ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ, ಆತ್ಮವಿಶ್ವಾಸ ಕಮ್ಮಿಯಾಗಿ ಒಂಟಿತನ ಕಾಡಲಾರಂಭಿಸುತ್ತದೆ: ಡಾ ಸೌಜನ್ಯ ವಶಿಷ್ಠ

ನಾನು ಚೆನ್ನಾಗಿದ್ದೇನೆ, ಐ ಲವ್ ಯೂ ಅಂತ ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬಕ್ಕೆ ಹೇಳಬೇಕು. ನಮ್ಮ ರೂಪ, ಬುದ್ಧಿವಂತಿಕೆ-ಒಟ್ಟಿನಲ್ಲಿ ನಮ್ಮತನವನ್ನು ನಾವು ಅಂಗೀಕರಿಸಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

TV9kannada Web Team

| Edited By: shivaprasad.hs

Dec 17, 2021 | 7:14 AM

ಡಾ ಸೌಜನ್ಯ ವಶಿಷ್ಠ ಅವರು ಈ ಸಂಚಿಕೆಯಲ್ಲಿ ಒಂದು ಹೊಸ ವಿಷಯದ ಬಗ್ಗೆ ಮಾತಾಡಿದ್ದಾರೆ-ನಮ್ಮನ್ನು ಪ್ರೀತಿಸಿಕೊಳ್ಳುವುದು ಅಂದರೆ ಸೆಲ್ಫ್ ಲವ್. ಅಸಲಿಗೆ ನಾವು ಈ ಆಯಾಮದ ಬಗ್ಗೆ ಯೋಚಿಸಿಯೇ ಇಲ್ಲ. ಇದು ನಮ್ಮಲ್ಲಿ ಆಶ್ಚರ್ಯವನ್ನು ಹುಟ್ಟಿಸುವ ಸಂಗತಿ; ಯಾಕೆಂದರೆ, ಬದುಕಿನಲ್ಲಿ ನಾವು ತಂದೆ-ತಾಯಿಗಳನ್ನು, ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು ಪ್ರೀತಿಸುವುದು, ನಮ್ಮ ಮಕ್ಕಳನ್ನು ಪ್ರೀತಿಸುವುದು, ಅಣ್ಣ ತಮ್ಮಂದಿರನ್ನು, ಅಕ್ಕ-ತಂಗಿಯರನ್ನು, ಸ್ನೇಹಿತರನ್ನು ಪ್ರೀತಿಸುವುದನ್ನು ಮಾಡುತ್ತೇವೆ. ಆದರೆ ನಮ್ಮನ್ನು ನಾವು? ವಿಚಿತ್ರ ಅನಿಸುತ್ತಲ್ವಾ?

ಇದರರ್ಥವನ್ನು ಡಾ ಸೌಜನ್ಯ ವಿವರಿಸುತ್ತಾ ಹೋಗುತ್ತಾರೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗುತ್ತದೆ, ಕೀಳರಿಮೆ ಬಾಧಿಸುತ್ತದೆ. ನಮ್ಮ ರೂಪ, ಬುದ್ಧಿಮತ್ತೆ, ಪರ್ಸೊನಾಲಿಟಿ ಇವುಗಳಲ್ಲಿ ಯಾವುದರಲ್ಲೂ ನಾನು ಕಮ್ಮಿಯಿಲ್ಲ ಎಂದು ಕನ್ನಡಿ ಮುಂದೆ ನಮ್ಮಷ್ಟಕ್ಕೆ ನಾವು ಹೇಳಿಕೊಳ್ಳಬೇಕು. ನಾವು ನೋಡಲು ಹೇಗಾದರೂ ಇರಲಿ, ಸುಂದರವಾಗಿದ್ದೇನೆ ಅಂದುಕೊಳ್ಳಬೇಕು.

ನಾನು ಚೆನ್ನಾಗಿದ್ದೇನೆ, ಐ ಲವ್ ಯೂ ಅಂತ ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬಕ್ಕೆ ಹೇಳಬೇಕು. ನಮ್ಮ ರೂಪ, ಬುದ್ಧಿವಂತಿಕೆ-ಒಟ್ಟಿನಲ್ಲಿ ನಮ್ಮತನವನ್ನು ನಾವು ಅಂಗೀಕರಿಸಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ನಮ್ಮನ್ನು ನಾವು ಪ್ರೀತಿಸಿಕೊಳ್ಳಲಾರಂಭಿಸಿದರೆ ಒಂಟಿತನ ಕಾಡುವುದಿಲ್ಲ ಎಂದು ಸೌಜನ್ಯ ಹೇಳುತ್ತಾರೆ. ಪ್ರೀತಿಗಾಗಿ, ಸಂಗಾತಿಗಾಗಿ ಹಪಹಪಿಸುವುದು ಕಡಿಮೆಯಾಗುತ್ತದೆ.

ನಮ್ಮ ಬದುಕಿನ ಯಾವುದೇ ಆಯಾಮಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ದೇವರು ನಮ್ಮ ದೇಹವನ್ನು ನಮಗೆ ಬಳುವಳಿಯಾಗಿ ನೀಡಿದ್ದಾನೆ. ಹಾಗಾಗಿ ಅದನ್ನು ಕಡೆಗಣಿಸಬಾರದು.

ನಮಗೆ ಸಂತೋಷವೆನಿಸುವ, ಸಂತೋಷ ನೀಡುವ ಕೆಲಸಗಳನ್ನು ಮಾಡುತ್ತಾ ಸಂತೋಷವಾಗಿರಬೇಕು. ನಾವು ಸಂತೋಷವಾಗಿದ್ದರೆ ಅದನ್ನು ರೇಡಿಯೇಟ್ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ.

ಹಾಗಾಗಿ, ನಮ್ಮನ್ನು ನಾವು ಪ್ರೀತಿಸಿಕೊಳ್ಳಲೇಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:   ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್

Follow us on

Click on your DTH Provider to Add TV9 Kannada