ಮೊದಲ ದಿನವೇ ಲೀಕ್​ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ; ಕಲೆಕ್ಷನ್​ ಮೇಲೆ ಬೀಳಲಿದೆ ಪೆಟ್ಟು

ಪೈರಸಿ ಕಾಟ ನಿನ್ನೆ-ಮೊನ್ನೆಯದಲ್ಲ. ಅನೇಕ ಸ್ಟಾರ್​ ನಟರ ಸಿನಿಮಾಗಳು ಪೈರಸಿಗೆ ಬಲಿ ಆದ ಉದಾಹರಣೆಗಳಿವೆ. ಈಗ ಪುಷ್ಪ ಚಿತ್ರ ಕೂಡ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ.

ಮೊದಲ ದಿನವೇ ಲೀಕ್​ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ; ಕಲೆಕ್ಷನ್​ ಮೇಲೆ ಬೀಳಲಿದೆ ಪೆಟ್ಟು
ಪುಷ್ಪ ಸಿನಿಮಾ
TV9kannada Web Team

| Edited By: Madan Kumar

Dec 17, 2021 | 3:42 PM

ಭಾರಿ ನಿರೀಕ್ಷೆಯೊಂದಿಗೆ ‘ಪುಷ್ಪ’ ಸಿನಿಮಾ (Pushpa Movie) ಇಂದು (ಡಿ.17) ಬಿಡುಗಡೆ ಆಗಿದೆ. ಅಲ್ಲು ಅರ್ಜುನ್​ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳು ಮುಗಿಬಿದ್ದು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಆದರೆ ಈ ಖುಷಿಯ ನಡುವೆಯೇ ಶಾಕ್​ ಎದುರಾಗಿದೆ. ‘ಪುಷ್ಪ’ ಸಿನಿಮಾ ಬಿಡುಗಡೆಯಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ಚಿತ್ರದ ಪೈರಸಿ (Piracy) ಕಾಪಿ ಲೀಕ್​ ಆಗಿದೆ. ಆನ್​ಲೈನ್​ನಲ್ಲಿ ಪೈರಸಿ ಕಾಪಿ (Pushpa Movie Piracy)) ಹರಿದಾಡುತ್ತಿದೆ. ತಮಿಳ್​ ರಾಕರ್ಸ್​ ಸೇರಿದಂತೆ ಹಲವು ಕುಖ್ಯಾತ ವೆಬ್​ ಸೈಟ್​ಗಳಲ್ಲಿ ‘ಪುಷ್ಪ’ ಸಿನಿಮಾ ಲಭ್ಯವಿದೆ. ಇದರಿಂದ ಚಿತ್ರತಂಡಕ್ಕೆ ತಲೆಬಿಸಿ ಶುರುವಾಗಿದೆ. ಚಿತ್ರದ ಕಲೆಕ್ಷನ್​ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಸಿನಿಮಾರಂಗಕ್ಕೆ ಪೈರಸಿ ಕಾಟ ನಿನ್ನೆ-ಮೊನ್ನೆಯದಲ್ಲ. ಅನೇಕ ಸ್ಟಾರ್​ ನಟರ ಸಿನಿಮಾಗಳು ಪೈರಸಿಗೆ ಬಲಿ ಆದ ಉದಾಹರಣೆಗಳಿವೆ. ಈಗ ಪುಷ್ಪ ಚಿತ್ರ ಕೂಡ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ. ತೆಲುಗಿನಲ್ಲಿ ನಿರ್ಮಾಣವಾದ ಈ ಚಿತ್ರ ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ರಿಲೀಸ್​ ಆಗಿದೆ. ವಿದೇಶದಲ್ಲೂ ಅನೇಕ ಸೆಂಟರ್​ಗಳಲ್ಲಿ ಬಿಡುಗಡೆ ಆಗಿದೆ. ಹಾಗಾಗಿ ಎಲ್ಲಿಂದ ಪೈರಸಿ ಆಗಿರಬಹುದು ಎಂಬುದು ಪತ್ತೆ ಆಗುತ್ತಿಲ್ಲ.

ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕನ್ನಡದ ಜನಪ್ರಿಯ ನಟ ಡಾಲಿ ಧನಂಜಯ, ಮಲಯಾಳಂ ಸ್ಟಾರ್​ ಕಲಾವಿದ ಫಹಾದ್​ ಫಾಸಿಲ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ದೇವಿಶ್ರೀ ಪ್ರಸಾದ್​ ಅವರು ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳೆಲ್ಲೂ ಹಿಟ್​ ಆಗಿವೆ. ಚಿತ್ರದ ಬಗ್ಗೆ ಕ್ರೇಜ್​ ಹೆಚ್ಚಲು ಹಾಡುಗಳು ಕಾರಣ ಆಗಿವೆ.

ಡಿಫರೆಂಟ್​ ಗೆಟಪ್​ನಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ತುಂಬ ಮಾಸ್​ ಆಗಿ ಸಿನಿಮಾ ಮೂಡಿಬಂದಿದೆ. ರಶ್ಮಿಕಾ ಪಾತ್ರ ಕೂಡ ಭಿನ್ನವಾಗಿದೆ. ಕೆಲವರು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಇದೊಂದು ಸಾಮಾನ್ಯ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ವಿಟರ್​ನಲ್ಲಿ ಎಲ್ಲ ಬಗೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.

ಇದನ್ನೂ ಓದಿ:

Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ

Pushpa Twitter Review: ಅಲ್ಲು ಅರ್ಜುನ್​, ರಶ್ಮಿಕಾ ಚಿತ್ರ ಹಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಷ್ಟವಾಯ್ತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada