿ

ಮೊದಲ ದಿನವೇ ಲೀಕ್​ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ; ಕಲೆಕ್ಷನ್​ ಮೇಲೆ ಬೀಳಲಿದೆ ಪೆಟ್ಟು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada