‘ಕನ್ನಡದ ಬಾವುಟಕ್ಕೆ ಮರ್ಯಾದೆ ಕೊಡಲೇ ಬೇಕು’; ಧ್ರುವ ಸರ್ಜಾ ಖಡಕ್​ ಮಾತು

Kannada Flag: ಕಿಡಿಗೇಡಿಗಳು ಕನ್ನಡದ ಧ್ವಜವನ್ನು ಸುಟ್ಟು ಹಾಕಿದ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಧ್ರುವ ಸರ್ಜಾ ಕೂಡ ಧ್ವನಿ ಎತ್ತಿದ್ದಾರೆ.

TV9kannada Web Team

| Edited By: Madan Kumar

Dec 17, 2021 | 10:11 AM

ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ (Karnataka Flag) ಸುಟ್ಟು ಹಾಕಿದ ಘಟನೆ ನಡೆದಿದೆ. ಆ ಬಗ್ಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಟ ಧ್ರುವ ಸರ್ಜಾ (Dhruva Sarja) ಕೂಡ ತಮ್ಮ ಧ್ವನಿ ಎತ್ತಿದ್ದಾರೆ. ರಚಿತಾ ರಾಮ್​ ಮತ್ತು ಅಜಯ್​ ರಾವ್​ ನಟನೆಯ ‘ಲವ್​ ಯೂ ರಚ್ಚು’ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಕರುನಾಡಿನ ಧ್ವಜದ ಬಗ್ಗೆ ಅವರು ಮಾತನಾಡಿದರು. ‘ಕರ್ನಾಟಕದ ಬಾವುಟಕ್ಕೆ ಎಲ್ಲರೂ ಮರ್ಯಾದೆ ಕೊಡಲೇಬೇಕು. ಮರ್ಯಾದೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿಲ್ಲ. ಅದು ಮನಸ್ಸಿನಲ್ಲೇ ಇರುತ್ತದೆ. ನಾವು ನಿಮಗೆ ಯಾವ ರೀತಿ ಮರ್ಯಾದೆ ಕೊಡುತ್ತೇವೋ ಅದೇ ರೀತಿ ನೀವು ನಮ್ಮ ಧ್ವಜವನ್ನು ಗೌರವಿಸಬೇಕು’ ಎಂದಿದ್ದಾರೆ ಧ್ರುವ. ಶಿವರಾಜ್​ಕುಮಾರ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಜಗ್ಗೇಶ್​, ಸಂತೋಷ್​ ಆನಂದ್​ರಾಮ್​ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.

ಸೋಶಿಯಲ್​ ಮೀಡಿಯಾ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಲಾಗುತ್ತಿದೆ.

ಇದನ್ನೂ ಓದಿ:

ನಮ್ಮ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದವರನ್ನು ಕೂಡಲೇ ಬಂಧಿಸಬೇಕು; ಗಣೇಶ್​

ಪುನೀತ್​ ರಾಜ್​ಕುಮಾರ್​ಗಾಗಿ ಫ್ಯಾನ್ಸ್​ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ

Follow us on

Click on your DTH Provider to Add TV9 Kannada