ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಇಂದು (ಡಿಸೆಂಬರ್ 17) ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಕೆ ಆಗಿಲ್ಲ. ಇದು ಅಭಿಮಾನಿಗಳಿಗೆ ಕೊಂಚ ನಿರಾಸೆ ತಂದಿದೆ. ಅಭಿಮಾನಿಗಳು ಚಿತ್ರಮಂದಿರಕ್ಕೆ ನಾನಾ ಗೆಟಪ್ನಲ್ಲಿ ಬಂದಿದ್ದರು. ಅಭಿಮಾನಿಯೋರ್ವ ಪುಷ್ಪರಾಜ್ ಗೆಟಪ್ನಲ್ಲಿಯೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇದು ಸಾಕಷ್ಟು ಗಮನ ಸೆಳೆಯಿತು. ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಬಗ್ಗೆ ಆ ಅಭಿಮಾನಿ ಮಾತನಾಡಿದ್ದಾರೆ. ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳಿನಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಬೇಸರದ ವಿಚಾರ ಎಂದರೆ, ಕನ್ನಡ ಅವತರಣಿಕೆಯಲ್ಲಿ ಈ ಸಿನಿಮಾ ಇಂದು ತೆರೆಕಾಣಲೇ ಇಲ್ಲ. ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಮಾತು ಚಿತ್ರಮಂದಿರದವರ ಕಡೆಯಿಂದ ಬಂದಿದೆ. ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ದೌರ್ಜನ್ಯ ನಡೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲವರು ಈ ಬಗ್ಗೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ‘ಪುಷ್ಪ’ ಕನ್ನಡ ವರ್ಷನ್ ನೋಡೋಕೆ ಬಂದವರ ಮೇಲೆ ದೌರ್ಜನ್ಯ; ತೆಲುಗು ನೋಡಿ ಎಂದು ಅವಾಜ್ Pushpa Movie First Half Review: ಮಾಸ್ ಅಲ್ಲು ಅರ್ಜುನ್; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್ ಹಾಫ್ ವಿಮರ್ಶೆ