‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್

Love you Racchu trailer: ‘ಲವ್​ ಯೂ ರಚ್ಚು’ ಚಿತ್ರದ ಟ್ರೇಲರ್ ಲಾಂಚ್​ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅತಿಥಿಯಾಗಿ ಆಗಮಿಸಿದ್ದರು. ಅವರಿಗೆ ಆಂಜನೇಯನ ಮೇಲಿರುವ ಭಕ್ತಿ ಬಗ್ಗೆ ರಚಿತಾ ರಾಮ್​ ಮಾತನಾಡಿದರು.

TV9kannada Web Team

| Edited By: Madan Kumar

Dec 17, 2021 | 10:07 AM

ನಟ ಧ್ರುವ ಸರ್ಜಾ (Dhruva Sarja) ಅವರು ಆಂಜನೇಯನ ಪರಮ ಭಕ್ತ ಅನ್ನೋದು ತಿಳಿದಿರುವ ವಿಷಯ. ಅವರು ಸೋಶಿಯಲ್​ ಮೀಡಿಯಾದಲ್ಲಿ ಏನೇ ಪೋಸ್ಟ್​ ಮಾಡಿದರೂ ಅದರ ಜತೆಗೆ ‘ಜೈ ಆಂಜನೇಯ’ ಎನ್ನುವ ಜೈಕಾರ ಇದ್ದೇ ಇರುತ್ತದೆ. ಅವರ ಸಿನಿಮಾಗಳಲ್ಲೂ ಹನುಮನ ಪ್ರಸ್ತಾಪ ಇರುತ್ತದೆ. ಈ ವಿಚಾರದ ಬಗ್ಗೆ ಅವರು ರಚಿತಾ ರಾಮ್ (Rachita Ram)​ ಜತೆ ಆಗಾಗ ಮಾತನಾಡುತ್ತಾರಂತೆ. ರಚಿತಾ ಕೂಡ ಆಂಜನೇಯನ ಭಕ್ತೆ. ಅವರು ನಟಿಸಿರುವ ‘ಲವ್​ ಯೂ ರಚ್ಚು’ (Love you Racchu) ಸಿನಿಮಾದ ಟ್ರೇಲರ್​ ರಿಲೀಸ್ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅತಿಥಿಯಾಗಿ ಬಂದಿದ್ದರು. ಧ್ರುವ ಬಗ್ಗೆ ರಚಿತಾ ಮನಸಾರೆ ಮಾತನಾಡಿದರು. ‘ನನ್ನ ಮತ್ತು ಧ್ರುವ ನಡುವೆ ಯಾವಾಗಲೂ ಒಂದು ಸಣ್ಣ ಜಗಳ ಆಗುತ್ತಲೇ ಇರುತ್ತದೆ. ಆಂಜನೇಯನ ಬಗ್ಗೆ ನಮ್ಮಿಬ್ಬರಲ್ಲಿ ಹೆಚ್ಚು ಭಕ್ತಿ ಯಾರಿಗೆ ಇದೆ ಎಂಬ ವಿಷಯ ಇಟ್ಟುಕೊಂಡು ಫೈಟ್​ ಮಾಡುತ್ತೇವೆ. ಧ್ರುವ ಅವರೇ ಆಂಜನೇಯನ ಮಗ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

ಇದನ್ನೂ ಓದಿ:

ಚಂದನ್ ಶೆಟ್ಟಿ ಜತೆ ರಚಿತಾ ರಾಮ್​ ‘ಲಕ ಲಕ ಲ್ಯಾಂಬೋರ್ಗಿನಿ’; ಪೋಸ್ಟರ್​ ಮೂಲಕ ಹೆಚ್ಚಿತು ಕ್ರೇಜ್​

‘ಕನ್ನಡದ ಭಾವುಟಕ್ಕೆ ಮರ್ಯಾದೆ ಕೊಡಲೇ ಬೇಕು’; ಧ್ರುವ ಸರ್ಜಾ ಖಡಕ್​ ಮಾತು

Follow us on

Click on your DTH Provider to Add TV9 Kannada