ನಮ್ಮ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದವರನ್ನು ಕೂಡಲೇ ಬಂಧಿಸಬೇಕು; ಗಣೇಶ್​

ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಸುಟ್ಟು ಹಾಕಿದ ಘಟನೆ ನಡೆದಿದೆ. ಅದನ್ನು ಗಣೇಶ್​ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

Dec 16, 2021 | 6:13 PM

ನಿರ್ದೇಶಕ ಸಿಂಪಲ್​ ಸುನಿ ಹಾಗೂ ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಎರಡನೇ ಬಾರಿಗೆ ಒಂದಾಗಿದ್ದಾರೆ. ‘ಚಮಕ್​’ ಮೂಲಕ ಹಿಟ್​ ಎನಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತೆಯೇ ಸಿನಿಮಾವನ್ನು ಎಂಟರ್​​ಟೇನಿಂಗ್​ ಆಗಿ ಕಟ್ಟಿಕೊಟ್ಟಿದ್ದರು ಸುನಿ. ಇಂದು ಸಿನಿಮಾದ ಸಕ್ಸಸ್​ ಮೀಟ್​ ಆಯೋಜನೆ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಸುಟ್ಟು ಹಾಕಿದ ಘಟನೆ ನಡೆದಿದೆ. ಅದನ್ನು ಗಣೇಶ್​ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಸಖತ್​ ಸಿನಿಮಾದಲ್ಲಿ ಗಣೇಶ್​ ಇದೇ ಮೊದಲ ಬಾರಿಗೆ ಅಂಧನ ರೀತಿಯಲ್ಲಿ ನಟಿಸಿದ್ದಾರೆ. ಕೊಟ್ಟ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆಯುತ್ತಾರೆ. ನಟಿ ಸುರಭಿ ಉತ್ತಮವಾಗಿ ನಟಿಸಿದ್ದಾರೆ. ಗಣೇಶ್​ ಮಗ ವಿಹಾನ್​ ಕೂಡ ಸಿನಿಮಾದಲ್ಲಿ ನಟಿಸಿದ್ದಾನೆ. ಮೊದಲ ಚಿತ್ರದಲ್ಲೇ ಅವನು ಎಲ್ಲರ ಗಮನ ಸೆಳೆದಿದ್ದಾನೆ.

ಇದನ್ನೂ ಓದಿ: ‘ಸಖತ್​’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ‌ ಸಿಂಪಲ್ ಸುನಿ‌

Follow us on

Click on your DTH Provider to Add TV9 Kannada